ಎನ್.ಐ.ಎ. ಯಿಂದ ಜಿಹಾದಿ ಆರೋಪಿಯ ಮನೆಯ ಪರಿಶೀಲನೆ !

ಭಾಜಪ ಯುವ ಮೋರ್ಚಾದ ನಾಯಕ ಪ್ರವೀಣ ನೆಟ್ಟಾರು ಇವರ ಹತ್ಯೆಯ ಪ್ರಕರಣ

ಬೆಂಗಳೂರು – ಭಾಜಪ ಯುವ ಮೋರ್ಚಾದ ನಾಯಕ ಪ್ರವೀಣ ನೆಟ್ಟಾರು ಇವರ ಹತ್ಯೆಯ ಪ್ರಕರಣದಲ್ಲಿ ರಾಷ್ಟ್ರೀಯ ಸಮೀಕ್ಷಾ ದಳವು (ಎನ್.ಐ.ಎ ಯಿಂದ) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿ.ಎಫ್.ಐ. ನ) ೩ ಕಾರ್ಯಕರ್ತರ ಮನೆಯ ಪರಿಶೀಲನೆ ನಡೆಸಲಾಯಿತು. ಕಳೆದ ವರ್ಷ ಜುಲೈ ೨೨ ರಂದು ನೆಟ್ಟಾರು ಇವರ ಹತ್ಯೆ ಮಾಡಲಾಗಿತ್ತು.

ಕೊಡಗು ಜಿಲ್ಲೆಯ ಅಬ್ದುಲ್ ನಾಶೀರ್ ಮತ್ತು ಅಬ್ದುಲ್ ರಹಮಾನ್ ದಕ್ಷಿಣ ಕನ್ನಡ ಜಿಲ್ಲೆಯ ನೌಶಾದ್ ನ ಮನೆಯ ಪರಿಶೀಲನೆ ನಡೆಸಲಾಯಿತು. ಅಲ್ಲಿಂದ ಕೆಲವು ಸಾಹಿತ್ಯ ವಶಪಡಿಸಿಕೊಳ್ಳಲಾಗಿದೆ. ಈ ಹತ್ಯೆಯ ಪ್ರಕರಣದಲ್ಲಿ ೨೦ ಜನರನ್ನು ಆರೋಪಿ ಎಂದು ಖಚಿತಪಡಿಸಲಾಗಿದೆ. ಅವರ ಮೇಲೆ ಆರೋಪ ಪತ್ರ ಕೂಡ ದಾಖಲಿಸಲಾಗಿದೆ. ಇದರಲ್ಲಿ, ನೆಟ್ಟಾರು ಇವರ ಹತ್ಯೆ ೨೦೪೭ ರಲ್ಲಿ ಭಾರತವನ್ನು ಇಸ್ಲಾಮಿ ದೇಶ ಮಾಡುವ ಷಡ್ಯಂತ್ರದ ಒಂದು ಭಾಗವಾಗಿದೆ. ಅದಕ್ಕಾಗಿ ಆರೋಪಿಗಳಿಗೆ ಪ್ರಶಿಕ್ಷಣ ನೀಡಲಾಗಿತ್ತು ಎಂದು ಹೇಳಿದೆ.