ಬಹುಗುಣಿ ನೆಲ್ಲಿಕಾಯಿ !

೧. ನೆಲ್ಲಿಕಾಯಿ – ಔಷಧಿಗಳ ರಾಜ

‘ನೆಲ್ಲಿಕಾಯಿ ಎಂದರೆ ಪೃಥ್ವಿಯ ಮೇಲಿನ ಅಮೃತ ! ನೆಲ್ಲಿಕಾಯಿ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ತೊಂದರೆಗಳನ್ನು ದೂರಗೊಳಿಸಲು ಉಪಯುಕ್ತವಾಗಿದೆ; ಆದ್ದರಿಂದ ಆಯುರ್ವೇದದಲ್ಲಿ ಇದಕ್ಕೆ ‘ಔಷಧಿಗಳ ರಾಜ ಎಂದು ಹೇಳುತ್ತಾರೆ. ಚಳಿಗಾಲದಲ್ಲಿ ನೆಲ್ಲಿಕಾಯಿಗಳ ಭೋಜನವನ್ನು ಆಯೋಜಿಸುತ್ತಾರೆ. ತುಳಸಿ ವಿವಾಹದಲ್ಲಿ ನೆಲ್ಲಿಕಾಯಿಗಳ ಉಪಯೋಗವನ್ನು ಮರೆಯದೇ ಮಾಡುತ್ತಾರೆ. ನೆಲ್ಲಿಕಾಯಿ ಗಳಲ್ಲಿ ವಿಷ್ಣುತತ್ತ್ವ ಹೆಚ್ಚು ಪ್ರಮಾಣದಲ್ಲಿರುತ್ತದೆ. ಇಂತಹ ಈ ನೆಲ್ಲಿಕಾಯಿಗಳಿಂದ ಆಧ್ಯಾತ್ಮಿಕ ಸ್ತರದಲ್ಲಿ ಬಹಳಷ್ಟು ಲಾಭವಾಗು ತ್ತದೆ. ಆಯುರ್ವೇದ ತತ್ತ್ವಕ್ಕನುಸಾರ ‘ಪಿತ್ತ, ಮಲಬದ್ದತೆ, ಕೂದಲು ಉದುರುವುದು, ಸಮಯಕ್ಕಿಂತ ಮೊದಲೇ ಕೂದಲು ಬಿಳಿಯಾಗುವುದು, ಚರ್ಮರೋಗ, ‘ಸಿ ಜೀವನ ಸತ್ತ್ವದ ಕೊರತೆ ಇವುಗಳಿಗೆ ರಾಮಬಾಣ ಉಪಾಯವಾಗಿದೆ. ಆದುದರಿಂದ ಮೇಲಿನ ರೋಗಗಳಲ್ಲಿ ನೆಲ್ಲಿಕಾಯಿಯನ್ನು ಅವಶ್ಯ ಉಪಯೋಗಿಸಬೇಕು.

ಶ್ರೀಮತಿ ಶೀತಲ ಜೋಶಿ

೨. ನೆಲ್ಲಿಕಾಯಿಯಿಂದ ತಯಾರಿಸುವ ವಿವಿಧ ಪದಾರ್ಥಗಳು

ಅ. ನೆಲ್ಲಿಕಾಯಿ ಚೂರ್ಣ ಆ. ಒಣ ನೆಲ್ಲಿಕಾಯಿ

ಇ. ನೆಲ್ಲಿಕಾಯಿ ಅಡಿಕೆ ಈ. ನೆಲ್ಲಿಕಾಯಿ ಎಣ್ಣೆ

ಉ. ನೆಲ್ಲಿಕಾಯಿ ಪಾನಕ ಊ. ನೆಲ್ಲಿಕಾಯಿ ಕ್ಯಾಂಡಿ

ಎ. ಮೊರಬ್ಬಾ ಏ. ಚ್ಯವನಪ್ರಾಶ

೩. ಇವುಗಳಲ್ಲಿನ ಕೆಲವು ಪದಾರ್ಥಗಳನ್ನು ತಯಾರಿಸುವ ಪದ್ಧತಿ

೩ ಅ. ನೆಲ್ಲಿಕಾಯಿ ಚೂರ್ಣ : ಇದನ್ನು ಎರಡು ರೀತಿಯಲ್ಲಿ ತಯಾರಿಸಬಹುದು.

