ಮತಾಂತರಗೊಂಡವರ ಶುದ್ಧೀಕರಣಗೊಳಿಸಿದ ಬಳಿಕ ಕಾನೂನಾತ್ಮಕವಾಗಿ ಆವಶ್ಯಕವಿರುವ ಕಾಗದಪತ್ರಗಳನ್ನು ಪೂರ್ಣಗೊಳಿಸಬೇಕು ! – ನ್ಯಾಯವಾದಿ ನಾಗೇಶ ಜೋಶಿ, ಕಾರ್ಯದರ್ಶಿ, ಹಿಂದೂ ವಿಧಿಜ್ಞ ಪರಿಷತ್ತು, ಗೋವಾ

ನ್ಯಾಯವಾದಿ ನಾಗೇಶ ಜೋಶಿ, ಕಾರ್ಯದರ್ಶಿ, ಹಿಂದೂ ವಿಧೀಜ್ಞ ಪರಿಷತ್ತು, ಗೋವಾ

ರಾಮನಾಥಿ, ಜೂನ 22(ವಾರ್ತೆ.) – ಮತಾಂತರಗೊಂಡವರ ಶುದ್ಧೀಕರಣ ಪ್ರಕ್ರಿಯೆ(ಘರವಾಪಸಿ) ಈ ಎಲ್ಲ ವಿಷಯಗಳು ಕಾನೂನಿನ ಅಡಿಯಲ್ಲಿ ಬರುವ ವಿಷಯಗಳಾಗಿವೆ. ಭಾರತೀಯ ದಂಡ ಸಂಹಿತೆ ಕಲಂ 25 ರ ಅನುಸಾರ ಭಾರತವು ಜಾತ್ಯತೀತ ದೇಶವಾಗಿರುವುದರಿಂದ ಯಾವುದೇ ವ್ಯಕ್ತಿಗೆ ಬೇರೆ ಧರ್ಮವನ್ನು ಸ್ವೀಕರಿಸಲು ಪರವಾನಿಗೆ ಇದೆ. ಹಾಗೆಯೇ ಅದರ ಪ್ರಸಾರ-ಪ್ರಚಾರವನ್ನೂ ಮಾಡಬಹುದಾಗಿದೆ. ಈ ಕಲಂ ಕ್ರೈಸ್ತ ಮತ್ತು ಮುಸಲ್ಮಾನರಲ್ಲದೇ ಹಿಂದೂಗಳಿಗೂ ಜಾರಿಯಾಗುತ್ತದೆ.

ಮತಾಂತರಗೊಂಡವರ ಶುದ್ಧೀಕರಣಗೊಳಿಸಲು ಧಾರ್ಮಿಕ ವಿಧಿಗಳೊಂದಿಗೆ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಯಾರನ್ನು ಶುದ್ಧೀಕರಣಗೊಳಿಸಬೇಕಾಗಿದೆಯೋ, ಅವನ ಗುರುತಿನಚೀಟಿ, ಚುನಾವಣೆಪತ್ರ, ನಿವಾಸಿ ದಾಖಲೆ ಮುಂತಾದ ಕಾಗದಪತ್ರಗಳನ್ನು ತೆಗೆದುಕೊಳ್ಳಬೇಕು. ತದನಂತರ `ನಾನು ಸನಾತನ ಹಿಂದೂ ಧರ್ಮದ ವಿಷಯದಲ್ಲಿ ಆಕರ್ಷಣೆ ಹೊಂದಿರುವುದರಿಂದ ನಾನು ಈ ಧರ್ಮವನ್ನು ಸ್ವೀಕರಿಸುತ್ತಿದ್ದೇನೆ’ ಎನ್ನುವ ವಿವರಗಳನ್ನು ಹೊಂದಿರುವ ಪ್ರತಿಜ್ಞಾಪತ್ರವನ್ನು ಬರೆದುಕೊಳ್ಳಬೇಕು. ತದನಂತರ ಶುದ್ಧೀಕರಣದ ವಿಧಿಯನ್ನು ಮಾಡಬೇಕು. ತದನಂತರ `ಅಫಿಡೆವಿಟ’(ಪ್ರತಿಜ್ಞಾಪತ್ರ) ತಯಾರಿಸಬೇಕು. ಅವನು ಹೊಸ ಹೆಸರನ್ನು ಹೊಂದಿದ ಬಳಿಕ ಅವನಿಗೆ `ಗೆಝೆಟ್ ಪಬ್ಲಿಕೇಶನ್’ (ಹಿಂದೂ ಧರ್ಮ ಸ್ವೀಕರಿಸಿರುವುದರ ಸಂದರ್ಭದಲ್ಲಿ ವಾರ್ತಾಪತ್ರಿಕೆಯಲ್ಲಿ ನಿವೇದನೆ ನೀಡುವುದು) ನೀಡುವಂತೆ ಹೇಳಬೇಕು. ಈ ಎಲ್ಲ ಪ್ರಕ್ರಿಯೆಗಳಿಂದ ದಾಖಲಿಗಳ ಮಾಹಿತಿ ಒಂದೇ ಕಡೆ ಆಗುತ್ತದೆ. ಇಲ್ಲಿಯವರೆಗೆ ಗಮನಕ್ಕೆ ಬಂದಿರುವುದೇನೆಂದರೆ, ಹಿಂದೂಗಳ ಇತರೆ ಧರ್ಮಕ್ಕೆ ಮತಾಂತರಗೊಂಡಿರುವ ಕಾಗದಪತ್ರಗಳು ಸಿಗುತ್ತವೆ; ಆದರೆ ಹಿಂದೂ ಧರ್ಮಕ್ಕೆ `ಘರವಾಪಸಿ’ ಆಗಿರುವ ಕಾಗದಪತ್ರಗಳು ಬಹುತೇಕವಾಗಿ ಸಿಗುವುದಿಲ್ಲ. ಆದುದರಿಂದ ದಾಖಲೆಗಳ ಮಾಹಿತಿಯನ್ನು ಜಮಾ ಮಾಡುವುದು ಬಹಳ ಮಹತ್ವದ್ದಾಗಿದೆ. ಈ ಸಂದರ್ಭದ ಕಾನೂನು ರಚಿಸಲು ಈ ಮಾಹಿತಿಯನ್ನು ಕಾಲಾಂತರದಲ್ಲಿ ಸರಕಾರಕ್ಕೆ ಕೊಡಬಹುದಾಗಿದೆ. ಯಾವುದೇ ಸರಕಾರ ಘರವಾಪಸಿ ನಿಷೇಧದ ಕಾನೂನು ಜಾರಿಗೊಳಿಸಿದರೆ, ಆ ಕಾನೂನು ರದ್ದಾಗಬಾರದೆಂದು ಈ ಮಾಹಿತಿಯ ಉಪಯೋಗವಾಗುವುದು. ಆದುದರಿಂದ ಶುದ್ಧೀಕರಣ ಪ್ರಕ್ರಿಯೆಯ ದಾಖಲೆಗಳಿರುವುದು ಆವಶ್ಯಕವಾಗಿದೆಯೆಂದು ಹಿಂದೂ ವಿಧೀಜ್ಞ ಪರಿಷತ್ತಿನ ಕಾರ್ಯದರ್ಶಿ ನ್ಯಾಯವಾದಿ ನಾಗೇಶ ಜೋಶಿಯವರು ಕರೆ ನೀಡಿದರು. ಅವರು ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ 6 ನೇ ದಿನದಂದು(22.6.2023 ರಂದು) ಉಪಸ್ಥಿತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ನ್ಯಾಯವಾದಿ ನಾಗೇಶ ಜೋಶಿಯವರು ಮಾತನ್ನು ಮುಂದುವರೆಸುತ್ತಾ,

