ಇಬ್ಬರು ಮುಸಲ್ಮಾನ ಪ್ರಯಾಣಿಕರ ನಮಾಜಗಾಗಿ ಬಸ್ ನಿಲ್ಲಿಸಿದ ಹಿಂದೂ ಚಾಲಕ ಅಮಾನತು !

ಬರೇಲಿ (ಉತ್ತರ ಪ್ರದೇಶ) – ಜನರಥ ಬಸ್ಸನ್ನು ದಾರಿಯಲ್ಲಿ ನಿಲ್ಲಿಸಿ ಇಬ್ಬರು ಮುಸಲ್ಮಾನ ಪ್ರಯಾಣಿಕರಿಗೆ ನಮಾಜ್‌ ಮಾಡಲು ಅವಕಾಶ ನೀಡಿದ ಹಿಂದೂ ಚಾಲಕನನ್ನು ಅಮಾನತುಗೊಳಿಸಲಾಗಿದೆ. ಇದರೊಂದಿಗೆ ಸಾರಿಗೆ ಮೋಹಿತ ಯಾದವ ಅವರ ಗುತ್ತಿಗೆಯನ್ನು ರದ್ದುಗೊಳಿಸಲಾಗಿದೆ. ವಿಭಾಗೀಯ ಕಚೇರಿ ವ್ಯವಸ್ಥಾಪಕ ದೀಪಕ ಚೌಧರಿ ಅವರ ಆದೇಶದ ಮೇರೆಗೆ ಬರೇಲಿ ಆಗ್ರಾದ ಉಪವಿಭಾಗೀಯ ವ್ಯವಸ್ಥಾಪಕ ಸಂಜೀವ ಶ್ರೀವಾಸ್ತವ ಇವರು ಈ ಕ್ರಮ ಕೈಗೊಂಡಿದ್ದಾರೆ.

(ಸೌಜನ್ಯ – The Lallantop)

ಬರೇಲಿ ಆಗ್ರಾದ ಜನರಥ ಬಸ್ ಸ್ಯಾಟಲೈಟ್ ಬಸ್ ನಿಲ್ದಾಣದಿಂದ ಕೌಶಂಬಿ ಕಡೆಗೆ ಹೋಗುತ್ತಿತ್ತು. ಕೆ.ಪಿ. ಸಿಂಗ ಈತ ಬಸ್ ಚಾಲಕನಾಗಿದ್ದ. ರಾತ್ರಿಯ ವೇಳೆ ಬರೇಲಿಯಿಂದ ಹೊರಟ ನಂತರ ಬಸ್ ಚಾಲಕ ದಾರಿಯಲ್ಲಿ ಬಸ್ ನಿಲ್ಲಿಸಿದ. ಸ್ವಲ್ಪ ಸಮಯದ ನಂತರ ಪ್ರಯಾಣಿಕರು ಬಸ್ ನಿಲ್ಲಿಸಲು ಕಾರಣ ಕೇಳಿದರು. ಇದಾದ ಬಳಿಕ ಬಸ್‌ನಲ್ಲಿದ್ದ ಇಬ್ಬರು ಮುಸಲ್ಮಾನ ಪ್ರಯಾಣಿಕರು ಬಸ್‌ನಿಂದ ಇಳಿದು ನಡುರಸ್ತೆಯಲ್ಲಿ ನಮಾಜ ಮಾಡುತ್ತಿರುವುದು ಕಂಡುಬಂದಿತ್ತು. ಇದಕ್ಕೆ ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದರು. ಸತ್ಯೇಂದ್ರ ಎಂಬ ಪ್ರಯಾಣಿಕ ಇದನ್ನು ವಿಡಿಯೋ ಮಾಡಿ ಎಲ್ಲೆಡೆ ಪ್ರಸಾರಿಸಿದ್ದಾನೆ. ಈ ಕುರಿತು ಟ್ವಿಟರ್ ಮೂಲಕ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ದೂರು ನೀಡಿದ ನಂತರ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಯಿತು.

ಸಂಪಾದಕರ ನಿಲುವು

ಇಬ್ಬರು ಮುಸಲ್ಮಾನ ಪ್ರಯಾಣಿಕರ ನಮಾಜಗಾಗಿ ಇತರ ಪ್ರಯಾಣಿಕರ ಸಮಯವನ್ನು ವ್ಯರ್ಥ ಮಾಡುವ ಮತ್ತು ಸಾರ್ವಜನಿಕ ಸಾರಿಗೆಯ ನಿಯಮಗಳನ್ನು ಉಲ್ಲಂಘಿಸುವ ಬಸ್ ಚಾಲಕನನ್ನು ತಕ್ಷಣವೇ ಅಮಾನತುಗೊಳಿಸಿ ಅವನಿಗೆ ಕೆಲಸದಿಂದ ವಜಾಗೊಳಿಸಬೇಕು !

ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೂ ಹೆಚ್ಚಿನ ರಾಜಕಾರಣಿಗಳು ಮುಸಲ್ಮಾನರನ್ನು ಒಲೈಸಿದ್ದರಿಂದಲೇ ಸರಕಾರಿ ನೌಕರರಿಗೂ ಹಾಗೆ ಮಾಡುವ ಧೈರ್ಯವಾಗುತ್ತದೆ ! ಈ ಚಿತ್ರಣವನ್ನು ಬದಲಾಯಿಸಲು ಹಿಂದೂ ರಾಷ್ಟ್ರ ಸ್ಥಾಪನೆ ಬಿಟ್ಟರೆ ಪರ್ಯಾಯವಿಲ್ಲ !

ಸರ್ವಧರ್ಮ ಸಮಭಾವ ಎನ್ನುವವರು ಈಗೇಕೆ ಮೌನ ?