ಪುರಿಯಲ್ಲಿ ಭಗವಾನ ಜಗನ್ನಾಥನ ಜಗತ್ಪ್ರಸಿದ್ಧ ಯಾತ್ರೆ ಇಂದಿನಿಂದ ಆರಂಭ !

೨೫ ಲಕ್ಷ ಭಕ್ತರು ಪಾಲ್ಗೊಳ್ಳುವ ಸಾಧ್ಯತೆ !

ಪುರಿ (ಒಡಿಶಾ) – ಜೂನ್ ೨೦ ರಿಂದ ಪುರಿಯಲ್ಲಿ ಜಗತ್ಪ್ರಸಿದ್ಧ ಜಗನ್ನಾಥ ಯಾತ್ರೆಯು ಆರಂಭವಾಗಲಿದೆ. ಈ ಯಾತ್ರೆಯಲ್ಲಿ ೨೫ ಲಕ್ಷ ಜನರು ಭಾಗವಹಿಸುವುದಾಗಿ ಆಡಳಿತದವರ ನಿರೀಕ್ಷೆ ಇದೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಲಾಗುವುದು. ಇಡೀ ನಗರವನ್ನು ೧೪ ವಿಭಾಗಗಳು ಮತ್ತು ೨೯ ಕ್ಷೇತ್ರಗಳಾಗಿ ವಿಂಗಡಿಸಲಾಗುವುದು.

ವೇದ ಪಠಣದೊಂದಿಗೆ ಯಾತ್ರೆ ಆರಂಭವಾಗಲಿದೆ. ಈ ಸಂದರ್ಭದಲ್ಲಿ ಜಗನ್ನಾಥ, ಬಲಭದ್ರ ಮತ್ತು ದೇವಿ ಸುಭದ್ರೆ ಇವರ ಅಲೌಕಿಕ ದರ್ಶನವಾಗಲಿದೆ. ಜೂನ್ ೨೧ ರಂದು ಭಗವಾನ ಜಗನ್ನಾಥನು ರಥಾರೂಢವಾಗಿ ಗುಂಡಿಯ ದೇವಸ್ಥಾನಕ್ಕೆ ಹೊರಡುತ್ತಾರೆ. ಜಗನ್ನಾಥ ದೇವಾಲಯದಲ್ಲಿ ದೇವತೆಗಳ ‘ನಬಜೌಬನ’ ದರ್ಶನಕ್ಕೆ ೩ ಗಂಟೆಗಳ ಕಾಲ ಅವಕಾಶ ನೀಡಲಾಗುತ್ತದೆ. ‘ಅನಸಾರ್’ ಮನೆಯಲ್ಲಿ (ಅನಾರೋಗ್ಯದ ಕೋಣೆ) ೧೪ ದಿನಗಳನ್ನು ಕಳೆದ ನಂತರ ಭಗವಾನ್ ಜಗನ್ನಾಥ, ಭಗವಾನ್ ಬಲಭದ್ರ ಮತ್ತು ಸುಭದ್ರಾ ದೇವಿಯು ‘ನಬಜೌಬನ ಬೇಶಾ’ (ಯುವ ಉಡುಪು) ನಲ್ಲಿ ಕಾಣಿಸಿಕೊಳ್ಳುತ್ತಾರೆ.

ಭಕ್ತರನ್ನು ಬಿಸಿಲಿನಿಂದ ರಕ್ಷಿಸಲು ಸಿದ್ಧತೆ !

ಸುಡುಬಿಸಿಲನ್ನು ನೋಡಿ, ಆಡಳಿತವು ಅಂದಾಜು ೨೫ ಲಕ್ಷ ನೀರಿನ ಬಾಟಲಿಗಳನ್ನು ಶೇಖರಿಸಿಟ್ಟಿದೆ. ಅವುಗಳ ವಿತರಣೆಯ ಜವಾಬ್ದಾರಿಯನ್ನು ಸ್ವಯಂಸೇವಕರಿಗೆ ನೀಡಲಾಗಿದೆ. ಜನದಟ್ಟನೆಯಲ್ಲಿ ಉಷ್ಣತೆಯು ಹೆಚ್ಚಾಗಬಾರದೆಂದು ನೀರು ಚಿಮುಕಿಸಲು ಯಂತ್ರಗಳನ್ನು ಬಳಸಲಾಗುವುದು. ಇದರೊಂದಿಗೆ ಯಾತ್ರಾ ಮಾರ್ಗದಲ್ಲಿ ೭೨ ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗುವುದು. ರೋಗಿಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ವಿಶೇಷ ಮಾರ್ಗವನ್ನು ರಚಿಸಲಾಗಿದೆ.