ಅಜಿತ್ ಡೋವಲ್, ಅಂದರೆ ಅಂತರರಾಷ್ಟ್ರೀಯ ಸಂಪತ್ತು !
ನವ ದೆಹಲಿ – ಭಾರತದಲ್ಲಿರುವ ಅಮೇರಿಕಾದ ರಾಯಭಾರಿ ಎರಿಕ್ ಗಾರ್ಸೆಟಿ ಅವರು, ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ಡೋವಲ್ ಅವರನ್ನು ಶ್ಲಾಘಿಸಿತ್ತಾ ಡೋವಲ್ ಇವರು ರಾಷ್ಟ್ರೀಯ ಮಾತ್ರವಲ್ಲ, ಅಂತರರಾಷ್ಟ್ರೀಯ ಸಂಪತ್ತು ಎಂದು ಹೇಳಿದರು. ಅವರು ಭಾರತೀಯ ಕೈಗಾರಿಕಾ ಒಕ್ಕೂಟದ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಅವರು ಡಿಜಿಟಲ್ ಕ್ಷೇತ್ರದಲ್ಲಿ ಭಾರತದ ಕ್ರಾಂತಿಯನ್ನೂ ಶ್ಲಾಘಿಸಿದರು.
ಈ ಸಮಯದಲ್ಲಿ ಅವರು ಮಾತನಾಡುತ್ತಾ, ನಾವು ‘ಫೋರ್ ಜಿ’, ‘ಫೈವ್ ಜಿ’, ‘ಸಿಕ್ಸ್ ಜಿ’ ಮುಂತಾದ ತಂತ್ರಜ್ಞಾನಗಳ ಬಗ್ಗೆ ಮಾತನಾಡುತ್ತೇವೆ; ಆದರೆ ಭಾರತ ಅದಕ್ಕಿಂತ ಹೆಚ್ಚು ಶಕ್ತಿಶಾಲಿ ತಂತ್ರಜ್ಞಾನವನ್ನು ಹೊಂದಿದೆ ಮತ್ತು ಅದೆಂದರೆ ‘ಗುರೂಜಿ’ ಎಂದು ಹೇಳಿದರು.
US ambassador to India Eric Garcetti lauded national security advisor Ajit Doval, calling him an “international treasure”https://t.co/GQSqE5TiFe
— Hindustan Times (@htTweets) June 13, 2023