|
ಅಜಮೇರ (ರಾಜಸ್ಥಾನ) – ೧೯೯೨ ರಲ್ಲಿ ಮಹಾವಿದ್ಯಾಲಯದಲ್ಲಿ ೨೫೦ ಕ್ಕೂ ಹೆಚ್ಚಿನ ಯುವತಿಯರ ಲೈಂಗಿಕ ಕಿರುಕುಳ ನೀಡಿರುವ ಘಟನೆಯ ಮೇಲೆ ಆಧಾರಿತ ಮುಂಬರುವ ಹಿಂದಿ ಚಲನಚಿತ್ರ ‘ಅಜಮೇರ ೯೨’ ಮುಸಲ್ಮಾನ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಅಜಮೇರ ಶರೀಫ ದರ್ಗಾ ಕಮಿಟಿಯು ಚಲನಚಿತ್ರ ಪ್ರದರ್ಶನದ ಮೊದಲು ನಮಗೆ ತೋರಿಸಬೇಕೆಂದು ಒತ್ತಾಯಿಸಿದೆ.
Union Minister @gssjodhpur responds to the controversy around the film ‘Ajmer 92’.
“What happened there in 1992 & the way scores of families were shattered, if there’s a film on it, it only prepares us against any such possible events in the future,” he says. pic.twitter.com/OEmMKE8B0U
— TIMES NOW (@TimesNow) June 7, 2023
೧. ಅಜಮೇರ ಶರೀಫ್ ದರ್ಗಾ ಕಮಿಟಿಯ ಪ್ರಕಾರ, ಈ ಚಲನಚಿತ್ರದಿಂದ ಒಂದು ವಿಶೇಷ ಸಮುದಾಯವನ್ನು ಗುರಿ ಮಾಡುವ ಪ್ರಯತ್ನ ಮಾಡಲಾಗುತ್ತಿದೆ. ಈ ಚಲನಚಿತ್ರದಿಂದ ಏನಾದರೂ ಅಜಮೇರ ಶರೀಫ ದರ್ಗಾ ಮತ್ತು ಖ್ವಾಜಾ ಮೋಯಿನುದ್ದಿನ್ ಚಿಶ್ತಿ ಇವರ ಗೌರವಕ್ಕೆ ಧಕ್ಕೆ ತರುವ ಪ್ರಯತ್ನ ನಡೆದಿದ್ದರೆ, ಚಲನಚಿತ್ರದ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳುವೆವು !
Show ‘Ajmer 1992’ to Ajmer Dargah Committee before its release: Radical Islamist Shoaib Jamai opposes the upcoming movie, Sarwar Chishti calls it political gimmickhttps://t.co/bY2GuR4tMX
— OpIndia.com (@OpIndia_com) June 9, 2023
೨. ಇಂಡಿಯಾ ಮುಸ್ಲಿಂ ಫೌಂಡೇಶನಿನ್ ಮುಖ್ಯಸ್ಥ ಶೋಯೆಬ್ ಜಮಾಯಿ ಇವರು ಟ್ವೀಟ್ ಮಾಡಿ, ಅಜಮೇರ ದರ್ಗಾ ಕಮಿಟಿಯ ಸೈಯದ್ ಗುಲಾಮ ಕಿಬ್ರಿಯ ಮತ್ತು ಕಾರ್ಯದರ್ಶಿ ಸರವರ ಚಿಶ್ತಿ ಹಾಗೂ ಸೇವಕರ ಕಮೀಟಿಯ ಜೊತೆಗೆ ಚರ್ಚೆ ನಡೆದ ನಂತರ, ‘ಅಜಮೇರ ೯೨’ ಚಲನಚಿತ್ರ ಅಜಮೇರ ನಗರದಲ್ಲಿ ನಡೆದ ಘಟನೆಯವರೆಗೆ ಸೀಮಿತವಾಗಿರುವುದಾದರೇ ನಮಗೆ ಯಾವುದೇ ಸಮಸ್ಯೆ ಇಲ್ಲ; ಆದರೆ ಷಡ್ಯಂತ್ರದ ಮೂಲಕ ಏನಾದರೂ ಅಜಮೇರ ಶರೀಫ ದರ್ಗಾ ಮತ್ತು ಖ್ವಾಜಾ ಮೊಯಿನುದ್ದಿನ್ ಚಿಸ್ತಿ ಇವರ ಗೌರವಕ್ಕೆ ಧಕ್ಕೆ ತರುವ ಪ್ರಯತ್ನವಾದರೆ, ಚಲನಚಿತ್ರ ನಿರ್ಮಾಪಕರ ವಿರುದ್ಧ ಕ್ರಮ ಕೈಗೊಳ್ಳುವೆವು. ಸಂಪೂರ್ಣ ದೇಶದಲ್ಲಿ ಶಾಂತಿಯುತವಾಗಿ ಪ್ರತಿಭಟಿಸಲಾಗುವುದು ಎಂದು ಅಧಿಕೃತ ಘೋಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.
