ಧುಳೆಯ ೧೦ ಸಾವಿರಕ್ಕಿಂತಲೂ ಹೆಚ್ಚಿನ ಹಿಂದೂಗಳಿಂದ ‘ಜನಾಕ್ರೋಶ ಆಂದೋಲನ’ !

ಶ್ರೀರಾಮನ ಮೂರ್ತಿಯ ವಿಡಂಬನೆ ಮಾಡಿರುವುದರ ವಿರುದ್ಧ ಹಿಂದೂಗಳಿಂದ ಸಂಘಟಿತ ಪ್ರತಿಕ್ರಿಯೆ !

ಜನಾಕ್ರೋಶ ಮೆರವಣಿಗೆಯಲ್ಲಿ ಸಹಭಾಗಿರುವ ಸಾವಿರಾರು ಹಿಂದೂ

ಧುಳೆ – ಛತ್ರಪತಿ ಸಂಭಾಜಿನಗರ (ಮೊಗಲಾಯಿ) ಪ್ರದೇಶದಲ್ಲಿ ಶ್ರೀ ರಾಮನ ಮೂರ್ತಿ ಮತ್ತು ದೇವಸ್ಥಾನದ ವಿಡಂಬನೆ ಮಾಡಿರುವುದನ್ನು ಖಂಡಿಸಿ ೧೦ ಸಾವಿರಕ್ಕಿಂತಲೂ ಹೆಚ್ಚಿನ ಹಿಂದೂಗಳು ಜೂನ್ ೧೦ ರಂದು ಬೆಳಿಗ್ಗೆ ಭವ್ಯ ಪ್ರತಿಭಟನಾ ಆಂದೋಲನ ನಡೆಸಿದರು ಮತ್ತು ‘ಒಗ್ಗಟ್ಟಿನ ಶಕ್ತಿ’ಯಿಂದ ಪ್ರತ್ಯುತ್ತರ ನೀಡಿರುವುದರಿಂದ ವಿಡಂಬನೆ ನಡೆಸುವವರು ಇನ್ನು ಮುಂದೆ ಎಚ್ಚರಿಕೆಯಿಂದ ಇರುವ’ ಸಂದೇಶವೇ ನೀಡಿದರು. ‘ಸಕಲ ಹಿಂದೂ ಸಮಾಜ’ದ ವತಿಯಿಂದ ‘ಜನಾಕ್ರೋಶ ಆಂದೋಲನ’ದ ಮೂಲಕ ಪ್ರಚಂಡ ಸಂಖ್ಯೆಯಲ್ಲಿ ಹಿಂದೂಗಳ ಒಗ್ಗಟ್ಟಿನಿಂದ ಸ್ಥಳೀಯ ಶ್ರೀರಾಮ ದೇವಸ್ಥಾನದಲ್ಲಿನ ಮೂರ್ತಿಯ ವಿಡಂಬನೆಯನ್ನು ಖಂಡಿಸಿದರು. ಎಲ್ಲಾ ಕಡೆಯ ಹಿಂದೂಗಳು ‘ಇನ್ನು ಮುಂದೆ ಹಿಂದೂಗಳು ಆಘಾತಗಳನ್ನು ಸಹಿಸುವುದಿಲ್ಲ’, ಎಂದು ಕೃತಿಶೀಲ ಆಗುವದಕ್ಕಾಗಿ ಪ್ರೇರಣೆಯನ್ನು ಈ ಆಂದೋಲನದ ಮೂಲಕ ನೀಡಿದರು.

ಜೂನ್ ೬ ರಂದು ಇಲ್ಲಿಯ ರಾಮನ ದೇವಸ್ಥಾನದಲ್ಲಿನ ಶ್ರೀರಾಮನ ಮೂರ್ತಿಯ ಮುಖ ಭಗ್ನ ಗೊಳಿಸಿದರು, ಹಾಗೂ ದೇವಸ್ಥಾನದಲ್ಲಿ ಮದ್ಯದ ಬಾಟಲಿಗಳನ್ನು ಎಸೆದಿದ್ದರು. ಅದರ ನಂತರ ಎಲ್ಲಾ ಹಿಂದೂಗಳು ತಕ್ಷಣ ಒಗ್ಗಟ್ಟಿನಿಂದ ಜೂನ್ ೭ ರಂದು ಒಂದು ಸಭೆ ನಡೆಸಿದರು. ಅದರಲ್ಲಿ ಇತರ ವಕ್ತಾರರ ಜೊತೆಗೆ ಹಿಂದೂ ಜನಜಾಗೃತಿ ಸಮಿತಿಯ ಕು. ರಾಗೇಶ್ರೀ ದೇಶಪಾಂಡೆ ಇವರು ಕೂಡ ಪ್ರಬೋಧನೆ ನೀಡಿದರು. ಈ ಸಭೆಗೆ ನೂರಾರು ಹಿಂದೂಗಳು ಉಪಸ್ಥಿತರಿದ್ದರು. ಆಂದೋಲನದಲ್ಲಿ ಹಿಂದೂಗಳಿಗೆ ಸಹಭಾಗಿ ಆಗುಲು ಕರೆ ನೀಡುವುದಕ್ಕಾಗಿ ಒಂದು ಕಿರುಚಿತ್ರ ತಯಾರಿಸಲಾಗಿತ್ತು.

