ಮುಸ್ಲಿಂ ಬಹುಸಂಖ್ಯಾತವಿರುವ ಔರಂಗಾಬಾದ್ (ಬಿಹಾರ)ನ 3 ದೇವಸ್ಥಾನಗಳಲ್ಲಿ ಮಾಂಸದ ತುಂಡುಗಳನ್ನು ಎಸೆಯಲಾಯಿತು !

‘ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಶಾ ಮುರ್ದಾಬಾದ್’ ಎಂದು ಬರೆದ ಪೋಸ್ಟರ್ ಪತ್ತೆ !

ಔರಂಗಾಬಾದ್ (ಬಿಹಾರ) – ಜೂನ್ 1 ರಂದು ಮುಸ್ಲಿಂ ಬಹುಸಂಖ್ಯಾತ ಅಮಜರ್ ಷರೀಫ್ ಪ್ರದೇಶದಲ್ಲಿ 3 ಹಿಂದೂ ದೇವಾಲಯಗಳಲ್ಲಿ ಮಾಂಸದ ತುಂಡುಗಳನ್ನು ಎಸೆದಿರುವ ಅತಿರೇಕದ ಘಟನೆ ಬೆಳಕಿಗೆ ಬಂದಿದೆ. ಇಲ್ಲಿನ ಹಸಪುರಾ ಮಾರುಕಟ್ಟೆಯಲ್ಲಿರುವ ಹಿಂದೂಗಳ ಅಂಗಡಿಯೊಂದರಲ್ಲಿ ಪ್ರಚೋದನಕಾರಿ ಬರಹವಿರುವ ಪೋಸ್ಟರ್‌ ಕೂಡ ಅಂಟಿಸಲಾಗಿದೆ. ಇದರಲ್ಲಿ ‘ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ಬಜರಂಗದಳ ಮುರ್ದಾಬಾದ್’ ಎಂದು ಬರೆಯಲಾಗಿತ್ತು. ಈ ಪಠ್ಯದ ಕೆಳಗೆ ಅಹಲೆ ಕೊರೈಶ್ ಎಂಬ ಹೆಸರು ಇತ್ತು. ಈ ಘಟನೆಗಳ ಬಗ್ಗೆ ಸ್ಥಳೀಯ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಶೀಘ್ರ ಬಂಧಿಸುವುದಾಗಿ ಭರವಸೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಬಹುಸಂಖ್ಯಾತ ದೇಶದಲ್ಲಿ, ಅವರ ಧಾರ್ಮಿಕ ಸ್ಥಳಗಳನ್ನು ಅಪವಿತ್ರಗೊಳಿಸಲಾಗುತ್ತಿದೆ ಮತ್ತು ಅವರ ನಾಯಕರಿಗೆ ಬೆದರಿಕೆ ಹಾಕಲಾಗುತ್ತಿದೆ. ಈ ಪರಿಸ್ಥಿತಿ ಹಿಂದೂಗಳಿಗೆ ನಾಚಿಕೆಗೇಡು !