`ಅಜಮೇರ 92’ ಚಲನಚಿತ್ರವನ್ನು ವಿರೋಧಿಸುತ್ತಾ ಅಜಮೇರ ದರ್ಗಾದ ಸೇವಾಕಾರ್ಯ ಸಂಘಟನೆಯ ಕಾರ್ಯದರ್ಶಿ ಸರವರ ಚಿಶ್ತಿಯ ಖೇದಕರ ಹೇಳಿಕೆ !
ಅಜಮೇರ (ರಾಜಸ್ಥಾನ) – ಮನುಷ್ಯನನ್ನು ಹಣದಿಂದ ಭ್ರಷ್ಟಗೊಳಿಸಲು ಸಾಧ್ಯವಿಲ್ಲ, ಅವನು ಮೌಲ್ಯದಿಂದಲೂ ಭ್ರಷ್ಟನಾಗಲು ಸಾಧ್ಯವಿಲ್ಲ; ಆದರೆ ಹೆಣ್ಣು ಎಂದರೆ, ಎಷ್ಟೇ ದೊಡ್ಡ ವ್ಯಕ್ತಿಯೂ ಜಾರಬಹುದು. ವಿಶ್ವಾಮಿತ್ರನಂತಹವರೂ ಜಾರುತ್ತಾರೆ. (ಋಷಿ ವಿಶ್ವಾಮಿತ್ರರು ಅಪ್ಸರೆ ಮೇನಕೆಯೊಂದಿಗೆ ವಿವಾಹವಾಗಿದ್ದರು. ಮುಂದೆ ಕಠಿಣ ತಪಸ್ಸು ಮಾಡಿ ಷಡ್ರಿಪುಗಳ ಮೇಲೆ ನಿಯಂತ್ರಣ ಸಾಧಿಸಿ ಬ್ರಹ್ಮ ಋಷಿಯಾದರು. ಹಿಂದೂಗಳ ಋಷಿಗಳ ಮೇಲೆ ಅಸಹ್ಯಕರ ಟಿಪ್ಪಣೆ ಮಾಡುವ ಮುಸಲ್ಮಾನರು ಇದನ್ನು ಹೇಳಲು ಏಕೆ ಮರೆಯುತ್ತಾರೆ ?- ಸಂಪಾದಕರು) ಇಂದು ಯಾವ ಬಾಬಾರವರು ಜೈಲಿನಲ್ಲಿದ್ದಾರೆಯೋ ಅವರು ಹುಡುಗಿಯರ ಪ್ರಕರಣದ ಸಂದರ್ಭದಲ್ಲಿಯೇ ಜೈಲಿನಲ್ಲಿದ್ದಾರೆ. ಈ ವಿಷಯವೇ ಹೀಗಿದೆ, ಎಲ್ಲರ ಕಾಲು ಜಾರುತ್ತದೆ ಎಂದು ಅಜಮೇರ ದರ್ಗಾದ `ಅಂಜುಮನ ಸಯ್ಯದ ಜಾದಗಾನ’ ಸೇವಾಕಾರ್ಯ ಸಂಘಟನೆಯ ಕಾರ್ಯದರ್ಶಿ ಸರವರ ಚಿಶ್ತಿ ಹೇಳಿಕೆ ನೀಡಿರುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮದಿಂದ ಪ್ರಸಾರವಾಗುತ್ತಿದೆ. ಈ ವಿಡಿಯೋ ಜೂನ 4 ರಂದು ಮಾಡಿರುವುದಾಗಿದೆಯೆಂದು ಹೇಳಲಾಗುತ್ತಿದೆ. ಅಜಮೇರನಲ್ಲಿ 1992 ರಲ್ಲಿ ನಡೆದ ಲೈಂಗಿಕ ಕಿರುಕುಳದ ಘಟನೆಯನ್ನು ಆಧರಿಸಿ `ಅಜಮೇರ 92’ ಈ ಚಲನಚಿತ್ರದ ಕುರಿತು ಸರವರ ಚಿಶ್ತಿಯವರು ಮೇಲಿನಂತೆ ಹೇಳಿಕೆ ನೀಡಿದ್ದಾರೆ. 1992ರಲ್ಲಿ ಚಿಶ್ತಿ ಮನೆತನದ ಕೆಲವು ಕಾಮುಕರು ಹಿಂದೂ ಹುಡುಗಿಯ ಲೈಂಗಿಕ ಕಿರುಕುಳ ನೀಡಿದ್ದರು. ಈ ಚಲನಚಿತ್ರ ಇದನ್ನು ಆಧರಿಸಿದ್ದು, ಅದು ಬರುವ ಜುಲೈ 14 ರಂದು ದೇಶದಲ್ಲಿ ಪ್ರದರ್ಶನಗೊಳ್ಳಲಿದೆ.
Sarwar Chisti of the Ajmer Dargah justifying Ajmer 1992 sex scandal, where hundreds of Hindu girls were victims. He says “larki aisi cheez hai”. pic.twitter.com/sOXpxZm87K
— Pagan 🚩 (@paganhindu) June 10, 2023
1. `ಅಂಜುಮನ ಸಯ್ಯದ ಜಾದಗಾನ’ ಇವರ ಸಯ್ಯದ ಗುಲಾಮ ಕಿಬರಿಯಾ ಇವರು ಈ ಸಂದರ್ಭದಲ್ಲಿ ಮಾತನಾಡುತ್ತಾ, ಅಜಮೇರ ದರ್ಗಾಕ್ಕೆ ಪ್ರತಿಯೊಂದು ಧರ್ಮದ ಜನರು ಬರುತ್ತಾರೆ. ಇಲ್ಲಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದರೆ ಅದು ಬಹಳ ತಪ್ಪಾಗಿದೆ. ಈ ವಿಡಿಯೋ ಇದುವರೆಗೂ ನಾನು ನೋಡಿಲ್ಲ. ವಿಡಿಯೋ ನೋಡಿದ ಬಳಿಕ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು. ನಮ್ಮ ಸಮಾಜ ಮಹಿಳೆಯರು ಮತ್ತು ಹೆಣ್ಣು ಮಕ್ಕಳನ್ನು ಗೌರವಿಸುತ್ತೇನೆ.
2. ಅಜಮೇರ ನಗರದ ಉಪಮಹಾಪೌರ ನೀರಜ ಜೈನ ಇವರು ಮಾತನಾಡಿ, ಸರವರ ಚಿಶ್ತಿಯವರ ಹೇಳಿಕೆಯಿಂದ ಮಹಿಳೆಯರ ವಿಷಯದಲ್ಲಿ ಅವರ ಅಸಹ್ಯಕರ ಮಾನಸಿಕತೆ ಕಂಡು ಬರುತ್ತದೆ. ಸರವರ ಮಹಿಳೆಯರನ್ನು ಕೇವಲ ಉಪಭೋಗದ ವಸ್ತುವೆಂದು ತಿಳಿಯುತ್ತಾರೆ. ಇದು ಸ್ತ್ರೀಶಕ್ತಿಯ ಅವಮಾನವಾಗಿದೆ. ಅವರ ಹೇಳಿಕೆಯ ಬಗ್ಗೆ ಖಾದಿಮ ಸಮಾಜ ಮತ್ತು ಪೊಲೀಸರು ಕ್ರಮ ಕೈಕೊಳ್ಳಬೇಕು ಎಂದು ಹೇಳಿದರು.
ಸಂಪಾದಕೀಯ ನಿಲುವು
|