ರಾಜ್ಯದಲ್ಲಿ ಕಾಂಗ್ರೆಸ್ ಸಚಿವರ ವಿರುದ್ಧ ಭಾಜಪ ಪ್ರತಿಭಟನೆ

ಗೋ ಹತ್ಯೆಯನ್ನು ಬೆಂಬಲಿಸಲಾಗಿತ್ತು

ಬೆಂಗಳೂರು – ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ನೂತನ ಕಾಂಗ್ರೆಸ್ ಸರಕಾರದಲ್ಲಿನ ಪಶುಸಂಗೋಪನಾ ಸಚಿವ ಕೆ. ವೆಂಕಟೇಶ ಅವರು, ‘ಎಮ್ಮೆಗಳನ್ನು ರಾಜಾರೋಷವಾಗಿ ಕೊಲ್ಲಲಾಗುತ್ತಿದೆ; ಹಾಗಾದರೆ ಹಸುಗಳಿಗೇಕೆ ಕೊಲ್ಲುವುದು ಬೇಡ ? ಎಂಬ ಖೇದಕರ ಪ್ರಶ್ನೇ ಮಾಡಿದ್ದರು. ಅವರ ಈ ಹೇಳಿಕೆಯನ್ನು ಭಾಜಪ ನಿಷೇಧಿಸಿ ಭಾಜಪ ಕಾರ್ಯಕರ್ತರು ಗೋವುಗಳೊಂದಿಗೆ ಬೀದಿಗಿಳಿದರು. ಈ ಸಮಯದಲ್ಲಿ ಭಾಜಪದ ಕಾರ್ಯಕರ್ತರು ಕೆ. ವೆಂಕಟೇಶ್ ಅವರ ವಿರುದ್ಧ ಘೋಷಣೆ ಕೂಗಿದರು. ‘ಚುನಾವಣೆಗೂ ಮುನ್ನ ಕಾಂಗ್ರೆಸ್ ಕೆಲವು ಆಶ್ವಾಸನೆಗಳನ್ನು ನೀಡಿತ್ತು. ಅಧಿಕಾರಕ್ಕೆ ಬಂದ ಬಳಿಕವೂ ಈಡೇರಿಲ್ಲ’ ಎಂದು ಭಾಜಪದ ಕಾರ್ಯಕರ್ತರು ಕಿಡಿಕಾರಿದ್ದಾರೆ.