‘ಪೂಜಾಸ್ಥಳ ಕಾನೂನುರಹಿತಗೊಳಿಸಿದರೆ ಅರಾಜಕತೆ ನಿರ್ಮಾಣವಾಗಬಹುದು !’ – ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ

ಇಂದೂರ (ಮಧ್ಯಪ್ರದೇಶ) – ಪೂಜಾಸ್ಥಳ ಕಾನೂನು ನಿರಂತರವಾಗಿ ಉಲ್ಲಂಘನೆಯಾಗುತ್ತಿದೆ. ಈ ಕಾನೂನನ್ನು ರದ್ದುಗೊಳಿಸಿದರೆ ದೇಶದಲ್ಲಿ ವಿವಿಧ ಧರ್ಮಗಳನ್ನು ಒಪ್ಪುವವರಲ್ಲಿ ಅರಾಜಕತೆ ನಿರ್ಮಾಣವಾಗಬಹುದು. ಆದ್ದರಿಂದ ಸರಕಾರ ಈ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ ಒಂದು ಸಮ್ಮೇಳನದಲ್ಲಿ ಮನವಿ ಮಾಡಿದೆ. ಇಲ್ಲಿಯ ಮಹು ಪ್ರದೇಶದ ಮದರಸಾದಲ್ಲಿ ಆಯೋಜಿಸಲಾಗಿದ್ದ 2 ದಿನಗಳ ಸಮ್ಮೇಳನದಲ್ಲಿ ವಿವಿಧ ವಿಷಯಗಳ ಮೇಲೆ ಮುಸಲ್ಮಾನರು ಚರ್ಚಿಸಿದರು. ಈ ಸಂದರ್ಭದಲ್ಲಿ ಸಮಾನ ನಾಗರಿಕ ಕಾನೂನು ಇದು ಸರ್ವಧರ್ಮೀಯರಿಗೆ ಹಾನಿಕಾರಕವಾಗಿದೆಯೆಂದು ಹಾಗೆಯೇ ದೇಶಾದ್ಯಂತ ದ್ವೇಷದ ವಾತಾವರಣ ನಿರ್ಮಾಣ ಮಾಡಿ ಸಹೋದರರು ಮತ್ತು ಸೌಹಾರ್ದವನ್ನು ನಷ್ಟಗೊಳಿಸಲಾಗುತ್ತಿದೆಯೆಂದು ಹೇಳಲಾಯಿತು. ಈ ಸಮ್ಮೇಳನದಲ್ಲಿ 11 ಪ್ರಸ್ತಾವನೆಗಳನ್ನು ಅನುಮೋದಿಸಲಾಗಿದ್ದು, ಪೂಜಾಸ್ಥಳ ಕಾನೂನು, ಸಮಾನ ನಾಗರಿಕ ಕಾನೂನು, ಸಮಲೈಂಗಿಕ ವಿವಾಹ, ಬುಲ್ಡೋಜರ ಸಂಸ್ಕೃತಿ, ಗುಂಪು ಹಿಂಸೆ ಮುಂತಾದ ವಿಷಯಗಳ ಮೇಲೆ ಚರ್ಚಿಸಲಾಯಿತು.

1. ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ ವಕ್ತಾರ ಡಾ. ಸಯ್ಯದ ಕಾಸಿಮ ರಸೂಲ ಇಲಿಯಾಸ ಇವರು, ಯಾರದೇ ಭೂಮಿಯನ್ನು ಅನಧಿಕೃತವಾಗಿ ಕಬಳಿಸಿ ಮಸೀದಿಯನ್ನು ಕಟ್ಟಲು ಸಾಧ್ಯವಿಲ್ಲ (ಒಂದೆಡೆ ಹೀಗೆ ಹೇಳುವುದು ಮತ್ತು ಇನ್ನೊಂದೆಡೆ ಹಿಂದೂಗಳ ದೇವಸ್ಥಾನಗಳನ್ನು ಕೆಡವಿ ಅಲ್ಲಿ ಕಟ್ಟಲಾಗಿರುವ ಮಸೀದಿಗಳನ್ನು ಬೆಂಬಲಿಸುವುದು. ಇದು ದ್ವಿಮುಖನೀತಿಯಾಗಿದೆ ! ಒಂದು ವೇಳೆ ಅನಧಿಕೃತವಾಗಿ ಭೂಮಿಯನ್ನು ಕಬಳಿಸಿ ಅಲ್ಲಿ ಮಸೀದಿಯನ್ನು ಕಟ್ಟುವುದು ಇಸ್ಲಾಂನಲ್ಲಿ ತಪ್ಪಾಗಿದ್ದರೆ, ಮುಸಲ್ಮಾನರು ಹಿಂದೂಗಳಿಂದ ಕಬಳಿಸಿರುವ ದೇವಸ್ಥಾನಗಳನ್ನು ಹಿಂದೂಗಳಿಗೆ ಏಕೆ ಮರಳಿ ಕೊಡುವುದಿಲ್ಲ ! – ಸಂಪಾದಕರು)

2. ಸಮ್ಮೇಳನದ ಅಧ್ಯಕ್ಷ ಮೌಲಾನಾ ಖಾಲಿದ ಸೈಫುಲ್ಲಾಹ ರಹಮಾನಿಯವರು ಮಾತನಾಡಿ, ದೇಶದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರಿಕನಿಗೆ ಯಾವುದೇ ಧರ್ಮವನ್ನು ಸ್ವೀಕರಿಸುವ ಮತ್ತು ಗೌರವಿಸುವ ಮೂಲಭೂತ ಅಧಿಕಾರವನ್ನು ನೀಡಲಾಗಿದೆ. ಇದರೊಂದಿಗೆ ಧರ್ಮಪ್ರಚಾರದ ಸ್ವಾತಂತ್ರ್ಯವನ್ನೂ ನೀಡಿದೆ. ಹೀಗಿರುವಾಗ ಕೆಲವು ರಾಜ್ಯಗಳು ಕಾನೂನು ರಚಿಸಿ ನಾಗರಿಕರಿಗೆ ಇದರಿಂದ ವಂಚಿತಗೊಳಿಸಲು ಪ್ರಯತ್ನಿಸಿದೆ ಎಂದು ಹೇಳಿದರು.

ಸಂಪಾದಕರ ನಿಲುವು

‘ಪೂಜಾ ಸ್ಥಳ ಕಾನೂನು 1991’ ಅನ್ನು 1991 ರಲ್ಲಿ ಕಾಂಗ್ರೆಸ್ ರಚಿಸಿದೆ. ಅದಕ್ಕಿಂತ ಮೊದಲು ಇಂತಹ ಯಾವುದೇ ಕಾನೂನು ಇರಲಿಲ್ಲ. ಆಗ ದೇಶದಲ್ಲಿ ಯಾವುದೇ ಅರಾಜಕತೆ ನಿರ್ಮಾಣವಾಗಿರಲಿಲ್ಲ; ಹೀಗಿರುವಾಗ ಈಗ ಅದು ಹೇಗೆ ನಿರ್ಮಾಣವಾಗುವುದು? ಇಂತಹ ಹೇಳಿಕೆಗಳನ್ನು ನೀಡಿ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ ಹಿಂದೂಗಳಿಗೆ ಬೆದರಿಕೆ ಹಾಕಲು ಪ್ರಯತ್ನಿಸುತ್ತಿದೆಯೆನ್ನುವುದು ಗಮನಿಸಬೇಕಾಗಿದೆ !