ಕೇಂದ್ರ ಸರಕಾರಕ್ಕೆ ಟ್ವೀಟ್ಸ್ ಗಳನ್ನು ಮತ್ತು ಖಾತೆಗಳನ್ನು ನಿಷೇಧಿಸುವ ಅಧಿಕಾರ ಇದೆ !

  • ಕೇಂದ್ರ ಸರಕಾರದ ವಿರುದ್ಧ ಟ್ವಿಟರ್ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾ !

  • ಟ್ವಿಟರ್‌ಗೆ ೫೦ ಲಕ್ಷ ರೂಪಾಯಿ ದಂಡ !

ಬೆಂಗಳೂರು – ಕೇಂದ್ರ ಸರಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ಟ್ವಿಟರ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಕೇಂದ್ರ ಸರಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಟ್ವಿಟರ್‌ನಲ್ಲಿನ ಆಕ್ಷೇಪಾರ್ಹ ವಿಷಯವನ್ನು ಅಳಿಸಲು ಮತ್ತು ಸಂಬಂಧಪಟ್ಟ ಖಾತೆಗಳನ್ನು ನಿಷೇಧಿಸುವಂತೆ ಟ್ವಿಟರ್‌ಗೆ ಸೂಚಿಸಿತ್ತು. ಈ ಆದೇಶದ ವಿರುದ್ಧ ಟ್ವಿಟರ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಟ್ವಿಟರ್ ಮಾಡಿರುವ ಅರ್ಜಿಗೆ ಯಾವುದೇ ಆಧಾರವಿಲ್ಲ ಮತ್ತು ಟ್ವೀಟ್‌ಗಳನ್ನು ನಿರ್ಬಂಧಿಸುವ ಮತ್ತು ಖಾತೆಗಳನ್ನು ಬ್ಲಾಕ್ ಮಾಡುವ ಹಕ್ಕು ಕೇಂದ್ರ ಸರಕಾರಕ್ಕೆ ಇದೆ ಎಂದು ನ್ಯಾಯಾಲಯ ಹೇಳಿದೆ. ಈ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಖಂಡಪೀಠವು ಟ್ವಿಟರ್‌ ಗೆ ೫೦ ಲಕ್ಷ ರೂಪಾಯಿಗಳ ದಂಡ ವಿಧಿಸಿದೆ. ೪೫ ದಿನದೊಳಗೆ ಪಾವತಿಸುವಂತೆ ಆದೇಶಿಸಲಾಗಿದ್ದು, ಕಾಲಮಿತಿಯೊಳಗೆ ಮೊತ್ತ ಪಾವತಿಸದಿದ್ದರೆ ಟ್ವಿಟರ್‌ಗೆ ದಿನಕ್ಕೆ ೫ ಸಾವಿರ ರೂಪಾಯಿ ಹೆಚ್ಚುವರಿ ದಂಡ ಪಾವತಿಸಬೇಕಾಗುತ್ತದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

‘ಪ್ರಜಾಪ್ರಭುತ್ವ ವ್ಯವಸ್ಥೆಗಿಂತ ನಾವು ದೊಡ್ಡವರು’ ಎಂದು ಹುಂಬತನವಿರುವ ಟ್ವಿಟರ್‌ಗೆ ಕೋರ್ಟ್‌ನಿಂದ ಕಪಾಳಮೋಕ್ಷ !