ಉತ್ತರ ಭಾರತದ ಕುಖ್ಯಾತ ಗೂಂಡಾಗಳು ಅಂಡಮಾನ-ನಿಕೋಬಾರನಲ್ಲಿರುವ `ಕಾಲಾಪಾನಿ’ ಜೈಲಿಗೆ ಸ್ಥಳಾಂತರದ ಸಾಧ್ಯತೆ !

ರಾಷ್ಟ್ರೀಯ ತನಿಖಾ ದಳ ಮತ್ತು ಕೇಂದ್ರ ಗೃಹಸಚಿವಾಲಯದ ನಡುವೆ ಚರ್ಚೆ

ನವದೆಹಲಿ – ರಾಷ್ಟ್ರೀಯ ತನಿಖಾ ದಳವು ಕೇಂದ್ರೀಯ ಗೃಹ ಸಚಿವಾಲಯಕ್ಕೆ ಉತ್ತರ ಭಾರತದ ಜೈಲಿನಲ್ಲಿರುವ 10 ರಿಂದ 12 ಕುಖ್ಯಾತ ಗೂಂಡಾಗಳನ್ನು ಅಂಡಮಾನ-ನಿಕೋಬಾರನ `ಕಾಲಾಪಾನಿ’ ಜೈಲಿಗೆ ಸ್ಥಳಾಂತರಿಸುವ ಪ್ರಸ್ತಾವನೆಯನ್ನು ಮಂಡಿಸಿದೆ. ಈ ಸಂದರ್ಭದಲ್ಲಿ ತನಿಖಾ ದಳ ಮತ್ತು ಸಚಿವಾಲಯದ ಅಧಿಕಾರಿಗಳ ಮಧ್ಯೆ ಇತ್ತೀಚೆಗೆ ಒಂದು ಸಭೆ ನಡೆದಿದೆ.

1. ರಾಷ್ಟ್ರೀಯ ತನಿಖಾ ದಳಕ್ಕೆ ದೆಹಲಿ, ಪಂಜಾಬ ಮತ್ತು ಹರಿಯಾಣಾ ಜೈಲಿನಲ್ಲಿರುವ ಗೂಂಡಾಗಳನ್ನು ಸ್ಥಳಾಂತರಗೊಳಿಸಬೇಕಾಗಿದೆ. ಈ ಗೂಂಡಾಗಳು ಜೈಲಿನಲ್ಲಿದ್ದರೂ ಅಪರಾಧಿಗಳ ಸಂಘಟನೆಯನ್ನು ಮಾಡುತ್ತಿದ್ದಾರೆ. ತನಿಖಾ ದಳಕ್ಕೆ ಅವರ ಈ ಸಂಘಟನೆಯನ್ನು ನಾಶಗೊಳಿಸಬೇಕಾಗಿದೆ.

2. ಮೂಲಗಳಿಂದ ಸಿಕ್ಕ ಮಾಹಿತಿಯನುಸಾರ ಆಸ್ಸಾಂನ ದಿಬ್ರೂಗಡ ಕೇಂದ್ರೀಯ ಜೈಲಿನಲ್ಲೂ ಈ ಗೂಂಡಾಗಳನ್ನು ಕಳುಹಿಸಲು ಸರಕಾರ ವಿಚಾರ ಮಾಡುತ್ತಿದೆ. ಸಧ್ಯಕ್ಕೆ ಅಲ್ಲಿ ಖಲಿಸ್ತಾನಿ ಭಯೋತ್ಪಾದಕ ಸಂಘಟನೆ `ವಾರಿಸ ಪಂಜಾಬ ದೆ’ ಮುಖಂಡ ಅಮೃತಪಾಲ ಸಿಂಹ ಮತ್ತು ಅವನ ಸಹಚರರು ಬಂಧನದಲ್ಲಿದ್ದಾರೆ.

3. ಈ ಮೊದಲು ದಕ್ಷಿಣ ಭಾರತದ ರಾಜ್ಯಗಳ ಜೈಲುಗಳಲ್ಲಿ ಗೂಂಡಾಗಳನ್ನು ಕಳಸುವಂತೆ ದಳಗಳ ಬೇಡಿಕೆಯಾಗಿತ್ತು; ಆದರೆ ಅದಕ್ಕಾಗಿ ಅಲ್ಲಿಯ ರಾಜ್ಯಸರಕಾರಗಳ ಅನುಮತಿ ಪಡೆಯಬೇಕಾಗುತ್ತದೆ. ಅಂಡ,ಅನ-ನಿಕೊಬಾರ ಕೇಂದ್ರಾಡಳಿತ ಪ್ರದೇಶ ಆಗಿದ್ದರಿಂದ ಅಲ್ಲಿಗೆ ಅನುಮತಿ ಪಡೆಯದೇ ನೇರ ಗೃಹಸಚಿವಾಲಯವು ನಿರ್ಧಾರ ಕೈಗೊಳ್ಳಬಹುದು.