೧. ಮೊದಲು ನೆಲ್ಲಿಕಾಯಿಗಳನ್ನು ಸ್ವಚ್ಛ ತೊಳೆದು ನೀರಿನಲ್ಲಿ ಕುದಿಸಬೇಕು. ಅವು ತಣ್ಣಗಾದ ಮೇಲೆ ಅವುಗಳ ಬೀಜಗಳನ್ನು ತೆಗೆದು ಹೋಳುಗಳನ್ನು ಮಾಡಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಕೊಳ್ಳಬೇಕು. ಹೋಳುಗಳು ಸರಿಯಾಗಿ ಒಣಗಲು ಸುಮಾರು ೭-೮ ದಿನಗಳು ಬೇಕಾಗುತ್ತವೆ, ಆದುದರಿಂದ ಹೋಳುಗಳು ಸರಿಯಾಗಿ ಒಣಗುವವರೆಗೆ ೭-೮ ದಿನಗಳ ವರೆಗೆ ಬಿಸಿಲಿನಲ್ಲಿ ಇಟ್ಟ ನಂತರ ಆ ಒಣಗಿದ ನೆಲ್ಲಿಕಾಯಿಗಳ ಚೂರ್ಣಮಾಡಬೇಕು.

೨. ಹಸಿ ನೆಲ್ಲಿಕಾಯಿಗಳ ಬೀಜಗಳನ್ನು ತೆಗೆದು ಅವುಗಳನ್ನು ಹೆಚ್ಚಿ ಕೊಳ್ಳಬೇಕು. ಆ ಹೋಳುಗಳನ್ನು ೭ – ೮ ದಿನ ಬಿಸಿಲಿ ನಲ್ಲಿ ಚೆನ್ನಾಗಿ ಒಣಗಿಸಿಕೊಳ್ಳಬೇಕು. ಅನಂತರ ಒಣಗಿದ ಆ ಹೋಳುಗಳ ಚೂರ್ಣವನ್ನು ಮಾಡಬೇಕು. ಹೀಗೆ ತಯಾರಿಸಿದ ನೆಲ್ಲಿಕಾಯಿ ಚೂರ್ಣವನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮೊದಲು ಬಿಸಿ ನೀರಿನೊಂದಿಗೆ ೨ ಚಮಚ ಸೇವಿಸಿದರೆ ‘ರಕ್ತದೊತ್ತಡ, ಪಿತ್ತ, ಅಪಚನ, ಮಲಬದ್ಧತೆ, ಕೂದಲಿಗೆ ಸಂಬಂಧಿತ ಎಲ್ಲ ರೋಗಗಳು, ಚರ್ಮರೋಗ ಇವುಗಳಿಗೆ ಲಾಭದಾಯಕವಾಗಿದೆ.

೩ ಆ. ನೆಲ್ಲಿಕಾಯಿ ಕ್ಯಾಂಡಿ : ಇವುಗಳನ್ನು ಎರಡು ರೀತಿಯಲ್ಲಿ ತಯಾರಿಸಬಹುದು.

೧. ನೆಲ್ಲಿಕಾಯಿಗಳನ್ನು ಸ್ವಚ್ಛ ತೊಳೆದು ನೀರಿನಲ್ಲಿ ಕುದಿಸಬೇಕು. ನಂತರ ಅವುಗಳಲ್ಲಿನ ಬೀಜಗಳನ್ನು ತೆಗೆದು ಅವುಗಳ ಹೋಳುಗಳನ್ನು ಮಾಡಬೇಕು. ಎಷ್ಟು ಹೋಳುಗಳು ಇರುತ್ತವೆಯೋ, ಅಷ್ಟೇ ಪ್ರಮಾಣದಲ್ಲಿ ಸಕ್ಕರೆಯನ್ನು ಬೆರೆಸಿ ಗಾಜಿನ ಭರಣಿಯಲ್ಲಿ ತುಂಬಬೇಕು. ಭರಣಿಯ ಬಾಯಿಗೆ ಒಂದು ತೆಳ್ಳಗಿನ ಹತ್ತಿಯ ಬಟ್ಟೆ ಕಟ್ಟಿ ೩-೪ ದಿನ ಬಿಸಿಲಿನಲ್ಲಿಡಬೇಕು. ನಂತರ ಭರಣಿಯಲ್ಲಿನ ಹೋಳುಗಳನ್ನು ಹೊರ ತೆಗೆದು ಬಿಸಿಲಿನಲ್ಲಿ ಒಣಗಿಸಬೇಕು. ಭರಣಿಯಲ್ಲಿ ಕೆಳಗೆ ಉಳಿದ ನೆಲ್ಲಿಕಾಯಿ ಪಾಕವನ್ನು ಪಾನಕ ತಯಾರಿಸಲು ಉಪಯೋಗಿಸಬಹುದು. ಒಣಗಿಸಿದ ಈ ಹೋಳುಗಳೆಂದರೆ ನೆಲ್ಲಿಕಾಯಿ ಕ್ಯಾಂಡೀ. ಅವುಗಳನ್ನು ಅನೇಕ ದಿನಗಳವರೆಗೆ ಉಪಯೋಗಿಸಬಹುದು.

