ಓರ್ವ ಮುಸಲ್ಮಾನನು ಹಿಂದೂ ಯುವಕನ ಹಣೆಯ ಮೇಲೆ ತಿಲಕ ಹಚ್ಚಿದ್ದರಿಂದ ಸ್ಥಳೀಯ ಮುಸಲ್ಮಾನರಿಂದ ಆ ಮುಸಲ್ಮಾನ್ ಯುವಕನ ಮೇಲೆ ಸಾಮಾಜಿಕ ಬಹಿಷ್ಕಾರ !

ದಮೋಹ (ಮಧ್ಯಪ್ರದೇಶ)ದಲ್ಲಿನ ಘಟನೆ !

ದಮೋಹ (ಮಧ್ಯಪ್ರದೇಶ) – ಚುನಾವಣೆಯ ಪ್ರಚಾರ ಸಭೆಯಲ್ಲಿ ಒಬ್ಬ ಹಿಂದೂ ಯುವಕನಿಗೆ ಗುಲಾಲ್ ನ ತಿಲಕ ಇಟ್ಟಿರುವ ಆರಿಫ್ ಶಾಹ ಈ ಮುಸಲ್ಮಾನ ಯುವಕನ ಮೇಲೆ ಸ್ಥಳೀಯ ಮುಸಲ್ಮಾನರು ಬಹಿಷ್ಕಾರ ಹಾಕಿದ್ದಾರೆ. ಈ ಯುವಕನ ತಾಯಿಯು ಮೃತಪಟ್ಟ ನಂತರ ಒಬ್ಬ ಮುಸಲ್ಮಾನನು ಕೂಡ ಅವನ ಮನೆಗೆ ಹೋಗಲಿಲ್ಲ. ಅವನನ್ನು ಇತರ ಮುಸಲ್ಮಾನರು ಮನೆಗೆ ಕರೆಯುತ್ತಿಲ್ಲ. ಈ ಯುವಕನು ಪೊಲೀಸರಿಗೆ ದೂರು ನೀಡಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ವರ್ಷದಿಂದ ಈ ಬಹಿಷ್ಕಾರ ನಡೆಯುತ್ತಿರುವ ಮಾಹಿತಿ ಬೆಳಕಿಗೆ ಬಂದಿದೆ. ಆರೀಫ, ಬಹಿಷ್ಕಾರ ಹಾಕಿರುವವರು ಅವನ (ಆರೀಫನ) ಭೂಮಿಯ ಮೇಲೆ ಕಾನೂನು ಬಾಹಿರ ನಿಯಂತ್ರಣ ಪಡೆಯುವ ಪ್ರಯತ್ನ ಕೂಡ ಮಾಡಿದ್ದರು ಎಂದು ಆರೋಪಿಸಿದ್ದಾನೆ.

ಸಂಪಾದಕೀಯ ನಿಲುವು

ಈ ಘಟನೆಯ ತದ್ವಿರುದ್ದವಾಗಿ ಹಿಂದೂ ಮುಸಲ್ಮಾನನಿಗೆ ಸಹಾಯ ಮಾಡಿದರೇ ಹಿಂದೂಗಳು ಅವನ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕುತ್ತಿದ್ದರೇ, ಆಗ ಹಿಂದೂಗಳನ್ನು ‘ತಾಲಿಬಾನಿ’ಗಳೆಂದು ಹೇಳಲಾಗುತ್ತಿತ್ತು; ಆದರೆ ಇಲ್ಲಿ ಬಹಿಷ್ಕಾರ ಹಾಕಿದವರು ಮುಸಲ್ಮಾನರಾಗಿರುವುದರಿಂದ ಎಲ್ಲಾ ರಾಜಕೀಯ ಪಕ್ಷ, ಪ್ರಗತಿ(ಅಧೋಗತಿ)ಪರ ಸಂಘಟನೆಗಳ ಮೌನವಾಗಿರುವುದು ತಿಳಿಯಿರಿ !