ಭಯೋತ್ಪಾದನೆಯನ್ನು ಉತ್ತೇಜಿಸುವ ಟ್ವೀಟ್ಸ್ ಗಳ ಮೇಲೆ ಕ್ರಮ
ನವ ದೆಹಲಿ – ಟ್ವೀಟರ್ ಕಳೆದ ಒಂದು ತಿಂಗಳಿನಲ್ಲಿ 11 ಲಕ್ಷ 32 ಸಾವಿರ ಭಾರತೀಯ ಬಳಕೆದಾರರ ಖಾತೆಯನ್ನು ಸ್ಥಗಿತಗೊಳಿಸಿದೆ. ಈ ಖಾತೆಗಳಿಂದ ಭಯೋತ್ಪಾದನೆಗೆ ಉತ್ತೇಜಿಸುವ ಟ್ವೀಟ್ಸ್ ಗಳನ್ನು ಮಾಡಲಾಗುತ್ತಿತ್ತು ಎಂದು ಸಂಸ್ಥೆಯು ಹೇಳಿದೆ. ಟ್ವಿಟರ್ ಮಾಲೀಕ ಎಲಾನ್ ಮಸ್ಕ್ ಅವರು `ಯಾವುದೇ ಫೈಲ್, ಫೋಟೋ ಅಥವಾ ವಿಡಿಯೋಗಳನ್ನು ಪೋಸ್ಟ ಮಾಡುವಾಗ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದು ಬಳಕೆದಾರರಿಗೆ ಕರೆ ನೀಡಿದ್ದಾರೆ.
ದುರುಪಯೋಗದ ಕಾರಣ 263 ಖಾತೆಗಳನ್ನು ಸ್ಥಗಿತಗೊಳಿಸಿದ್ದು, ಅಸಹ್ಯಕರ ವರ್ತನೆಗಾಗಿ 84 ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಮಾನಹಾನಿಗೊಳಿಸಿರುವ ಪ್ರಕರಣದಲ್ಲಿ 51 ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ.