೪ ಮೌಲ್ವಿಗಳಿಗೆ ೧೪ ದಿನದ ನ್ಯಾಯಾಂಗ ಕಸ್ಟಡಿ !

ಬಿಹಾರದಲ್ಲಿ ಮುಸಲ್ಮಾನ ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣ

(ಮೌಲಾನ ಎಂದರೆ ಇಸ್ಲಾಂನ ಅಭ್ಯಾಸಕ)

ಮನಮಾಡ – ರೈಲಿನಲ್ಲಿ ಬಿಹಾರದಿಂದ ಮನಮಾಡ ಮಾರ್ಗವಾಗಿ ಪುಣೆ ಮತ್ತು ಸಾಂಗಲಿ ಜಿಲ್ಲೆಗೆ ಕರೆದುಕೊಂಡು ಹೋಗಲಾಗಿರುವ ಮುಸಲ್ಮಾನ ಮಕ್ಕಳ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ರೇಲ್ವೆ ಪೊಲೀಸರು ದೂರು ದಾಖಲಿಸಿ ೪ ಮೌಲ್ವಿಗಳಿಗೆ ೧೪ ದಿನದ ನ್ಯಾಯಾಂಗ ಕಸ್ಟಡಿ ನೀಡಿದ್ದಾರೆ. ಜೂನ್ ೧೨ ರಂದು ಮನಮಾಡ ಲೋಹಮಾರ್ಗ ಪೊಲೀಸರು ಈ ನಾಲ್ಕು ಜನರನ್ನು ಮನಮಾಡ ನ್ಯಾಯಾಲಯದಲ್ಲಿ ಹಾಜರಪಡಿಸಿದ್ದರು. ಕಳೆದ ವಾರದಲ್ಲಿ ಮನಮಾಡ ಶಹರದಲ್ಲಿ ಈ ಘಟನೆ ನಡೆದಿದೆ. ಮನಮಾಡ ರೈಲು ನಿಲ್ದಾಣದಲ್ಲಿ ಲೋಹಮಾರ್ಗ ಪೊಲೀಸ್ ಮತ್ತು ರೈಲ್ವೆ ಸುರಕ್ಷಾ ದಳದಿಂದ ೨೯ ಮುಸಲ್ಮಾನ ಹುಡುಗರ ಕಳ್ಳ ಸಾಗಾಣಿಕೆ ತಡೆದರು. ಈ ಪ್ರಕರಣದಲ್ಲಿ ಮೌಲ್ವಿಗಳ ವಿರುದ್ಧ ದೂರು ದಾಖಲಿಸಲಾಗಿತ್ತು. ಈ ಪ್ರಕರಣದಲ್ಲಿ ಇಗತಪುರಿ ಹಾಗೂ ತ್ರಂಬಕೇಶ್ವರದ ಸಂಸದ ಹಿರಾಮಣ ಖೋಸಕರ, ಹಿಂದೂ ಮುಸ್ಲಿಂ ಹಕ್ ಸುರಕ್ಷಾ ಮತ್ತು ವಿಕಾಸ ಮಹಾಸಮಿತಿಯ ಅಂಜುಮ ಮಕರಾನಿ, ನೂರಿ ಅಕಾಡೆಮಿ ಹಾಜಿ ವಸೀಮ ಪಿರಜಾದಾ, ಎಜಾಜ್ ರಾಜಾ ಮಕರಾನಿ ಸಹಿತ ಈ ಮುಸಲ್ಮಾನ ಪೋಷಕ ಶಿಷ್ಟ ಮಂಡಳದಿಂದ ಜಿಲ್ಲಾಧಿಕಾರಿ ಟಿ. ಗಂಗಾಧರನ್ ಇವನ್ನು ಭೇಟಿ ಮಾಡಿದರು. ‘ನಮ್ಮ ಮಕ್ಕಳು ಚಿಕ್ಕವರಾಗಿದ್ದಾರೆ ಅವರನ್ನು ನಮ್ಮ ವಶಕ್ಕೆ ನೀಡಿರಿ. ಕಾನೂನು ರೀತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲು ನಾವು ಸಹಕಾರ ನೀಡುತ್ತೇವೆ’, ಎಂದು ಅವರು ಮನವಿಯ ಮೂಲಕ ಒತ್ತಾಯಿಸಿದರು. ಇದರ ಕುರಿತು ಜಿಲ್ಲಾಧಿಕಾರಿ ಗಂಗಾಧರನ್, ಮಕ್ಕಳನ್ನು ವಶಕ್ಕೆ ನೀಡಲು ಕಾನೂನಿನ ರೀತಿಯಲ್ಲಿ ಪ್ರಕ್ರಿಯೆ ನಡೆಯುತ್ತಿರುವುದರಿಂದ ಅದು ಪೂರ್ಣ ಆದನಂತರ ಮಕ್ಕಳನ್ನು ಪೋಷಕರ ಸ್ವಾಧೀನಕ್ಕೆ ನೀಡಲಾಗುವುದು ಎಂದು ಹೇಳಿದರು.