ಶ್ರೀನಗರ (ಜಮ್ಮು ಕಾಶ್ಮೀರ) – ಕಾಶ್ಮೀರದಲ್ಲಿ ಕಲ್ಲುತುರಾಟದ ಘಟನೆ ನಡೆದಿಲ್ಲ, ಎಂದು ಪೊಲೀಸರ ಅಂಕಿ ಅಂಶಗಳಿಂದ ಮಾಹಿತಿ ಬೆಳಕಿಗೆ ಬಂದಿದೆ. ಈ ವರ್ಷ ಇಲ್ಲಿಯವರೆಗೆ ಕಲ್ಲುತೂರಾಟದ ಒಂದು ಘಟನೆ ಕೂಡ ನಡೆದಿಲ್ಲ, ಆದರೆ ಕಳೆದ ವರ್ಷ ಕಲ್ಲು ತೂರಾಟದ ೫ ಘಟನೆ ನಡೆದಿದ್ದವು.
ಭಾರತೀಯ ಗೂಢಚಾರ ಸಂಸ್ಥೆಯ (‘ಐಬಿ’ಯ’) ಒಂದು ವರದಿಯ ಪ್ರಕಾರ ಪಾಕಿಸ್ತಾನದ ಐ.ಎಸ್.ಐ ಈ ಗೂಢಚಾರ ವ್ಯವಸ್ಥೆಯಿಂದ ಕಾಶ್ಮೀರದಲ್ಲಿನ ಆಕ್ರಮಣಕಾರರಿಗೆ ೨೦೦೯ ನಂತರ ೮೦೦ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಲಾಜಿಸ್ಟಿಕ್ ಸಹಾಯ ಪೂರೈಸಿತ್ತು. ಆದ್ದರಿಂದ ೨೦೧೬ ರಲ್ಲಿ ಶ್ರೀನಗರದಲ್ಲಿ ಕೆಲವು ಸಂಘಟನೆಗಳು ಸ್ಥಾಪನೆಯಾಯಿತು. ಪಾಕಿಸ್ತಾನದಿಂದ ಆಕ್ರಮಣ ಮಾಡುವ ಭಯೋತ್ಪಾದನೆ ಮತ್ತು ಅವರನ್ನು ನೋಡಿಕೊಳ್ಳುವವರಿಗೆ ಕಾಶ್ಮೀರ ಕಣಿವೆಯಲ್ಲಿ ಹಣ ಪೂರೈಸಲಾಗುತ್ತಿತ್ತು. ಇಲ್ಲಿ ಪ್ರತ್ಯೇಕತಾವಾದಿ ನಾಯಕರು ಮತ್ತು ಭೂಗತ ಇರುವ ಕಾರ್ಯಕರ್ತರ ಮೂಲಕ ಕಲ್ಲು ತೂರಾಟ ಮಾಡುವ ಯುವಕರ ವಿಭಜನೆ ಆಗುತ್ತಿತ್ತು.
ಕಲ್ಲುತೂರಾಟ ತಡೆಯುವುದಕ್ಕಾಗಿ ವ್ಯವಸ್ಥೆಯಿಂದ ಮಾಡಿರುವ ಪ್ರಯತ್ನ !
೧. ರಾಷ್ಟ್ರೀಯ ತನಿಖಾ ವ್ಯವಸ್ಥೆ, ಪೋಲಿಸ್ ಮತ್ತು ಇತರ ಸಂಸ್ಥೆ ಇವರು ಕಲ್ಲುತೂರಾಟದ ವಿರುದ್ಧ ಕಠಿಣ ನೀತಿ ಅವಲಂಬಿಸಿದರು.
೨. ಸರಕಾರದ ಹಣಕಾಸು ಸಂಸ್ಥೆಯು ‘ಹವಾಲಾ’ ಮತ್ತು ವಿದೇಶಿ ಲಾಜಿಸ್ಟಿಕ್ ಪೂರೈಕೆ ತಡೆದರು.
೩. ಯುವಕರಿಗೆ ಧಾರ್ಮಿಕ ಕಟ್ಟರವಾದಿಗಳಿಂದ ದೂರ ಇಡುವ ಪ್ರಯತ್ನ ಮಾಡಿದರು.
೪. ಕಲ್ಲು ತೂರಾಟ ಮಾಡುವವರಿಗೆ ಆಗ್ರ, ತಿಹಾರ್ ಮತ್ತು ಇತರ ರಾಜ್ಯದಲ್ಲಿನ ಜೈಲಿಗೆ ಕಳುಹಿಸಿದರು.
ಸಂಪಾದಕೀಯ ನಿಲುವುಕಲ್ಲು ತೂರಾಟದ ಒಂದು ಘಟನೆ ನಡೆಯದಿರುವುದು ಇದು ಶ್ಲಾಘನೀಯವಾಗಿದ್ದರೂ, ಇನ್ನು ಮುಂದೆ ಹೋಗಿ ಕಾಶ್ಮೀರದಲ್ಲಿನ ಜಿಹಾದಿ ಮಾನಸಿಕತೆ ನಾಶ ಮಾಡುವ ಪ್ರಯತ್ನವಾದರೆ ಆಗ ಅಲ್ಲಿನ ಭಯೋತ್ಪಾದನೆ ಬೇರು ಸಹಿತ ನಾಶವಾಗುವುದು ! |