೨. ನೆಲ್ಲಿಕಾಯಿಗಳನ್ನು ಸ್ವಚ್ಛ ತೊಳೆದು ೫ ರಿಂದ ೭ ದಿನಗಳ ವರೆಗೆ ‘ಡೀಪ್ ಫ್ರಿಜ್‌ರ್ನಲ್ಲಿಡಬೇಕು. ನಂತರ ಹೊರಗೆ ತೆಗೆದು ಅವುಗಳಲ್ಲಿನ ಬೀಜಗಳನ್ನು ತೆಗೆಯಬೇಕು. ನಂತರ ಹೋಳು ಮಾಡಿ ಎಷ್ಟು ಹೋಳುಗಳಿವೆಯೋ ಅಷ್ಟೇ ಪ್ರಮಾಣದ ಸಕ್ಕರೆಯನ್ನು ಅದಕ್ಕೆ ಬೆರೆಸಬೇಕು. ನಂತರ ಅವುಗಳನ್ನು ಒಂದು ಗಾಜಿನ ಭರಣಿಯಲ್ಲಿ ತುಂಬಿಸಿ ಭರಣಿಯ ಬಾಯಿಗೆ ತೆಳ್ಳಗಿನ ಹತ್ತಿ ಬಟ್ಟೆಯನ್ನು ಕಟ್ಟಿ ಭರಣಿಯನ್ನು ೩- ೪ ದಿನ ಬಿಸಿಲಿ ನಲ್ಲಿಡಬೇಕು. ನಂತರ ಭರಣಿಯಲ್ಲಿನ ಹೋಳುಗಳನ್ನು ಬೇರೆ ತೆಗೆದು ಬಿಸಿಲಿನಲ್ಲಿ ಒಣಗಿಸಬೇಕು. ಸಂಪೂರ್ಣ ಒಣಗಿದ ಹೋಳುಗಳೆಂದರೆ ನೆಲ್ಲಿಕಾಯಿ ಕ್ಯಾಂಡಿ. ಅವುಗಳನ್ನು ಭರಣಿಯಲ್ಲಿ ತುಂಬಿಡಬೇಕು. ಅವುಗಳನ್ನು ಅನೇಕ ದಿನಗಳವರೆಗೆ ಉಪಯೋಗಿಸಬಹುದು. ಹೋಳುಗಳನ್ನು ತೆಗೆದನಂತರ ಭರಣಿಯಲ್ಲಿ ಉಳಿದ ನೆಲ್ಲಿಕಾಯಿ ಪಾಕವನ್ನು ಪಾನಕ (ಶರಬತ್) ಮಾಡಲು ಉಪಯೋಗಿಸಬಹುದು.

