ಮಣಿಪುರದಲ್ಲಿ ಕ್ರೈಸ್ತ ಕುಕೀ ಭಯೋತ್ಪಾದಕರಿಂದ ನಡೆದ ದಾಳಿಯಲ್ಲಿ ೯ ಜನರ ಸಾವು !

ಕುಕೀ ಭಯೋತ್ಪಾದಕರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಕೇಂದ್ರ ಸರಕಾರದಿಂದ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !

ನವ ದೆಹಲಿ – ಕಳೆದ ಸುಮಾರು ಒಂದುವರೆ ತಿಂಗಳಿಂದ ಕ್ರೈಸ್ತರಿರುವ ಕುಕೀ ಭಯೋತ್ಪಾದಕರು ಮತ್ತು ಹಿಂದೂ ಮೈತೆಯಿ ಇವರಲ್ಲಿ ಘರ್ಷಣೆ ನಡೆಯುತ್ತಿದೆ. ಸ್ವಲ್ಪ ದಿನದ ಮಟ್ಟಿಗೆ ಶಾಂತವಾಗಿರುವ ಘರ್ಷಣೆ ಕಳೆದ ಎರಡು ದಿನಗಳಿಂದ ಮತ್ತೆ ಭುಗಿಲೆದ್ದು ಖಾಮೆಲೋಕ ಗ್ರಾಮದಲ್ಲಿ ಹಿಂಸಾಚಾರ ನಡೆದಿದೆ. ಜೂನ್ ೧೩ ರಂದು ರಾತ್ರಿ ಕುಕೀ ಭಯೋತ್ಪಾದಕರಿಂದ ಇಲ್ಲಿಯ ಮೈತೆಯಿ ಬಹುಸಂಖ್ಯಾತ ಪ್ರದೇಶದಲ್ಲಿ ನಡೆಸಿದ ದಾಳಿಯಲ್ಲಿ ೯ ಜನರು ಸಾವನ್ನಪ್ಪಿದ್ದಾರೆ ಹಾಗೂ ೧೦ ಜನರು ಗಾಯಗೊಂಡಿದ್ದಾರೆ. ದಾಳಿಕೋರರ ಬಳಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇದ್ದವು ಎಂದು ಹೇಳಲಾಗುತ್ತಿದೆ.

೧. ಇಲ್ಲಿಯ ಫೌಗಾಕಚಾವೋ ಇಖಾಯಿ ಗ್ರಾಮದಲ್ಲಿ ಕುಕೀ ಜನಾಂಗದ ಜನರು ಮೈತೆಯಿ ಇರುವ ಪ್ರದೇಶದಲ್ಲಿ ಛಾವಣಿ ತಯಾರಿಸುವ ಪ್ರಯತ್ನ ಮಾಡುತ್ತಿದ್ದರು. ಆಗ ಕುಕೀ ಭಯೋತ್ಪಾದಕರು ಮತ್ತು ಭದ್ರತಾ ಪಡೆಯ ಸೈನಿಕರ ನಡುವೆ ಗುಂಡುಹಾರಾಟ ನಡೆಯಿತು.

೨. ರಾಜ್ಯದಲ್ಲಿ ಜೂನ್ ೧೫ ರ ವರೆಗೆ ಇಂಟರ್ನೆಟ್ ಬಂದ್ ಮಾಡಲಾಗಿದೆ.

೩. ಪೂರ್ವೊತ್ತರ ಸಮನ್ವಯಕ ಸಮಿತಿಯ ಅಧ್ಯಕ್ಷ ಮತ್ತು ಅಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇವರು ಇತ್ತೀಚಿಗೆ ಮಣಿಪುರದಲ್ಲಿನ ಹಿಂಸೆಯ ವರದಿ ಪಡೆದಿದ್ದರು. ಅವರು ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರನ್ನು ಭೇಟಿ ಮಾಡಿ ಅವರಿಗೆ ಒಟ್ಟಾರೆ ಪರಿಸ್ಥಿತಿಯ ವರದಿ ಪ್ರಸ್ತುತಪಡಿಸುವರು.

೪. ಕುಕೀ ಭಯೋತ್ಪಾದಕರು ಮೈತೆಯಿ ಜನಾಂಗದ ಜನರನ್ನು ಹುಡುಕಲು ಡ್ರೋನ್ ಉಪಯೋಗಿಸುತ್ತಿರುವುದು ಬೆಳಕಿಗೆ ಬಂದಿದೆ. ವಿಷ್ಣುಪುರ ಜಿಲ್ಲೆಯಲ್ಲಿನ ಪೋಯಿಗಕ್ವಾವೋ ಇಖಾಯಿ ಗ್ರಾಮದ ಜನರಿಗೆ ಈ ಡ್ರೋನ್ ಸಿಕ್ಕಿದೆ.

೫. ಇಲ್ಲಿಯವರೆಗೆ ನಡೆದ ಹಿಂಸಾಚಾರದಲ್ಲಿ ಒಟ್ಟು ೧೦೦ ಕ್ಕು ಹೆಚ್ಚಿನ ಜನರು ಸಾವನ್ನಪ್ಪಿರುವುದು ಮತ್ತು ೩೨೦ ಜನರು ಗಾಯಗೊಂಡಿದ್ದಾರೆ ಹಾಗೂ ೪೭ ಸಾವಿರ ಜನರಿಗೆ ಸಹಾಯ ಶಿಬಿರದ ಆಶ್ರಯ ಪಡೆದಿದ್ದಾರೆ.