-
30 ನಿಮಿಷಗಳ ನಮಾಜ್ ದಿಂದ ಯಾವುದೇ ಹಾನಿಯಾಗುವುದಿಲ್ಲ !
-
ಹಿಂದೂಗಳು ಈ ವಿಷಯದಲ್ಲಿ ಸುಪ್ರೀಂ ಕೋರ್ಟಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಭಕ್ತರಿಗೆ ಅನಿಸುತ್ತದೆ !
ಚೆನ್ನೈ (ತಮಿಳುನಾಡು) – ಮದ್ರಾಸ ಉಚ್ಚ ನ್ಯಾಯಾಲಯವು ರಾಜ್ಯದ ಮಧುರೈ ಜಿಲ್ಲೆಯ ತಿರುಪ್ಪಾರನ್ಕುಂದ್ರಮ್ ಪರ್ವತದ ಹತ್ತಿರದ ಕಾಶಿ ವಿಶ್ವಂಥರ ದೇವಸ್ಥಾನಕ್ಕೆ ಹೋಗುವ ನೆಲ್ಲಿತೊಪ್ಪು ಮಾರ್ಗದಲ್ಲಿ ನಡೆಯುವ ನಮಾಜಅನ್ನು ನಿಲ್ಲಿಸಲು ಆದೇಶ ನೀಡಲು ನಿರಾಕರಿಸಿದೆ. ’30 ನಿಮಿಷಗಳ ವರೆಗೆ ನಡೆಯುವ ನಮಾಜದಿಂದ ಯಾವುದೇ ಹಾನಿಯಾಗುವುದಿಲ್ಲ, ಹಾಗೆಯೇ ಯಾವುದೇ ವ್ಯಕ್ತಿಯ ಮೇಲೆ ಅದರ ಪರಿಣಾಮ ಬೀರುವುದಿಲ್ಲ’, ಎಂದು ನ್ಯಾಯಾಲಯವು ಈ ಸಂದರ್ಭದಲ್ಲಿ ಟಿಪ್ಪಣೆ ಮಾಡಿದೆ. ಈ ಸಂದರ್ಭದಲ್ಲಿ ನ್ಯಾಯಾಲಯವು ರಾಜ್ಯದ `ಹಿಂದೂ ಧಾರ್ಮಿಕ ಮತ್ತು ದತ್ತಿ ಇಲಾಖೆ’ಗೆ ಈ ಸಂದರ್ಭದಲ್ಲಿ ಮುಂದಿನ 4 ವಾರಗಳಲ್ಲಿ ಪ್ರತಿಜ್ಞಾಪತ್ರವನ್ನು ಸಲ್ಲಿಸುವಂತೆ ಆದೇಶಿಸಿದೆ.
`ಅಖಿಲ ಭಾರತ ಹನುಮಾನ ಸೇನೆ’ಯ ರಾಜ್ಯ ಕಾರ್ಯದರ್ಶಿ ರಾಮಲಿಂಗಮ್ ಇವರು ಈ ಅರ್ಜಿಯನ್ನು ದಾಖಲಿಸಿದ್ದರು. ರಾಮಲಿಂಗಮ್ ಇವರು ಈ ಅರ್ಜಿಯಲ್ಲಿ, ಯಾವ ಭಕ್ತ ತಿರುಪ್ಪರಕುಂದ್ರಮ್ನ ಕಾಶಿ ವಿಶ್ವಂಥರ ದೇವಸ್ಥಾನಕ್ಕೆ ಪ್ರಾರ್ಥನೆಗಾಗಿ ಬರುತ್ತಾರೆಯೋ ಅವರು ನೆಲ್ಲಿಥೊಪ್ಪು ಇಲ್ಲಿ ವಿಶ್ರಾಂತಿ ಪಡೆಯುತ್ತಾರೆ, ಭೋಜನ ಮಾಡುತ್ತಾರೆ. ಅದೇ ಸಮಯದಲ್ಲಿ ಸಿಕಂದರ ಬಧುಶಾ ಧಾರಗಾ ಪಂಗಡದ ಸದಸ್ಯರು ಇಲ್ಲಿ ನಮಾಜ ಮಾಡುತ್ತಾರೆ. ಈ ಸದಸ್ಯರು ಮೊದಲು ಪಲ್ಲಿವಾಸಲ ಮಸೀದಿಯಲ್ಲಿ ನಮಾಜ ಮಾಡುತ್ತಿದ್ದರು. ಈ ಹಿಂದೆ ಅವರು ನೆಲ್ಲಿಥೊಪ್ಪುವಿನಲ್ಲಿ ಈ ಮೊದಲು