ಬ್ರುಸೆಲ್ಸ್ (ಬೆಲ್ಜಿಯಂ) – ಯುರೋಪ್ ನ ಬೆಲ್ಜಿಯಂ ದೇಶದ ಅನೇಕ ಚರ್ಚಗಳು ಈಗ ಉಪಹಾರಗೃಹ, ನೈಟ ಕ್ಲಬ್, ಕೆಫ್ಎ, ಮಾಲ್ ಮುಂತಾದವುಗಳಲ್ಲಿ ರೂಪಾಂತರಗೊಳ್ಳುತ್ತಿವೆ. ಇಲ್ಲಿಯ ಫ್ಲಾಸಿಸ್ಕನ್ ಚರ್ಚ್ ಈಗ ಒಂದು 5 ಸ್ಟಾರ್ ಹೋಟೆಲ್ ಆಗಿದೆ. ಕ್ರೈಸ್ತ ಧರ್ಮದವರ ಸಂಖ್ಯೆ ಶೇ. 55 ರಷ್ಟು ಇಳಿದಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲಿಯೂ ಕೇವಲ ಶೇ. 10 ರಷ್ಟು ಕ್ರೈಸ್ತರು ಚರ್ಚ್ ಗಳಿಗೆ ಹೋಗುತ್ತಾರೆ. ದೇಶದಲ್ಲಿ ಶೇ. 83 ರಷ್ಟು ಕ್ರೈಸ್ತರು ಇದ್ದಾಗ ದೇಶದ 300 ರಷ್ಟು ಪ್ರದೇಶಗಳಲ್ಲಿ ಅನೇಕ ಚರ್ಚ್ ಗಳಿದ್ದವು.
कभी क्रिश्चियनिटी का बोलबाला, अब ईसायत को मानने वाले 55% ही बचे: होटल, नाइट क्लब और कैफे में बदल रहे बेल्जियम के चर्च#Belgiumhttps://t.co/PRWlDabzPn
— ऑपइंडिया (@OpIndia_in) July 1, 2023
ಕ್ರೈಸ್ತರಲ್ಲಿ ಧಾರ್ಮಿಕ ಶ್ರದ್ಧೆ ಕಡಿಮೆಯಾಗುತ್ತಿರುವುದರಿಂದ ಅವರು ಚರ್ಚ್ ಗಳಿಗೆ ಹೋಗುವುದನ್ನು ನಿಲ್ಲಿಸಿದ್ದಾರೆ. ಅಲ್ಲದೇ ದೊಡ್ಡ ದೊಡ್ಡ ಚರ್ಚ್ ಗಳ ನಿರ್ವಹಣೆಯೂ ಕಠಿಣವಾಗತೊಡಗಿದೆ. ಇದರಿಂದ ಅವುಗಳು ಉಪಾಹಾರಗೃಹ, ಮಾಲ್ ಮುಂತಾದವುಗಳಲ್ಲಿ ರೂಪಾಂತರ ಆಗುತ್ತಿವೆ. ಆದರೂ ಕೆಲವು ಜನರು ಇದನ್ನು ವಿರೋಧಿಸುತ್ತಿವೆ.
ಸಂಪಾದಕೀಯ ನಿಲುವುಜಗತ್ತಿನ ಅನೇಕ ಕ್ರೈಸ್ತ ದೇಶಗಳಲ್ಲಿ ಕ್ರೈಸ್ತರಲ್ಲಿ ಧರ್ಮದ ಮೇಲಿನ ಶ್ರದ್ಧೆಯು ಕ್ಷೀಣಿಸುತ್ತಿರುವುದರಿಂದ ಚರ್ಚ್ ಗಳು ಬಿಕೋ ಎನ್ನುತ್ತಿದ್ದು, ಆದರೆ ಭಾರತದಲ್ಲಿ ಕ್ರೈಸ್ತ ಮಿಶನರಿಗಳು ಬಡ ಹಿಂದೂಗಳಿಗೆ ಆಮಿಷ ತೋರಿಸಿ ಅವರನ್ನು ಕ್ರೈಸ್ತರನ್ನಾಗಿ ಪರಿವರ್ತಿಸುತ್ತಿದ್ದಾರೆ ! |