ಮಿಶನರಿ ನಿಧಿ ಸಂಗ್ರಹಣೆಯಲ್ಲಿ ಭ್ರಷ್ಟಾಚಾರದ ಅಪಾಯ ! – ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್

ವ್ಯಾಟಿಕನ್ ಸಿಟಿ – ಪೋಪ್ ಫ್ರಾನ್ಸಿಸ್ ಅವರು ಇತ್ತೀಚೆಗೆ ವ್ಯಾಟಿಕನದಲ್ಲಿನ ಮಿಶನರಿ ನಿಧಿ ಸಂಗ್ರಹಕಾರರಿಗೆ ತಮ್ಮ ಕೆಲಸದಲ್ಲಿ ಹಣಕಾಸಿನ ಭ್ರಷ್ಟಾಚಾರವಾಗದಂತೆ ನೋಡಿಕೊಳ್ಳಲಬೇಕೆಂದು ಎಚ್ಚರಿಸಿದ್ದಾರೆ. ಪೋಪ್ ಫ್ರಾನ್ಸಿಸ್ ಅವರು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕ್ಯಾಥೋಲಿಕ್ ಚರ್ಚ್‌ನ ಮಿಶನರಿ ಕಾರ್ಯಕ್ಕಾಗಿ ಹಣವನ್ನು ಸಂಗ್ರಹಿಸುವ ವ್ಯಾಟಿಕನ್‌ನ ‘ಪಾಂಟಿಫಿಕಲ್ ಮಿಷನ್ ಸೊಸೈಟಿ’ಯ ನಿರ್ದೇಶಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಪೋಪ್ ಫ್ರಾನ್ಸಿಸ್ ಇವರು ಮಾತನ್ನು ಮುಂದುವರೆಸುತ್ತಾ, ‘ಮಿಶನರಿ ಕೆಲಸದಲ್ಲಿ ಆಧ್ಯಾತ್ಮದ ಕೊರತೆಯಿದ್ದರೆ ಮತ್ತು ಉದ್ಯಮಿದೊಂದಿಗೆ ನಂಟಿದ್ದರೆ, ಭ್ರಷ್ಟಾಚಾರವು ತಕ್ಷಣವೇ ಹರಡುತ್ತದೆ. ಇಂದಿಗೂ ಪತ್ರಿಕೆಗಳಲ್ಲಿ ಚರ್ಚನ ಭ್ರಷ್ಟಾಚಾರದ ಸುದ್ದಿ ಪ್ರಕಟವಾಗುತ್ತಿರುವುದನ್ನು ನಾವು ನೋಡುತ್ತೇವೆ. ಅಮೇರಿಕಾದಲ್ಲಿನ ಚರ್ಚ್ ಶಾಖೆಯಲ್ಲಿನ ಸಿಬ್ಬಂದಿಗಳ ವರ್ಗಾವಣೆಯಲ್ಲಿ ಪಾರದರ್ಶಕತೆ ಇರಬೇಕೆಂದು ವ್ಯಾಟಿಕನ್ ಆಗ್ರಹಿಸಿದೆ’ ಎಂದು ಹೇಳಿದರು.

ಸಂಪಾದಕೀಯ ನಿಲುವು

‘ಇದರಿಂದ ಚರ್ಚ್ ಸಂಸ್ಥೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಯುತ್ತದೆ’, ಎಂದು ಯಾರಾದರೂ ಭಾವಿಸಿದರೆ ತಪ್ಪೇನಿದೆ ? ಹಿಂದೂಗಳ ದೇವಾಲಯಗಳ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ ದೇವಾಲಯಗಳನ್ನು ವಶಪಡಿಸಿಕೊಳ್ಳುವ ಸರಕಾರಿ ಸಂಸ್ಥೆಗಳು ಚರ್ಚ್‌ನಲ್ಲಿನ ಭ್ರಷ್ಟಾಚಾರದ ಬಗ್ಗೆ ಮೌನವಾಗಿರುವುದನ್ನು ಗಮನಿಸಿ !