ಮದರಸಾದಲ್ಲಿ ಹಠಾತ್ತಾಗಿ ತಪಾಸಣೆ ಮಾಡಿದರೆಂದು ಅದರ ಸಂಚಾಲಕರಿಂದ ಸರಕಾರಿ ಅಧಿಕಾರಿಗಳಿಗೆ ಪರಿಣಾಮ ಭೋಗಿಸಬೇಕಾಗುವುದು ಎಂಬ ಬೆದರಿಕೆ !

ಪೊಲೀಸರಿಂದ ದೂರು ದಾಖಲು

ಸಾಂಧರ್ಭಿಕ ಚಿತ್ರ

ಸಿದ್ದಾರ್ಥನಗರ (ಉತ್ತರ ಪ್ರದೇಶ) – ಇಲ್ಲಿಯ ಒಂದು ಮದರಸಾದ ತಪಾಸಣೆಗೆ ಹೋಗಿದ್ದ ಸರಕಾರಿ ಅಧಿಕಾರಿಗಳಿಗೆ ಬೆದರಿಕೆ ನೀಡಲಾಗಿದೆ. ಈ ಪ್ರಕರಣದಲ್ಲಿ ಮದರಸಾದ ಸಂಚಾಲಕನ ವಿರುದ್ಧ ದೂರು ದಾಖಲಿಸಲಾಗಿದೆ.

ಬಸ್ತಿ ವಿಭಾಗದ ಅಲ್ಪಸಂಖ್ಯಾತ ಕಲ್ಯಾಣದ ಉಪ ಸಂಚಾಲಕರಾದ ವಿಜಯ ಪ್ರತಾಪ್ ಯಾದವ ಮತ್ತು ಅಧಿಕಾರಿ ತನ್ಮಯ ಪಾಂಡೆಯ ಇವರು ಇಲ್ಲಿಯ ಜಲಾಲುಲ್ ಮದರಸಾದ ತಪಾಸಣೆಗಾಗಿ ಹೋಗಿದ್ದರು. ಈ ತಪಾಸಣೆಯಲ್ಲಿ ೩ ರಲ್ಲಿ ೧ ನೌಕರ ಅನುಪಸ್ಥಿತ ಇರುವುದು ಕಂಡುಬಂದಿತು. ಇದರ ಜೊತೆಗೆ ೩ ಶಿಕ್ಷಕರಲ್ಲಿ ೨ ಶಿಕ್ಷಕರು ಉಪಸ್ಥಿತರಿರಲಿಲ್ಲ. ಅವರ ಅನುಪಸ್ಥಿತಿಯ ಯಾವುದೇ ಲಿಖಿತ ಕಾರಣ ನೀಡಿರಲಿಲ್ಲ. ಮದರಸಾದಲ್ಲಿ ಅಸ್ವಚ್ಚತೆ ಎದ್ದು ಕಾಣುತ್ತಿತ್ತು . ಅವರು ಸ್ವತಹ ಅಲ್ಲಿ ಕಸಗೂಡಿಸಿದರು. ಇದರ ನಂತರ ಮದರಸಾಗ ಜೂನ್ ೧೭ ರ ವರೆಗೆ ಇದರ ಬಗ್ಗೆ ಉತ್ತರ ನೀಡಬೇಕೆಂದು ನೋಟಿಸ್ ಜಾರಿ ಮಾಡಲಾಗಿದೆ. ಇದರ ಬಗ್ಗೆ ಮದರಸಾದ ವ್ಯವಸ್ಥಾಪಕ ಸುಲ್ತಾನ್ ಅಹಮದ್ ಇವನು ಯಾದವ್ ಇವರಿಗೆ ಸಂಚಾರ ವಾಣಿಯ ಕರೆ ಮಾಡಿ ಪರಿಣಾಮ ನೆಟ್ಟಿಗೆ ಇರುವುದಿಲ್ಲ ಎಂದೂ ಬೆದರಿಕೆ ನೀಡಿದನು. ಅದರ ನಂತರ ಯಾದವ ಇವರು ಪೊಲೀಸರಿಗೆ ದೂರು ನೀಡಿದರು.

ಸಂಪಾದಕೀಯ ನಿಲುವು

ಸರಕಾರವು ಇಂತಹ ಮದರಸಾಗಳ ಅನುಮತಿ ರದ್ದುಪಡಿಸಿ ಅದಕ್ಕೆ ಬೀಗಮುದ್ರೆ ಹಾಕಬೇಕು ಮತ್ತು ಸಂಚಾಲಕರನ್ನು ಜೈಲಿಗೆ ಅಟ್ಟಬೇಕು !