೩ ಇ. ನೆಲ್ಲಿಕಾಯಿ ಅಡಿಕೆ

೧. ನೆಲ್ಲಿಕಾಯಿಗಳನ್ನು ಸ್ವಚ್ಛ ತೊಳೆದು ನೀರಿನಲ್ಲಿ ಕುದಿಸಬೇಕು. ಅವು ತಣ್ಣಗಾದ ಮೇಲೆ ಅವುಗಳಲ್ಲಿನ ಬೀಜಗಳನ್ನು ತೆಗೆದು ತಿರುಳನ್ನು ಸ್ವಲ್ಪ ಹಿಚುಕಿಕೊಳ್ಳಬೇಕು, ನಂತರ ಅದರಲ್ಲಿ ಸೈಂಧವ ಲವಣ, ಅಜ್ವಾನ, ಜೀರಿಗೆಯ ಪುಡಿ ಮತ್ತು ಹಸಿ ಶುಂಠಿಯನ್ನು ಹೆರೆದು ಅದರಲ್ಲಿ ಹಾಕಿ ಅದರ ಮಿಶ್ರಣವನ್ನು ಮಾಡಬೇಕು. ಈ ಮಿಶ್ರಣವನ್ನು ಕಡಲೆಯ ಆಕಾರದ ಸಣ್ಣ ಸಣ್ಣ ಉಂಡೆಗಳನ್ನು (ಸಂಡಿಗೆಗಳ ಹಾಗೆ) ಮಾಡಿ ಬಿಸಿಲಿನಲ್ಲಿ ಒಣಗಿಸಬೇಕು ಅಥವಾ ‘ಪ್ಲಾಸ್ಟಿಕ್ ಕಾಗದದ ಮೇಲೆ ಆ ತಿರುಳನ್ನು ತೆಳುವಾಗಿ ಹರಡಿ ಅದನ್ನು ಬಿಸಿಲಿನಲ್ಲಿ ಒಣಗಿಸಬೇಕು. ಆ ಚಿಕ್ಕ ಚಿಕ್ಕ ಗೋಲಗಳೆಂದರೆ ನೆಲ್ಲಿಕಾಯಿ ಅಡಿಕೆ. ಅದನ್ನು ಒಂದು ಸ್ವಚ್ಛ ಡಬ್ಬಿಯಲ್ಲಿಡಬೇಕು.

೨. ಹಸಿ ನೆಲ್ಲಿಕಾಯಿಗಳನ್ನು ತೊಳೆದು ಹೆರೆದುಕೊಳ್ಳಬೇಕು. ಅದರಲ್ಲಿ ಉಪ್ಪನ್ನು ಬೆರೆಸಿ ಆ ಮಿಶ್ರಣವನ್ನು ಬಿಸಿಲಿನಲ್ಲಿ ಸರಿಯಾಗಿ ಒಣಗಿಸಬೇಕು. ಒಣಗಿದ ಅಡಿಕೆಯನ್ನು ಒಂದು ಡಬ್ಬಿಯಲ್ಲಿ ತುಂಬಿಡಬೇಕು. ಅದು ಬಹಳಷ್ಟು ದಿನಗಳ ವರೆಗೆ ಉಳಿಯುತ್ತದೆ.

೩ ಈ. ನೆಲ್ಲಿಕಾಯಿ ಮೊರಬ್ಬಾ

೧. ನೆಲ್ಲಿಕಾಯಿಗಳನ್ನು ಸ್ವಚ್ಛ ತೊಳೆದು ಹೆರೆದುಕೊಳ್ಳಬೇಕು. ಅವುಗಳಲ್ಲಿ ಹೆರೆದ ನೆಲ್ಲಿಕಾಯಿಗಳ ಒಂದೂಕಾಲು (೧.೨೫) ಪ್ರಮಾಣ ಸಕ್ಕರೆಯನ್ನು ಹಾಕಿ ಅದರ ಮಿಶ್ರಣವನ್ನು ಮಾಡಬೇಕು. ಆ ಮಿಶ್ರಣವನ್ನು ಅಗಲ ತಳವಿರುವ ಪಾತ್ರೆಯಲ್ಲಿ ಮಂದ ಬೆಂಕಿಯಲ್ಲಿ ಕುದಿಸಿಕೊಳ್ಳಬೇಕು. ಅದರಲ್ಲಿ ಸ್ವಲ್ಪ ಏಲಕ್ಕಿಯ ಪುಡಿಯನ್ನು ಹಾಕಬೇಕು. ಈ ನೆಲ್ಲಿಕಾಯಿ ಮೊರಬ್ಬವನ್ನು ಗಾಜಿನ ಭರಣಿಯಲ್ಲಿ ತುಂಬಿಡಬೇಕು.