1. ಶುದ್ಧೀಕರಣಗೊಂಡ ಬಳಿಕ ಆ ವ್ಯಕ್ತಿಗೆ ನಮ್ಮ ಟ್ರಸ್ಟ ಅಥವಾ ಸಂಘಟನೆಯ ಒಂದು ಪ್ರಮಾಣಪತ್ರವನ್ನು ನೀಡಬಹುದು.

2. ಹಿಂದೂ ಧರ್ಮಾನುಸಾರ ಶುದ್ಧೀಕರಣದ ಎಲ್ಲ ವಿಧಿಗಳನ್ನು ಮಾಡುವುದರಿಂದ ಅವನ ಮೇಲೆ ಧಾರ್ಮಿಕ ಸಂಸ್ಕಾರವಾಗುತ್ತದೆ. ಆದುದರಿಂದ ಅವನು ನಮ್ಮೊಂದಿಗೆ ಸಂಪರ್ಕದಲ್ಲಿರುತ್ತಾನೆ.

3. ಯಾರ ಶುದ್ಧೀಕರಣಗೊಳಿಸಲಾಗಿದೆಯೋ, ಅವನ ಕುಂಡಲಿ, ಗೋತ್ರ, ಹೆಸರು ಮುಂತಾದ ವಿಷಯಗಳನ್ನು ತಯಾರಿಸಬೇಕು.

4. ಅವನ ಹೊಸ ಆಧಾರ ಕಾರ್ಡ, ನಿವಾಸ ದಾಖಲೆ, ಚುನಾವಣೆ ಪತ್ರ ಹೊಸದಾಗಿ ಸಿದ್ಧಪಡಿಸಬೇಕು. ಈ `ಗೆಝೆಟ್’ ಅವನ ಮತ್ತು ನಮ್ಮ ಹತ್ತಿರ ಇಟ್ಟುಕೊಳ್ಳಬೇಕು.

5. ಸಾರ್ವಜನಿಕ ಕಾರ್ಯಕ್ರಮಗಳಿಗೆ ಅವನನ್ನು ಕರೆಯಬೇಕು. ಅವನಿಂದ ಸ್ವಲ್ಪ ಶುಲ್ಕವನ್ನು ತೆಗೆದುಕೊಳ್ಳಬೇಕು ಮತ್ತು ಅವನಿಗೆ ಪಾವತಿಯನ್ನು ಕೊಡಬೇಕು. ಅವನ ರೆಕಾರ್ಡ ಸಿದ್ಧವಾಗುತ್ತದೆ.

ನಾವು ನಮ್ಮ ಪರಂಪರೆಯ ಕ್ಷೇತ್ರದಲ್ಲಿದ್ದು ಕೆಲಸವನ್ನು ಮಾಡಿದರೆ ನಮಗೆ ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

(ಸೌಜನ್ಯ – Hindu Janajagruti Samiti)