ರಥಯಾತ್ರೆಗೆ ಬಂಗಾಳ ಪೊಲೀಸರು ನಿಷೇಧ ಹೇರುವುದು, ಧಾರ್ಮಿಕ ಆಚರಣೆಯಲ್ಲಿ ಹಸ್ತಕ್ಷೇಪವಾಗಿದೆ ! – ಕಲ್ಕತ್ತಾ ಉಚ್ಚ ನ್ಯಾಯಾಲಯ

ಕೋಲಕಾತಾ – ಈ ವರ್ಷದ ಶ್ರೀ ಜಗನ್ನಾಥ ರಥಯಾತ್ರೆಯ ಸಂದರ್ಭದಲ್ಲಿ ಬಂಗಾಳದ ಸಂಕರೇಲ ಹಾವಡಾದಲ್ಲಿ ರಥ ಯಾತ್ರೆಗೆ ಅನುಮತಿ ನೀಡದಿರುವುದಕ್ಕಾಗಿ ಕಲ್ಕತ್ತಾ ಉಚ್ಚನ್ಯಾಯಾಲಯವು ಬಂಗಾಳ ಪೊಲೀಸರ ಕಿವಿಹಿಂಡಿದೆ. ರಥಯಾತ್ರೆಯಲ್ಲಿ ರಾಜ್ಯ ಪೊಲೀಸರು ನಿರ್ಬಂಧ ಹೇರುವುದೆಂದರೆ ಧಾರ್ಮಿಕ ಆಚರಣೆಯಲ್ಲಿನ ಹಸ್ತಕ್ಷೇಪವಾಗಿದೆ, ಎಂದು ಉಚ್ಚನ್ಯಾಯಾಲಯ ಹೇಳಿದೆ.

ಶ್ರೀ ಜಗನ್ನಾಥ ದೇವರನ್ನು ರಥದಲ್ಲಿ ತೆಗೆದುಕೊಂಡು ಹೋಗದಂತೆ ಆದೇಶಿಸುವುದು ಅನುಚಿತವಾಗಿದೆ ಎಂದು ಕೋಲ್ಕತ್ತಾ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ರಾಜಶೇಖರ ಮಂಥಾ ಅವರು ಹೇಳಿದರು. ಆ ಮೂಲಕ ರಥಯಾತ್ರೆಯ ಧ್ಯೇಯ ಮತ್ತು ಉದ್ದೇಶವನ್ನು ನಿರಾಕರಿಸಲಾಗಿದೆ. ಹಲವು ಶತಮಾನಗಳಿಂದ ಜನರು ಈ ರಥಯಾತ್ರೆಯಲ್ಲಿ ಸಂತೋಷದಿಂದ ಭಾಗವಹಿಸುತ್ತಿದ್ದಾರೆ ಮತ್ತು ಸಕ್ರಿಯವಾಗಿ ರಥಯಾತ್ರೆಯನ್ನು ಬೆಂಬಲಿಸುತ್ತಿದ್ದಾರೆ. ಇಲ್ಲಿಯವರೆಗೂ ದೇಶದ ಯಾವುದೇ ರಾಜ್ಯದಲ್ಲಿ ಈ ರೀತಿಯ ಧಾರ್ಮಿಕ ಆಚರಣೆಯಲ್ಲಿ ಯಾವುದೇ ಹಸ್ತಕ್ಷೇಪ ನಡೆದಿಲ್ಲ. ಭಾರತದಲ್ಲಿ ಸಾವಿರಾರು ವರ್ಷಗಳಿಂದ ರಥೋತ್ಸವದ ಆಚರಣೆ ನಡೆದುಕೊಂಡು ಬಂದಿದೆ ಎಂದು ನ್ಯಾಯಾಲಯವು ಹೇಳಿದೆ.

ಬಂಗಾಳ ಪೊಲೀಸರು ರಥಯಾತ್ರೆಗೆ ನಿರ್ಬಂಧ ಹೇರಿದ ನಂತರ ಅರ್ಜಿದಾರರು ಉಚ್ಚನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಧಾರ್ಮಿಕ ಕಾರ್ಯಕ್ಕೆ ಅಡ್ಡಿಪಡಿಸುವ ಯಾವುದೇ ಸಾಮಾಜಿಕ ಪಿಡುಗು ಉಂಟಾಗುವ ಸಾಧ್ಯತೆಯಿದ್ದರೆ, ಅದನ್ನು ಪರಿಹರಿಸಲು ಪೊಲೀಸರು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅರ್ಜಿಯನ್ನು ವಿಲೇವಾರಿ ಮಾಡುವಾಗ ನ್ಯಾಯಾಲಯವು ನಮೂದಿಸಿದೆ.

ಸಂಪಾದಕೀಯ ನಿಲುವು

ಬಂಗಾಳ ಸರಕಾರ ಸಂವಿಧಾನಕ್ಕನುಸಾರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲವೆಂದು ಇದರಿಂದ ಸ್ಪಷ್ಟವಾಗುತ್ತದೆ. ಇಂತಹ ಸರಕಾರವನ್ನು ರದ್ದುಗೊಳಿಸಿ ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೆ ತರುವುದು ಸೂಕ್ತ !