ಸಂಗಮನೇರನಲ್ಲಿ ಮತಾಂಧರಿಂದ ಪಬ್ಜಿ ಆಟದಿಂದ ಸ್ನೇಹಿತೆಯ ಅಪಹರಣದ ಪ್ರಯತ್ನ !

‘ಲವ್ ಜಿಹಾದ್’ ಅಲ್ಲ ಎಂದು ಪೊಲೀಸರ ಅಭಿಪ್ರಾಯ

ಸಂಗಮನೇರ (ಅಹಿಲ್ಯಾನಗರ ಜಿಲ್ಲೆ) – ಇಲ್ಲಿಯ ಒಂದು ಮಹಾವಿದ್ಯಾಲಯದ ಯುವತಿಯ ಅಪಹರಣದ ಪ್ರಯತ್ನ ನಾಗರೀಕರ ಜಾಗರೂಕತೆಯಿಂದ ವಿಫಲವಾಯಿತು. ಈ ಪ್ರಕರಣದಲ್ಲಿ ಬಿಹಾರದ ದರಭಂಗಾ ಜಿಲ್ಲೆಯ ೨ ಮತಾಂಧರನ್ನು ಸಂಗಮನೇರ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಶಹಬುದ್ದೀನ್ ಶೇಖ (ಅಲೀನಗರ ನಿವಾಸಿ, ದರಭಂಗಾ ಜಿಲ್ಲೆ, ಬಿಹಾರ) ಮತ್ತು ಮಹಮ್ಮದ್ ನೇಮತುಲ್ಲಾ ಮಹಮ್ಮದ್ ಕೈಸರ್ ಎಂದು ಈ ಮತಾಂಧರ ಹೆಸರುಗಳಾಗಿವೆ.

೨ ವರ್ಷಗಳ ಹಿಂದೆ ಓರ್ವ ಯುವತಿ ಪಬ್ಜಿ ಆನ್ಲೈನ್ ಆಟ ಆಡುವಾಗ ಅಕ್ರಮ ಶಹಬುದ್ದೀನ್ ಶೇಖ ಇವನ ಜೊತೆಗೆ ಆಕೆಯ ಪರಿಚಯವಾಯಿತು. ಅವನು ಸಂಗಮನೇರ ಇಲ್ಲಿಯ ಮಾಲಪಾಣಿ ರೆಸಾರ್ಟ್ ನಲ್ಲಿ ಸ್ನೇಹಿತ ಮಹಮ್ಮದ್ ನೇಮತುಲ್ಲಾ ಮಹಮದ್ ಕೈಸರ್ ಇವನ ಜೊತೆಗೆ ಬಂದಿದ್ದನು. ಹುಡುಗಿಯ ಭೇಟಿಯ ಸಮಯದಲ್ಲಿ ಅಕ್ರಮನು ಆಕೆಗೆ ನನ್ನ ಜೊತೆಗೆ ಬಿಹಾರಕ್ಕೆ ನಡೆ ನಾವು ವಿವಾಹ ಮಾಡಿ ಕೊಳ್ಳೋಣ, ಎಂದು ಹಟಹಿಡಿದನು. ಹುಡುಗಿ ಅದಕ್ಕೆ ನಿರಾಕರಿಸಿದಳು; ಆದರೆ ಅದರ ನಂತರ ಅಕ್ರಮ ಮತ್ತು ನೇಮತುಲ್ಲಾ ಇವರು ‘ನೀನು ನಮ್ಮ ಜೊತೆ ಬರಲೇಬೇಕು, ಇಲ್ಲವಾದರೆ ನಿನ್ನ ಮನೆಗೆ ಬಂದು ಕಳಂಕಿತಗೊಳಿಸುವೆವು, ಎಂದು ಬೆದರಿಕೆ ನೀಡಿದರು. ಆದ್ದರಿಂದ ಹುಡುಗಿ ಹೆದರಿದಳು ಆಕೆ ಜೋರಾಗಿ ಕಿರುಚಾಡಿದಳು, ಪರಿಸರದಿಲ್ಲಿನ ನಾಗರೀಕರು ಜಾಗರೂಕರಾದರು. ಅವರು ಇಬ್ಬರೂ ಆರೋಪಿಗಳನ್ನು ಹಿಡಿದು ಪೊಲೀಸರ ವಶಕ್ಕೆ ನೀಡಿದರು. ಸಂತ್ರಸ್ತೆಯ ದೂರಿನ ನಂತರ ಪೊಲೀಸರು ಆರೋಪಿಯ ವಿರುದ್ಧ ದೂರು ದಾಖಲಿಸಿಕೊಂಡು ಅವರಿಬ್ಬರನ್ನು ಬಂಧಿಸಿದರು .