೨. ಮೊದಲು ನೆಲ್ಲಿಕಾಯಿಗಳನ್ನು ಸ್ವಚ್ಛ ತೊಳೆದು ಕುದಿಸಬೇಕು. ನಂತರ ಅವುಗಳನ್ನು ಹೆರೆದುಕೊಳ್ಳಬೇಕು. ಅದರಲ್ಲಿ ಎಷ್ಟು ಹೆರೆದ ನೆಲ್ಲಿಕಾಯಿಯ ಇರುತ್ತದೆಯೋ, ಅದರ ಒಂದೂಕಾಲು (೧.೨೫) ಸಕ್ಕರೆಯನ್ನು ಹಾಕಿ ಅದರ ಮಿಶ್ರಣವನ್ನು ಮಾಡಿ ಅದನ್ನು ಅಗಲ ತಳವಿರುವ ಪಾತ್ರೆಯಲ್ಲಿ ಮಂದ ಬೆಂಕಿಯ ಮೇಲೆ ಕುದಿಸಿಕೊಳ್ಳಬೇಕು. ರುಚಿಗಾಗಿ ಅದರಲ್ಲಿ ಸ್ವಲ್ಪ ಏಲಕ್ಕಿಯ ಪುಡಿಯನ್ನು ಹಾಕಬೇಕು. ಈ ನೆಲ್ಲಿಕಾಯಿ ಮೊರಬ್ಬಾವನ್ನು ಗಾಜಿನ ಭರಣಿಯಲ್ಲಿ ತುಂಬಿಡಬೇಕು.

೩ ಉ. ಒಣ ನೆಲ್ಲಿಕಾಯಿ

೧. ನೆಲ್ಲಿಕಾಯಿಗಳನ್ನು ಸ್ವಚ್ಛ ತೊಳೆದು, ಕುದಿಸಿ ಅವುಗಳಲ್ಲಿನ ಬೀಜಗಳನ್ನು ತೆಗೆಯಬೇಕು. ಅವುಗಳ ಹೋಳುಗಳನ್ನು ಮಾಡಿ ಬಿಸಿಲಿನಲ್ಲಿ ಸರಿಯಾಗಿ ಒಣಗಿಸಬೇಕು. ಈ ಒಣ ನೆಲ್ಲಿಕಾಯಿ ಗಳನ್ನು ಒಂದು ಗಾಜಿನ ಭರಣಿಯಲ್ಲಿ ತುಂಬಿಡಬೇಕು.

೨. ನೆಲ್ಲಿಕಾಯಿಗಳನ್ನು ಸ್ವಚ್ಛ ತೊಳೆದು, ಬೀಜಗಳನ್ನು ತೆಗೆದು ಅವುಗಳನ್ನು ಹೆಚ್ಚಿಕೊಳ್ಳಬೇಕು. ಈ ಹೋಳುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿಕೊಳ್ಳಬೇಕು. ಈ ಒಣನೆಲ್ಲಿಕಾಯಿಗಳನ್ನು ಗಾಜಿನ ಭರಣಿಯಲ್ಲಿ ತುಂಬಿಡಬೇಕು.

೩. ನೆಲ್ಲಿಕಾಯಿಗಳ ರಸ ಧಾತುಗಳ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ಆದ್ದರಿಂದ ನೆಲ್ಲಿಕಾಯಿಯಿಂದ ತಯಾರಿಸಿದ ಪದಾರ್ಥಗಳನ್ನು ಯಾವಾಗಲೂ ಗಾಜಿನ ಪಾತ್ರೆಗಳಲ್ಲಿಯೇ ಇಡಬೇಕು .

೪. ಗಿಡದಿಂದ ನೆಲ್ಲಿಕಾಯಿಗಳನ್ನು ತೆಗೆಯುವಾಗ ಜಾಗೃತೆ ವಹಿಸಬೇಕು : ‘ನೆಲ್ಲಿಕಾಯಿಗಳ ಗಿಡಗಳಲ್ಲಿ ಜೇನುಗೂಡುಗಳಿರುತ್ತವೆ, ಹಾಗಾಗಿ ನೆಲ್ಲಿಕಾಯಿಗಳನ್ನು ಜಾಗರೂಕತೆಯಿಂದ ತೆಗೆಯಬೇಕು.

೫. ಗಿಡದಿಂದ ನೆಲ್ಲಿಕಾಯಿಗಳನ್ನು ತೆಗೆದ ನಂತರ ೧-೨ ದಿನ ಗಳಲ್ಲಿಯೇ ನೆಲ್ಲಿಕಾಯಿಯ ಪದಾರ್ಥಗಳನ್ನು ತಯಾರಿಸಬೇಕು.

– ಶ್ರೀಮತಿ ಶೀತಲ ಜೋಶಿ, ಸನಾತನ ಆಶ್ರಮ, ಮೀರಜ (೨೨.೧೧.೨೦೨೦)