ಪ್ರಮೋದ್ ಮುತಾಲಿಕ್ ಅವರು ತಥಾಕಥಿತ ಆಕ್ಷೇಪಾರ್ಹ ಭಾಷಣದ ವಿರುದ್ಧ ದಾಖಲಾಗಿದ್ದ ಮೊಕದ್ದಮೆ ಖುಲಾಸೆ!

  • 2017 ರ ಪ್ರಕರಣದ ಕುರಿತು ಕರ್ನಾಟಕ ನ್ಯಾಯಾಲಯವು ನೀಡಿದ ತೀರ್ಪು

  • ಪೊಲೀಸ್ ಅಧಿಕಾರಿಯನ್ನು ಹೊರತುಪಡಿಸಿ, ಬೇರೆ ಯಾರೂ ಸ್ವತಂತ್ರ ಸಾಕ್ಷಿಗಳಿಲ್ಲ ಮತ್ತು ಆಡಿಯೋ ರೆಕಾರ್ಡಿಂಗ್‌ನಲ್ಲಿ ಯಾವುದೇ ಆಕ್ಷೇಪಾರ್ಹ ಹೇಳಿಕೆ ಕಂಡುಬಂದಿಲ್ಲದ ಕಾರಣ ಮೊಕದ್ದಮೆಯನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.

ಪ್ರಮೋದ್ ಮುತಾಲಿಕ್

ಬೆಂಗಳೂರು – ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಮತ್ತು ಪ್ರಖರ ಹಿಂದುತ್ವನಿಷ್ಠ ಶ್ರೀ ಪ್ರಮೋದ್ ಮುತಾಲಿಕ್ ಅವರು 2017ರಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ. ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀ. ಮುತಾಲಿಕ್ ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ್ದರು. ಆಗ ಸ್ಥಳದಲ್ಲಿದ್ದ ಪೊಲೀಸ್ಅಧಿಕಾರಿಯು ಮುತಾಲಿಕ್ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಿದ್ದರು.

1. ಪೊಲೀಸರು ದಾಖಲಿಸಿರುವ ಅಪರಾಧದ ಪ್ರಕಾರ ಶ್ರೀ. ಮುತಾಲಿಕ್ ಅವರು ಗೋವುಗಳೊಂದಿಗೆ ಹಿಂದೂಗಳು ಮತ್ತು ಮುಸ್ಲಿಮರ ನಡುವಿನ ವರ್ತನೆಯಲ್ಲಿರುವ ವ್ಯತ್ಯಾಸದ ಬಗ್ಗೆ ಪ್ರತಿಕ್ರಿಯಿಸಿದರು ಮತ್ತು ಗೋಹತ್ಯೆಗಾರರ ಕೈಗಳನ್ನು ಕತ್ತರಿಸಬೇಕೆಂದು ಕರೆ ನೀಡಿದ್ದರು.

2. ಈ ಕುರಿತು ಪೊಲೀಸ್ ಬಿ.ಡಿ.ವಿ. ಸೆಕ್ಷನ್ 153 ಎ (ಎರಡು ಗುಂಪುಗಳ ನಡುವೆ ದ್ವೇಷವನ್ನು ಪ್ರಚೋದಿಸುವ ಪ್ರಯತ್ನ) ಮತ್ತು 295 ಎ (ಧಾರ್ಮಿಕ ಭಾವನೆಗಳು ಮತ್ತು ಧರ್ಮವನ್ನು ಅಗೌರವಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