‘ಲವ್ ಜಿಹಾದ್’ನ ಘಟನೆ, ಪೊಲೀಸರಿಂದ ಮಾತ್ರ ಖಂಡನೆ !

‘ಆರೋಪಿ ಬಿಹಾರದಿಂದ ಸಂಗಮನೆರಗೆ ಯಾರ ಸಹಾಯದಿಂದ ಬಂದಿದ್ದ ?’, ‘ಇದರಲ್ಲಿ ಯಾರು ಜೊತೆಗಾರನು ಇದ್ದಾನೆಯೇ ?’, ಇದನ್ನು ಪೊಲೀಸರು ಹುಡುಕುತ್ತಿದ್ದಾರೆ. ಪ್ರಸ್ತುತ ‘ಲವ್ ಜಿಹಾದ’ದ ಚರ್ಚೆ ನಗರದಲ್ಲಿ ನಡೆಯುತ್ತಿರುವುದರಿಂದ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಗಮನಹರಿಸಿದ್ದಾರೆ; ಆದರೆ ‘ಈ ಘಟನೆ ಲವ್ ಜಿಹಾದ್ ಅಲ್ಲ’ ಎಂದು ಪೊಲೀಸ ಅಧಿಕಾರಿ ಸೋಮನಾಥ ವಾಗಚೌರೇ ಇವರು ಪತ್ರಕರ್ತರ ಸಭೆಯಲ್ಲಿ ಹೇಳಿದರು. (ಇಲ್ಲಿಯವರೆಗೆ ಅಹಿಲ್ಯನಗರ ಜಿಲ್ಲೆಸಹಿತ ಇತರ ನಗರಗಳಲ್ಲಿ ‘ಲವ್ ಜಿಹಾದ್’ನ ಪ್ರಕರಣಗಳು ಘಟಿಸುತ್ತಿದ್ದರು ಕೂಡ ಪೊಲೀಸರು ಮಾತ್ರ ಹಿಂದೂಗಳಿಗೆ ಮೋಸ ಮಾಡುತ್ತಾರೆ, ಇಂತಹ ಪೊಲೀಸರು ‘ಲವ್ ಜಿಹಾದ’ದಿಂದ ಹಿಂದೂ ಯುವತಿ ಮತ್ತು ಮಹಿಳೆಯರ ರಕ್ಷಣೆ ಏನು ಮಾಡುವರು ? – ಸಂಪಾದಕರು)

ಸಂಪಾದಕೀಯ ನಿಲುವು

  • ಹಿಂದೂ ಯುವತಿ ‘ಲವ್ ಜಿಹಾದ್’ ಗೆ ಬಲಿಯಾಗುವುದು, ಇದಕ್ಕೆ ಧರ್ಮಶಿಕ್ಷಣದ ಕೊರತೆಯೇ ಕಾರಣ !
  • ಲವ್ ಜಿಹಾದ್ ದ ಕೊನೆ ಹಿಂದೂ ಯುವತಿಯ ಮೇಲೆ ಬಲಾತ್ಕಾರ ಮಾಡಿ ಮುತಾಂತರ ಮಾಡುವುದು. ಇಲ್ಲಿ ಹುಡುಗಿಯ ಅಪಹರಣ ಆಗಿದ್ದರೆ ಆಗ ಇದೇ ನಡೆಯುತ್ತಿತ್ತು, ಹೀಗೆ ಇರುವಾಗ ಪೊಲೀಸರು ಅದನ್ನು ಒಪ್ಪಿಕೊಳ್ಳಲು ಏಕೆ ಸಿದ್ದರಿಲ್ಲ, ಇದೇ ಖೇದಕರವಾಗಿದೆ !