ಪ್ರಸಾರ ಮಾಧ್ಯಮಗಳು ನ್ಯಾಯಾಲಯದ ಪ್ರಕರಣಗಳ ಬಗ್ಗೆ ವಾರ್ತೆ ಮಾಡುವಾಗ ಎಚ್ಚರಿಕೆ ವಹಿಸಬೇಕು ! – ಕೇರಳ ಉಚ್ಚ ನ್ಯಾಯಾಲಯ

ತಿರುವನಂತಪುರಂ (ಕೇರಳ) – ಕೇರಳ ಉಚ್ಚ ನ್ಯಾಯಾಲಯವು ಇತ್ತಿಚೆಗೆ ಪ್ರಸಾರ ಮಾಧ್ಯಮಗಳಿಗೆ ನ್ಯಾಯಾಲಯದ ಪ್ರಕರಣದ ವಾರ್ತೆ ಮಾಡುವಾಗ ಎಚ್ಚರಿಕೆ ವಹಿಸುವಂತೆ ಕರೆ ನೀಡಿದೆ. ನ್ಯಾಯಾಲಯದಲ್ಲಿನ ಮೊಕದ್ದಮೆಯ ವಿಚಾರಣೆಯ ಸಮಯದಲ್ಲಿ ನ್ಯಾಯಮೂರ್ತಿಗಳ ಮೌಖಿಕ ಹೇಳಿಕೆಯ ಆಧಾರದಲ್ಲಿ ವಾರ್ತೆ ನೀಡುವಾಗ ಪ್ರಸಾರ ಮಾಧ್ಯಮಗಳು ವಾದಿಗಳ ಆಗುವ ಹಾನಿ ಗಮನಕ್ಕೆ ತೆಗೆದುಕೊಳ್ಳಬೇಕು, ಎಂದು ನ್ಯಾಯಮೂರ್ತಿ ಎ..ಕೆ ಜೈಶಂಕರನ್ ನಂಬಿಯಾರ ಮತ್ತು ನ್ಯಾಯಮೂರ್ತಿ ಮಹಮ್ಮದ್ ನಿಯಾಸ್ ಇವರ ಖಂಡಪೀಠ ಹೇಳಿದೆ. ಪ್ರಿಯಾ ವರ್ಗಿಸ್ ಅವರು ನ್ಯಾಯಾಧೀಶರ ಆದೇಶದ ವಿರುದ್ಧ ದಾಖಲಿಸಿರುವ ಅರ್ಜಿಯ ಕುರಿತಾದ ವಿಚಾರಣೆಯ ಸಮಯದಲ್ಲಿ ಖಂಡಪೀಠವು ಮೇಲಿನ ಕರೆ ನೀಡಿತು. ನ್ಯಾಯಾಧೀಶರು ಕಣ್ಣೂರ ವಿದ್ಯಾಪೀಠಕ್ಕೆ ಪ್ರಿಯಾ ವರ್ಗೀಸ್ ಇವರ ಸಹಯೋಗಿ ಪ್ರಾಧ್ಯಾಪಕ ಎಂದು ನೇಮಕಗೊಳಿಸುವುದಕ್ಕಾಗಿ ಆಕೆಯ ಪರಿಚಯ ಪತ್ರ ಮತ್ತೊಮ್ಮೆ ಪರಿಶೀಲಿಸುವ ಆದೇಶ ನೀಡಿತ್ತು. ಈ ವಾರ್ತೆಯನ್ನು ಪ್ರಸಾರ ಮಾಧ್ಯಮಗಳಲ್ಲಿ ಬೃಹತ್ ಪ್ರಮಾಣದಲ್ಲಿ ಪ್ರಸಾರ ಮಾಡಿತು. ಕಾರಣ ಪ್ರಿಯ ವರ್ಗೀಸ್ ಇವರ ವಿವಾಹ ಮುಖ್ಯಮಂತ್ರಿ ಪಿನಾರಾಯಿ ವಿಜಯನ್ ಇವರ ಖಾಸಗಿ ಸಚಿವರಾದ ಕೆ,ಕೆ. ರಾಗೇಶ ಇವರ ಜೊತೆ ನಡೆದಿತ್ತು. ಭಾರತದ ನ್ಯಾಯಾಧೀಶರು ಡಿ ವೈ ಚಂದ್ರಚೂಡ ಇವರು ಕೂಡ ಪ್ರಸಾರ ಮಾಧ್ಯಮಗಳಿಗೆ ನ್ಯಾಯಾಲಯದ ಎದುರು ಬಾಕಿ ಇರುವ ಪ್ರಕರಣಗಳ ಬಗ್ಗೆ ವಾರ್ತೆಯ ಪ್ರಸಾರ ಮಾಡುವಾಗ ತಾಳ್ಮೆ ಕಾಪಾಡುವಂತೆ ಕರೆ ನೀಡಿರುವುದು ಕೂಡ ಖಂಡಪೀಠ ಸ್ಪಷ್ಟಪಡಿಸಿದೆ.