3. ಶ್ರೀ. ಪ್ರಕರಣವನ್ನು ತೆರವುಗೊಳಿಸುವಂತೆ ಕೋರಿ ಮುತಾಲಿಕ್ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ತಮ್ಮ ವಿರುದ್ಧ ದಾಖಲಾಗಿರುವ ಅಪರಾಧವು ಕ್ರಿಮಿನಲ್ ಪ್ರಕ್ರಿಯೆ ಸಂಹಿತೆಯ ಸೆಕ್ಷನ್ 196 (ರಾಜ್ಯದ ವಿರುದ್ಧದ ಅಪರಾಧಗಳಿಗೆ ಕಾನೂನು ಕ್ರಮ) ಅಡಿಯಲ್ಲಿ ಬರುವುದಿಲ್ಲ ಅಲ್ಲದೆ, ಭಾಷಣದ ವೇಳೆ ಪೊಲೀಸ್ ಅಧಿಕಾರಿಯ ಸಾಕ್ಷ್ಯವನ್ನು ಮಾತ್ರ ದಾಖಲಿಸಲಾಗಿದೆ. ಸ್ವತಂತ್ರ ಸಾಕ್ಷಿದಾರರ ಹೇಳಿಕೆಯನ್ನು ದಾಖಲಿಸಿಲ್ಲ ಎಂದು ಅವರು ಹೇಳಿದ್ದರು.

4.ಈ ಸಂದರ್ಭದಲ್ಲಿ ದಾಖಲಿಸಿರುವ ಆರೋಪ ಪತ್ರವನ್ನು ಅಧ್ಯಯನ ನಡೆಸಿ ಉಚ್ಚ ನ್ಯಾಯಾಲಯ ವು, ಸಂಬಂಧಿಸಿದ ಕಾರ್ಯಕ್ರಮದ ಧ್ವನಿ ಚಿತ್ರೀಕರಣ ನೋಡಿದರೆ ಶ್ರೀ ಮುತಾಲಿಕ್ ಮಾಡಿರುವ ಭಾಷಣದಲ್ಲಿ ಯಾವುದೇ ಆಕ್ಷೇಪಾರ್ಹ ಹೇಳಿಕೆ ಕಂಡು ಬಂದಿಲ್ಲ. ಹಾಗೆಯೇ ಸರಕಾರದ ಅನುಮತಿ ಇಲ್ಲದೇ ಭಾ.ದಂ.ವಿ.143ಅ ಮತ್ತು 295 ಅ ಅಡಿಯಲ್ಲಿ ಅಪರಾಧ ದಾಖಲಿಸಲು ಸಾಧ್ಯವಿಲ್ಲ ಎಂದು ತಿಳಿಸುತ್ತಾ ನ್ಯಾಯಾಲಯವು ಶ್ರೀ ಮುತಾಲಿಕ್ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಖುಲಾಸೆಗೊಳಿಸಿ ಆದೇಶವನ್ನು ನೀಡಿತು.

ಸಂಪಾದಕೀಯ ನಿಲುವು

  • ಮೊಕದ್ದಮೆಯನ್ನುನ್ಯಾಯಾಲಯಖುಲಾಸೆಗೊಳಿಸಿದೆ ಅಂದರೆ ದಾಖಲಿಸಿದ ಅಪರಾಧವೆ ಆಯೋಗ್ಯವಾಗಿತ್ತು ಎಂದರ್ಥವಾಯಿತು. ಆದ್ದರಿಂದ ಅಪರಾಧವನ್ನು ತೆರವುಗೊಳಿಸುವುದರೊಂದಿಗೆ ವರದಿ ಮಾಡುವ ಪೊಲೀಸರ ವಿರುದ್ಧ ನ್ಯಾಯಾಲಯವು ಕ್ರಮ ಕೈಗೊಳ್ಳಬೇಕು ಎಂದು ದೇಶಭಕ್ತರಿಗೆ ಅನಿಸುತ್ತದೆ!
  • ಪೊಲೀಸರು ಕೈಗೊಂಡ ಕ್ರಮವನ್ನು ಗಮನಿದರೆ, ದ್ವೇಷದ ಕಾರಣದಿಂದ ಶ್ರೀ. ಮುತಾಲಿಕ್ ವಿರುದ್ಧ ಕ್ರಮಕೈಗೊಂಡಿದ್ದಾರೆ ಎಂಬುದು ಗಮನಕ್ಕೆ ಬರುತ್ತದೆ. ಇಂತಹ ಪೊಲೀಸರು ಅಮಾಯಕ ಹಿಂದೂಗಳನ್ನು ಮತಾಂಧರಿಂದ ಹೇಗೆ ರಕ್ಷಿಸಬಲ್ಲರು ?