ಎಂದಿಗೂ ನಮಾಜ ಮಾಡಿರಲಿಲ್ಲ. ಅವರಿಗೆ ನಮಾಜ ಮಾಡಲು ಇಲ್ಲಿ ಇನ್ನಿತರೆ ಭೂಮಿಯೂ ಇದೆ. ಈ ಸದಸ್ಯರು ಜನರಿಗೆ ತೊಂದರೆ ನೀಡುತ್ತಿದ್ದಾರೆ. ನಮಾಜ ಮಾಡಿದ ಬಳಿಕ ಅವರು ಪ್ಲಾಸ್ಟಿಕ್ ಕಸವನ್ನೂ ಅಲ್ಲಿಯೇ ಎಸೆಯುತ್ತಾರೆ. ಇದರಿಂದ ಅಲ್ಲಿ ಪರಿಸರ ಮಾಲಿನ್ಯವಾಗಿದೆ. ಆ ಪಂಗಡದ ಸದಸ್ಯರು, ತಿರುಪ್ಪರಕುಂದ್ರಮ್ ನ ಅರುಲಮಿಘು ಸುಬ್ರಹ್ಮಣ್ಯಮ್ ಸ್ವಾಮಿ ತಿರುಕೋಯಿಲ್ ಪರ್ವತಕ್ಕೆ `ಸಿಕಂದರ ಪರ್ವತ’ವೆಂದು ನಂಬುತ್ತಾರೆ. ಈ ಕಾರಣದಿಂದ ಅವರು ಈ ಭೂಮಿಯ ಮೇಲೆ ಅತಿಕ್ರಮಣ ನಡೆಸಿ ಕಾನೂನು ಮತ್ತು ಸುವ್ಯವಸ್ಥೆಗೆ ಅಡಚಣೆಯನ್ನುಂಟು ಮಾಡುತ್ತಿದ್ದಾರೆ ಎಂದು ಹೇಳಿದೆ.
“No harm in 30 mins prayer”,
The Madurai bench of Madras High Court has refused to stay namaz and other Islamic activities in Thiruparankundram hill where Sri Subramanya Swamy temple is located.https://t.co/oFfF6lAwbi
— Megh Updates 🚨™ (@MeghUpdates) June 30, 2023
ಸಂಪಾದಕರ ನಿಲುವುಹಿಂದೂಗಳ ದೇವಸ್ಥಾನದ ಮಾರ್ಗದಲ್ಲಿ ಯಾರಾದರೂ ಉದ್ದೇಶಪೂರ್ವಕವಾಗಿ ನಮಾಜ್ ಮಾಡುತ್ತಾರೆಯೇ ? ಇದರ ಬಗ್ಗೆ ರಾಜ್ಯದ ನಾಸ್ತಿಕವಾದಿ ದ್ರಮುಕ ಸರಕಾರ ತನಿಖೆ ನಡೆಸುವುದಿಲ್ಲ ಎನ್ನುವದೂ ಅಷ್ಟೇ ಸತ್ಯವಾಗಿದೆ ! ಇನ್ನೊಂದೆಡೆ ಹಿಂದೂಗಳು ಇತರೆ ಧರ್ಮೀಯರ ಧಾರ್ಮಿಕ ಸ್ಥಳದ ಮಾರ್ಗದಲ್ಲಿ ಧಾರ್ಮಿಕ ಮೆರವಣಿಗೆ ನಡೆಸಲು ಪ್ರಯತ್ನಿಸಿದರೆ, ಪೊಲೀಸರು ಅದಕ್ಕೆ ನಿರಾಕರಿಸುತ್ತಾರೆ ಎನ್ನುವುದನ್ನು ಗಮನಿಸಬೇಕಾಗಿದೆ ! (ದ್ರಮುಕ ಎಂದರೆ ದ್ರವಿಡ ಮುನ್ನೇತ್ರ ಕಳಘಂ – ದ್ರವಿಡ ಪ್ರಗತಿ ಸಂಘ) |