೩. ಅಜಮೇರ ದರ್ಗಾದ ಸೇವಕರ ಸಂಸ್ಥೆ ‘ಅಂಜುಮನ್ ಸೈಯದ್ ಜಾಗದಾನ್’ ನ ಕಾರ್ಯದರ್ಶಿ ಸೈಯದ್ ಸರವರ ಚಿಶ್ತಿ ಇವರು ಫೇಸ್ಬುಕ್ ನಲ್ಲಿ ಒಂದು ವಿಡಿಯೋ ಶೇರ್ ಮಾಡುತ್ತಾ, ‘ಅಜಮೇರ ೯೨ ‘ ಇದು ಒಂದು ರಾಜಕೀಯ ನೀತಿಯ ಭಾಗವಾಗಿದೆ. ಕರ್ನಾಟಕದಲ್ಲಿನ ಚುನಾವಣೆಯ ಸಮಯದಲ್ಲಿ ‘ದ ಕೇರಳ ಸ್ಟೋರಿ’ ಚಲನಚಿತ್ರ ಪ್ರದರ್ಶಿತವಾಯಿತು. ಈಗ ರಾಜಸ್ಥಾನದಲ್ಲಿ ಚುನಾವಣೆ ಇರುವಾಗ ‘ಅಜಮೇರ ೯೨’ ಚಲನಚಿತ್ರ ನಿರ್ಮಿಸಲಾಗಿದೆ. ಈ ಚಲನಚಿತ್ರದ ಮೇಲೆ ನಿಷೇಧ ಹೇರಬೇಕು; ಕಾರಣ ಈ ಚಲನಚಿತ್ರ ಒಂದು ವಿಶಿಷ್ಟ ಸಮಾಜವನ್ನು ಗುರಿ ಮಾಡುತ್ತಿದೆ.
೪. ಈ ಹಿಂದೆ ‘ಜಮಿಯತ್ ಉಲೇಮ-ಎ-ಹಿಂದ’ ನ ಮುಖ್ಯಸ್ಥ ಮೌಲಾನ (ಇಸ್ಲಾಂನ ಅಭ್ಯಾಸಕ) ಮಹಮದ್ ಮದನಿ ಇವರು ಕೂಡ ‘ಅಜಮೇರ ೯೨’ ಈ ಚಲನಚಿತ್ರ ಅಜಮೇರ ಶರೀಫ ದರ್ಗಾದ ಗೌರವಕ್ಕೆ ಧಕ್ಕೆ ತರುವ ಉದ್ದೇಶದಿಂದ ನಿರ್ಮಿಸಲಾಗಿದೆ ಎಂದು ದಾವೆ ಮಾಡಿದ್ದರು. ಮದನಿ ಇವರು, ವರ್ತಮಾನದಲ್ಲಿ ಸಮಾಜದಲ್ಲಿ ಬಿರುಕು ಮೂಡಿಸುವ ಕಾರಣಗಳು ಹುಡುಕಲಾಗುತ್ತಿದೆ ಎಂದು ಹೇಳಿದರು.
(ಸೌಜನ್ಯ : India News)
ಸಂಪಾದಕರ ನಿಲುವುದೇಶದಲ್ಲಿ ಮತಾಂಧ ಮುಸಲ್ಮಾನರು ಹಿಂದೂಗಳ ಮೇಲೆ ನಡೆಸಿರುವ ಅತ್ಯಾಚಾರದ ಘಟನೆಗಳು ಈಗ ಜಗತ್ತಿನೆದುರು ಮಂಡಿಸಲು ಆರಂಭವಾದ ನಂತರ ಅವರಿಗೆ ಉರಿಯುವುದು ಸಹಜವಾಗಿದೆ ಮತ್ತು ಆದ್ದರಿಂದಲೇ ಈ ರೀತಿಯ ಒತ್ತಾಯ ಮಾಡುತ್ತಿದ್ದಾರೆ ! |