ಬಸ್ ಚಾಲಕ ಡ್ಯಾನಿಶ್ ಶೇಖ್ ಇಸ್ಮಾಯಿಲ್ ವಿರುದ್ಧ ಪ್ರಕರಣ ದಾಖಲು !

  • ಬುಲಢಾನಾದಲ್ಲಿ ಖಾಸಗಿ ಬಸ್ ಅಪಘಾತದ ಪ್ರಕರಣ

  • ಪೊಲೀಸರನ್ನು ದಾರಿ ತಪ್ಪಿಸಿ ಟೈರ್ ಒಡೆದಿರುವ ಬಗ್ಗೆ ಸುಳ್ಳು ಹೇಳಿದ ಆರೋಪ

ಬುಲಢಾನಾ – ಇಲ್ಲಿ ಸಂಭವಿಸಿದ ಖಾಸಗಿ ಬಸ್ ಅಪಘಾತದ ನಂತರ ಬಸ್ ಚಾಲಕ ಡ್ಯಾನಿಶ್ ಶೇಖ್ ಇಸ್ಮಾಯಿಲ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಪಘಾತದ ಬಗ್ಗೆ ಪೊಲೀಸರನ್ನು ದಾರಿ ತಪ್ಪಿಸುವ ಹಾಗೂ ಟೈರ್ ಸ್ಪೋಟವಾಗಿರುವ ಬಗ್ಗೆ ಸುಳ್ಳು ಹೇಳಿದ ಆರೋಪ ಮಾಡಲಾಗಿದೆ. ಪೊಲೀಸರು ಆತನನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. (ನರಹತ್ಯೆ ಪ್ರಕರಣದಲ್ಲಿ ಡ್ಯಾನಿಶ್‌ಗೆ ಕಠಿಣ ಶಿಕ್ಷೆಯಾಗಬೇಕು ! – ಸಂಪಾದಕರು) ಬುಲಢಾನಾದ ಸಮೃದ್ಧಿ ಹೆದ್ದಾರಿಯಲ್ಲಿ ಬಸ್‌ಗೆ ಬೆಂಕಿ ಹೊತ್ತಿಕೊಂಡಿದ್ದರಿಂದ 25 ಪ್ರಯಾಣಿಕರು ಸಾವನ್ನಪ್ಪಿದ್ದಾರೆ.

ಅಮರಾವತಿ ಪ್ರಾದೇಶಿಕ ಸಾರಿಗೆ ಕಚೇರಿ ಈ ಕುರಿತು ತನಿಖೆ ನಡೆಸಿದೆ. ಆಗ ಕಛೇರಿಯವರು ಟೈರ್ ಸ್ಪೋಟವಾಯಿತು ಎಂದು ಚಾಲಕನ ಹೇಳಿಕೆ ಸುಳ್ಳು ಎಂದು ಹೇಳಿದರು. ಘಟನಾ ಸ್ಥಳದಿಂದ ಯಾವುದೇ ರಬ್ಬರ್ ತುಂಡುಗಳು ಪತ್ತೆಯಾಗಿಲ್ಲ. ಜನರು ನೀಡಿರುವ ಮಾಹಿತಿ ಪ್ರಕಾರ ಮಾನವನ ತಪ್ಪಿನಿಂದ ಅಪಘಾತ ಸಂಭವಿಸಿದೆ. ಚಾಲಕ ನಿದ್ದೆಗೆ ಜಾರಿದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಈ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಸಂಪಾದಕೀಯ ನಿಲುವು

25 ಜನರನ್ನು ಕೊಂದ ನಂತರವೂ ಸುಳ್ಳು ಹೇಳಿದ ಡ್ಯಾನಿಶ್ ನ ಇಸ್ಲಾಂ ಮಾನಸಿಕತೆ ತಿಳಿಯಿರಿ !