ಆಂದೋಲನದಲ್ಲಿ ‘ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು’, ‘ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲೇಬೇಕು’, ‘ಜೈ ಭವಾನಿ ಜೈ ಶಿವಾಜಿ’ ಇಂತಹ ಅನೇಕ ಕ್ಷಾತ್ರಭಾವದ ಘೋಷಣೆಗಳು ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಇವರ ಮತ್ತು ‘ಜೈ ಶ್ರೀರಾಮ ಜೈ ಶ್ರೀರಾಮ’ ಹೀಗೆ ರಾಮನಾಮದ ಜಯಭೋಷದಲ್ಲಿ ಧುಳೆ ನಗರವು ಪ್ರತಿಧ್ವನಿಸಿತು . ಹಿಂದೂಗಳು ಕೇಸರಿ ಟೋಪಿಗಳು, ಕೇಸರಿ ಶಲ್ಯಗಳು ಮತ್ತು ಕೇಸರಿ ಉಡುಪುಗಳು ಧರಿಸಿದ್ದರಿಂದ, ಹಾಗೂ ಕೇಸರಿ ಧ್ವಜದಿಂದ ಸಾವಿರಾರು ಹಿಂದೂಗಳ ಮೆರವಣಿಗೆಯಿಂದ ಧುಳೆಯ ರಸ್ತೆಗಳು ಕೇಸರಿಮಯವಾಗಿತ್ತು. ಈ ಮೆರವಣಿಗೆಯಲ್ಲಿ ಶ್ರೀರಾಮ, ಸೀತಾ, ಲಕ್ಷ್ಮಣ ಇವರ ಸುಂದರ ಮೂರ್ತಿಗಳು ಹೂವಿನ ಹಾರಗಳಿಂದ ಅಲಂಕರಿಸಲಾಗಿತ್ತು. ಹಿಂದೂಗಳು ಕೈಯಲ್ಲಿ ಕಪ್ಪು ಫಲಕ ಹಿಡಿದಿದ್ದರು. ಅದರ ಮೇಲೆ ವಿಡಂಬನೆಯ ನಿಷೇಧಕ್ಕಾಗಿ ಬರೆದಿರುವ ಲೇಖನ ಇತ್ತು.

ಪ್ರಭು ಶ್ರೀರಾಮನ ಆರತಿಯಿಂದ ಮೋರ್ಚಾ ಆರಂಭವಾಯಿತು. ಮೆರವಣಿಗೆಯ ಕೊನೆಯಲ್ಲಿ ‘ಜೂನ್ ೧೪ ರಂದು ಶ್ರೀ ರಾಮನ ಹೊಸ ಮೂರ್ತಿ ಸ್ಥಾಪನೆ ಮಾಡುವುದಾಗಿ ಭಾಜಪದ ಶ್ರೀ. ಅನುಪ ಅಗ್ರವಾಲ ಇವರು ಘೋಷಣೆ ಮಾಡಿದರು. ಜೂನ್ ೧೦ ರಂದು ಸ್ಥಳೀಯರಿಂದ ಧುಳೆ ಮಾರುಕಟ್ಟೆ ಸ್ವ ಪ್ರೇರಣೆಯಿಂದ ಮುಚ್ಚಲಾಗಿತ್ತು.

ಈ ಮೆರವಣಿಗೆಗೋಸ್ಕರ ಜೂನ್ ೯ ರಿಂದಲೇ ನಗರದಲ್ಲಿ ಎಲ್ಲಾ ಕಡೆಗೆ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ಪ್ರಸ್ತುತ ನಗರದಲ್ಲಿ ೧೪೪ ಸೆಕ್ಷನ ಜಾರಿ ಮಾಡಲಾಗಿದ್ದು ವದಂತಿಗಳನ್ನು ನಂಬಬಾರದೆಂದು ಕರೆ ನೀಡಲಾಗಿದೆ.

ಸಂಪಾದಕೀಯ ನಿಲುವು

ಧರ್ಮ ಶ್ರದ್ಧೆಗೆ ಧಕ್ಕೆ ಬಂದಿರುವುದರಿಂದ ಧುಳೆಯಲ್ಲಿನ ಹಿಂದೂಗಳಿಂದ ತೋರಿಸಿರುವ ಒಗ್ಗಟ್ಟು ಶ್ಲಾಘನೀಯವಾಗಿದೆ. ಎಲ್ಲಾ ಕಡೆಯ ಹಿಂದೂಗಳು ಇದೆ ರೀತಿಯ ಒಗ್ಗಟ್ಟು ತೋರಿಸಿದರೆ, ಹಿಂದೂಗಳ ವಿರುದ್ಧ ಯಾರಿಗೂ ಏನನ್ನು ಮಾಡುವ ಧೈರ್ಯ ಬರುವುದಿಲ್ಲ. ಈ ಮೂಲಕ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲು ಸಮಯ ಬೇಕಾಗುವುದಿಲ್ಲ, ಇದನ್ನು ತಿಳಿಯಿರಿ !