ಏಕರೂಪ ನಾಗರಿಕ ಕಾನೂನನ್ನು ಮೊದಲು ‘ಹಿಂದೂ ಧರ್ಮಕ್ಕೆ ಜಾರಿಗೊಳಿಸಬೇಕಂತೆ !’ – ಡಿಎಂಕೆ ನಾಯಕ ಟಿ.ಕೆ.ಎಸ್. ಎಲಂಗೋವನ್

ಡಿಎಂಕೆ ನಾಯಕ ಟಿ.ಕೆ.ಎಸ್. ಎಲಂಗೋವನ್ ಅವರ ಹಿಂದೂದ್ರೋಹಿ ಬೇಡಿಕೆ !

(ಡಿಎಂಕೆ ಎಂದರೆ ದ್ರಾವಿಡ ಮುನ್ನೇತ್ರ ಕಳಘಂ)

ಚೆನ್ನೈ (ತಮಿಳುನಾಡು) – ಏಕರೂಪ ನಾಗರಿಕ ಕಾನೂನನ್ನು ಮೊದಲು ಹಿಂದೂ ಧರ್ಮಕ್ಕೆ ಜಾರಿಗೊಳಿಸಬೇಕು ಎಂದು ದ್ರಾವಿಡ ಮುನ್ನೇತ್ರ ಕಳಘಂ ಪಕ್ಷದ ನಾಯಕ ಟಿ.ಕೆ.ಎಸ್. ಎಲಂಗೋವನ್ ಅವರು ಆಗ್ರಹಿಸಿದ್ದಾರೆ. ಏಕರೂಪ ನಾಗರಿಕ ಕಾಯ್ದೆಗೆ ಪ್ರಧಾನಿ ಮೋದಿ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಅವರು ಮಾತನಾಡಿದರು.

ಎಲಂಗೋವನ್ ಮಾತನ್ನು ಮುಂದುವರೆಸುತ್ತಾ, ದೇಶದ ಯಾವುದೇ ದೇವಸ್ಥಾನದಲ್ಲಿ ಪರಿಶಿಷ್ಟ ಜಾತಿ, ಪಂಗಡ ಸೇರಿದಂತೆ ಪ್ರತಿಯೊಬ್ಬರಿಗೂ ಪೂಜೆ ಮಾಡುವ ಅವಕಾಶ ನೀಡಬೇಕು. ಸಂವಿಧಾನವು ಪ್ರತಿಯೊಂದು ಧರ್ಮಕ್ಕೆ ರಕ್ಷಣೆ ನೀಡಿದೆ. ಹಾಗಾಗಿ ಏಕರೂಪದ ನಾಗರಿಕ ಕಾನೂನು ನಮಗೆ ಬೇಡ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ತಮ್ಮನ್ನು ನಾಸ್ತಿಕರೆಂದು ಹೇಳಿಕೊಳ್ಳುವ ಡಿಎಂಕೆಯವರಿಂದ ಇದಕ್ಕೂ ವಿಭಿನ್ನವಾಗಿ ಇನ್ನೇನು ಅಪೇಕ್ಷಿಸಬಹುದು ?

ಕೇಂದ್ರ ಸರಕಾರ ನಾಳೆ ಏಕರೂಪ ನಾಗರಿಕ ಕಾನೂನನ್ನು ಜಾರಿಗೆ ತಂದರೂ, ಡಿಎಂಕೆ ಸರಕಾರವು ಕಾರ್ಯರೂಪಕ್ಕೆ ತರುವ ಸಾಧ್ಯತೆ ಕಡಿಮೆ ಇದೆ. ಇಂತಹ ಸಮಯದಲ್ಲಿ ಕೇಂದ್ರ ಸರಕಾರ ಕಠಿಣ ನಿರ್ಧಾರ ಕೈಗೊಂಡು ಡಿಎಂಕೆ ಸರಕಾರವನ್ನು ತೆಗೆದು ಹಾಕಿ ತಮಿಳುನಾಡಿನಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು, ಎಂದು ರಾಷ್ಟ್ರಾಭಿಮಾನಿಗಳಿಗೆ ಅನಿಸುತ್ತದೆ !