ತಮಿಳುನಾಡಿನಲ್ಲಿ ಭಾಜಪದ ರಾಜ್ಯ ಸಚಿವರ ಬಂಧನ

ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಸಂಸದರ ವಿರುದ್ಧ ಟ್ವೀಟ್ ಮಾಡಿದ ಪರಿಣಾಮ

ಚೆನ್ನೈ (ತಮಿಳುನಾಡು) – ತಮಿಳುನಾಡಿನ ಭಾಜಪದ ರಾಜ್ಯ ಸಚಿವ ಎಸ್.ಜಿ. ಸೂರ್ಯ ಇವರನ್ನು ಸೈಬರ್ ಕ್ರೈಂ ಪೋಲಿಸರು ಬಂಧಿಸಿದ್ದಾರೆ. ಸೂರ್ಯ ಇವರು ಮದುರೈಯಲ್ಲಿನ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಸಂಸದ ವೆಂಕಟೇಶ ಇವರ ಕುರಿತು ಒಂದು ಟ್ವೀಟ್ ಮಾಡಿದ್ದರು. ಆದ್ದರಿಂದ ಅವರನ್ನು ಬಂಧಿಸಲಾಗಿದೆ. ಈ ಬಂಧನದ ಬಗ್ಗೆ ಭಾಜಪದ ಪ್ರದೇಶ ಅಧ್ಯಕ್ಷ ಅಣ್ಣಾಮಲೈ ಇವರು ತಮಿಳುನಾಡು ಸರಕಾರವನ್ನು ಟೀಕಿಸಿದ್ದಾರೆ. ಅವರು, ಸೂರ್ಯ ಅವರಿಂದ ಇಷ್ಟೇ ತಪ್ಪು ನಡೆದಿದ್ದು, ಏನೆಂದರೆ ಅವರು ಕಮ್ಯುನಿಸ್ಟ್ ಮತ್ತು ದ್ರಾವಿಡ ಮುನ್ನೆತ್ರಿ ಕಳಘಮ್ (ದ್ರಾವಿಡ ಪ್ರಗತಿ ಸಂಘ) ಇವರ ಸಹಕಾರಿಗಳ ದ್ವೇಷ ಮತ್ತು ಭೇದಭಾವ ಬಹಿರಂಗಪಡಿಸಿದರು. ಬಂಧನದಿಂದ ನಾವು ನಿಲ್ಲುವುದಿಲ್ಲ. ನಾವು ಸತ್ಯ ಎಲ್ಲರದರೂ ತರುತ್ತೇವೆ ಎಂದು ಹೇಳಿದರು.

(ಸೌಜನ್ಯ – India Today)

ಸಂಪಾದಕೀಯ ನಿಲುವು

ಇತರ ಸಮಯದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕೂಗಾಡುವವರು ಈ ಸಮಯದಲ್ಲಿ ಮೌನವಾಗಿರುತ್ತಾರೆ ಇದನ್ನು ತಿಳಿದುಕೊಳ್ಳಿ!