ಬಂಗಾಳದಲ್ಲಿನ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ‘ಹಿಂದೂ ಸಮಾಜ ಪಕ್ಷ’ದಿಂದ ಪತ್ರ ಕಳುಹಿಸಿ ವಿರೋಧ
ಕೋಲಕಾತಾ (ಬಂಗಾಳ) – ಇಲ್ಲಿನ ಹಿಂದೂ ಸಮಾಜ ಪಕ್ಷವು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಗೆ ಪತ್ರ ಬರೆದಿದೆ. ಅದರಲ್ಲಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗುತ್ತಿರುವ ಭವ್ಯವಾದ ಶ್ರೀರಾಮ ಮಂದಿರದ ಗರ್ಭಗುಡಿ ಮತ್ತು ಸಿಂಹಾಸನವನ್ನು ನಿರ್ಮಿಸುವ ಗುತ್ತಿಗೆಯನ್ನು ಮುಸಲ್ಮಾನರಿಗೆ ನೀಡುವ ನಿರ್ಧಾರವನ್ನು ವಿರೋಧಿಸಲಾಗಿದೆ. ಈ ಟ್ರಸ್ಟ್‌ನ ಸದಸ್ಯ ಮಹಂತ್ ದಿನೇಶ್ ದಾಸ್ ಅವರಿಗೂ ಪತ್ರ ಕಳುಹಿಸಲಾಗಿದೆ.
ಈ ಪತ್ರದಲ್ಲಿ, ‘ನ್ಯೂಸ್ ೨೪’ ವಾರ್ತಾವಾಹಿನಿಯಲ್ಲಿ ಈ ಕುರಿತ ವರದಿಯನ್ನು ತೋರಿಸಲಾಗಿದೆ ಎಂದು ಹೇಳಲಾಗಿದೆ. ಆ ಮುಸಲ್ಮಾನರು ಗೋ ಮಾಂಸವನ್ನು ತಿನ್ನುವುದನ್ನು ಬಿಟ್ಟಿದ್ದಾರೆಯೇ ? ಅವರಿಂದ ಪಾವಿತ್ರತೆ ಮತ್ತು ಉಪಕರಣಗಳನ್ನು ನಿರ್ವಹಿಸಲಾಗುತ್ತದೆಯೇ? ಯಾರಿಗೆ ಶ್ರೀರಾಮನಲ್ಲಿ ನಂಬಿಕೆಯಿಲ್ಲ, ಯಾರಿಂದ ಭಗವಾನ ಶ್ರೀರಾಮನಿಗೆ ಅಯೋಧ್ಯೆಯಲ್ಲಿ ಇಷ್ಟು ವರ್ಷಗಳ ಕಾಲ ವನವಾಸ ಅನುಭವಿಸಬೇಕಾಯಿತು, ಅವರಿಗೆ ಗರ್ಭಗುಡಿ ಮತ್ತು ಸಿಂಹಾಸನವನ್ನು ನಿರ್ಮಿಸುವ ಕೆಲಸವನ್ನು ಏಕೆ ನೀಡಲಾಯಿತು ? ಇದರಿಂದ ‘ಕುತುಬ್ ಮಿನಾರ್ ಮತ್ತು ತಾಜ್ ಮಹಲ್ ನಿರ್ಮಿಸಿದ್ದು ಮುಸಲ್ಮಾನರು’ ಎಂದು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆಯೆ ? ಎಂದು ಇಂತಹ ಪ್ರಶ್ನೆಗಳು ಕೇಳಲಾಗಿದೆ.