ಬಿಹಾರದಲ್ಲಿನ ರಾಷ್ಟ್ರೀಯ ಜನತಾದಳದ ಶಾಸಕ ರೀತಲಾಲ ಯಾದವ ಇವರ ‘ಸಂಶೋಧನೆ’ !
ಪಾಟಲಿಪುತ್ರ (ಬಿಹಾರ) – ಶ್ರೀರಾಮ ಮಂದಿರದ ಬಗ್ಗೆ ಜನರು ಚರ್ಚೆ ಮಾಡುವಾಗ, ಶ್ರೀರಾಮಚರಿತಮಾನಸವನ್ನು ಒಂದು ಮಸೀದಿಯಲ್ಲಿ ಬರೆಯಲಾಗಿತ್ತು. ನೀವು ಇತಿಹಾಸ ಇಣುಕಿ ನೋಡಬಹುದು. ಆ ಸಮಯದಲ್ಲಿ ನಿಮ್ಮ ಹಿಂದುತ್ವ ಸಂಕಷ್ಟದಲ್ಲಿ ಇರಲಿಲ್ಲವೇ ? ಮೊಗಲರ ಕಾಲದಲ್ಲಿ ಹಿಂದೂಗಳಿಗೆ ಸಂಕಷ್ಟ ಇರಲಿಲ್ಲವೇ? ಎಂದು ಬಿಹಾರದ ಆಡಳಿತಾರೂಢ ರಾಷ್ಟ್ರೀಯ ಜನತಾ ದಳದ ಶಾಸಕ ರೀತಲಾಲ ಯಾದವ ಹೇಳಿಕೆ ನೀಡಿದರು. ಈ ಹೇಳಿಕೆಯು ವಿವಾದಕ್ಕೊಳಗಾದ ನಂತರ ಸರಕಾರದಲ್ಲಿನ ಜನತಾದಳ (ಸಂಯುಕ್ತ) ಈ ಮಿತ್ರ ಪಕ್ಷವು, ಈ ಹೇಳಿಕೆಗೆ ನಮ್ಮ ಯಾವುದೇ ಸಂಬಂಧವಿಲ್ಲ, ಎಂದು ಹೇಳಿದೆ. ಭಾಜಪವು ಯಾದವ ಇವರ ಹೇಳಿಕೆಯನ್ನು ಟೀಕಿಸಿದೆ.
ಸಂಪಾದಕೀಯ ನಿಲುವುಯಾದವ ಇವರು ಇತರ ಧರ್ಮದ ಧರ್ಮಗ್ರಂಥಗಳನ್ನು ದೇವಸ್ಥಾನದಲ್ಲಿ ಬರೆಯಲಾಗಿದೆ ಎಂದು ಹೇಳುವ ಧೈರ್ಯ ಮಾಡಲಾರರು; ಏಕೆಂದರೆ ಅದರ ಪರಿಣಾಮ ಏನಾಗುವುದು, ಇದು ಅವರಿಗೆ ತಿಳಿದಿದೆ ! |