ಹಿಂದು ರಾಷ್ಟ್ರ ಸ್ಥಾಪನೆಗಾಗಿನ ಸಂಘರ್ಷಕ್ಕಾಗಿ ಭಗವಂತನ ಉಪಾಸನೆಯಿಂದ ಪ್ರಾಪ್ತವಾದ ಆತ್ಮಬಲವನ್ನು ಹೆಚ್ಚಿಸಿ !

‘ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವ’ ಅಂದರೆ ಹನ್ನೊಂದನೇ ‘ಅಖಿಲ ಭಾರತೀಯ ಹಿಂದು ರಾಷ್ಟ್ರ ಅಧಿವೇಶನ’ದ ನಿಮಿತ್ತ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ ಇವರ ಸಂದೇಶ

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

‘ಹಿಂದು ರಾಷ್ಟ್ರ ಸ್ಥಾಪನೆಯ ಉದ್ದೇಶದಿಂದ ಒಗ್ಗೂಡಿದ ಹಿಂದು ರಾಷ್ಟ್ರವೀರರಿಗೆ ನನ್ನ ನಮಸ್ಕಾರಗಳು !

ಹಿಂದು ರಾಷ್ಟ್ರ ಸ್ಥಾಪನೆಯ ಕಾಲವು ಈಗ ಸಮೀಪಿಸುತ್ತಿದೆ. ರಾಮರಾಜ್ಯದ ಸ್ಥಾಪನೆಗಾಗಿ ಮರ್ಯಾದಾಪುರುಷೋತ್ತಮ ಪ್ರಭು ಶ್ರೀರಾಮನಿಗೂ ಕೈಯಲ್ಲಿ ಧನುಷ್ಯವನ್ನು ಹಿಡಿದು ಯುದ್ಧ ಮಾಡಬೇಕಾಯಿತು. ಅನಂತರವೇ ರಾಮರಾಜ್ಯವು ಸಾಕಾರಗೊಂಡಿತು. ಆದುದರಿಂದ ಹಿಂದು ರಾಷ್ಟ್ರವು ಸಹಜಸಾಧ್ಯ, ಎಂಬ ಭ್ರಮೆಯಲ್ಲಿ ಯಾರೂ ಇರಬೇಡಿ.

ಧರ್ಮಸಂಸ್ಥಾಪನೆಯ ಕಾರ್ಯಕ್ಕೆ ಸೂಕ್ಷ್ಮದಲ್ಲಿನ ದೈವೀ ಶಕ್ತಿಗಳು ಸಹಾಯ ಮಾಡುತ್ತಿರುತ್ತವೆ, ಅದೇ ರೀತಿ ಸೂಕ್ಷ್ಮದಲ್ಲಿನ ಕೆಟ್ಟ ಶಕ್ತಿಗಳ ವಿರೋಧವೂ ಆಗುತ್ತಿರುತ್ತದೆ. ಸ್ಥೂಲದಲ್ಲಿ ಹಿಂದು ರಾಷ್ಟ್ರ-ಸ್ಥಾಪನೆಯ ಬೇಡಿಕೆಗೆ ಆಗುತ್ತಿರುವ ವಿರೋಧವು ಅದರ ದೃಶ್ಯ ಪ್ರಮಾಣವಾಗಿದೆ. ಭವಿಷ್ಯದಲ್ಲಿ ಈ ಹಿಂದು ರಾಷ್ಟ್ರ ವಿರೋಧಕರೊಂದಿಗೆ ಸಂಘರ್ಷ ಆಗಲಿಕ್ಕೇ ಇದೆ. ಸಂಘರ್ಷವಿಲ್ಲದೇ ದೇಶಕ್ಕೆ ಸ್ವಾತಂತ್ರ್ಯವೇ ಸಿಗದಿರುವಾಗ ಹಿಂದು ರಾಷ್ಟ್ರ ಸಿಗಲು ಹೇಗೆ ಸಾಧ್ಯ ? ಇದಕ್ಕಾಗಿ ಇಂದಿನಿಂದ ಎಲ್ಲ ರೀತಿಯ ಸಿದ್ಧತೆಯನ್ನು ಮಾಡಬೇಕು. ಸಂಘರ್ಷಕ್ಕಾಗಿ ಭಗವಂತನ ಉಪಾಸನೆಯಿಂದ ಪ್ರಾಪ್ತವಾದ ಆತ್ಮಬಲವು ಆವಶ್ಯಕವಾಗಿರುತ್ತದೆ. ಆತ್ಮಬಲಕ್ಕಾಗಿ ಪ್ರತಿಯೊಬ್ಬರು ಸಾಧನೆ, ಅಂದರೆ ಈಶ್ವರನ ಉಪಾಸನೆಯನ್ನು ಮಾಡಬೇಕು. ಕಾಲಮಹಿಮೆಗನುಸಾರ ೨೦೨೫ ರ ನಂತರ ಹಿಂದು ರಾಷ್ಟ್ರ ಬರಲಿಕ್ಕೇ ಇದೆ; ಆದರೆ ಈ ಕಾಲದಲ್ಲಿ ಈಶ್ವರನ ಉಪಾಸನೆ ಮತ್ತು ಹಿಂದು ರಾಷ್ಟ್ರದ ಪ್ರಾಪ್ತಿಗಾಗಿ ಮಾಡಿದ ನಿಷ್ಕಾಮ ಕರ್ಮಗಳಿಂದ ತಮ್ಮೆಲ್ಲರ ಆಧ್ಯಾತ್ಮಿಕ ಉನ್ನತಿಯಾಗುವುದು.
ಹಿಂದು ರಾಷ್ಟ್ರವೀರರಾದ ತಮಗೆಲ್ಲರಿಗೂ ಹಿಂದು ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕಾಗಿ ಭಕ್ತಿ ಮಾಡುವ ಬುದ್ಧಿ ಮತ್ತು ದೇವತೆಗಳ ಶಕ್ತಿ ಸಿಗಲಿ ಎಂದು ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಸಂಸ್ಥಾಪಕರು, ಸನಾತನ ಸಂಸ್ಥೆ