‘ಜಮೀಯತ್ ಉಲೇಮಾ-ಎ-ಹಿಂದ’ ಸಂಘಟನೆಯ ಆಗ್ರಹ
ನವ ದೆಹಲಿ – ಮುಸಲ್ಮಾನರ ‘ಜಮಿಯತ್ ಉಲೇಮಾ-ಎ-ಹಿಂದ’ ಈ ಸಂಘಟನೆಯು ಮುಂಬರುವ ಹಿಂದಿ ಚಲನಚಿತ್ರ ‘ಅಜಮೇರ್-92’ಅನ್ನು ನಿಷೇಧಿಸಲು ಒತ್ತಾಯಿಸುತ್ತಿದೆ. ಈ ಚಲನಚಿತ್ರ ಇನ್ನೂ ಬಿಡುಗಡೆಯಾಗಬೇಕಿದೆ. ಈ ಚಲನಚಿತ್ರದಲ್ಲಿ ೧೯೯೨ ರಲ್ಲಿ ಅಜಮೇರದ ಮಹಾವಿದ್ಯಾಲಯದಲ್ಲಿ ಹಿಂದೂ ವಿದ್ಯಾರ್ಥಿನಿಯರನ್ನು ಬಲೆಗೆ ಸಿಲುಕಿಸಿ ಅವರ ಲೈಂಗಿಕ ಶೋಷಣೆ ಮಾಡಿರುವ ಘಟನೆಗಳು ಇದರಲ್ಲಿ ಮಂಡಿಸಲಾಗಿದೆ. ೨೫೦ ಕ್ಕೂ ಹೆಚ್ಚು ಹಿಂದೂ ವಿದ್ಯಾರ್ಥಿನಿಯರ ಶೋಷಣೆ ಮಾಡಲಾಗಿತ್ತು. ಶೋಷಣೆ ಮಾಡುವವರಲ್ಲಿ ಅಜಮೇರ ದರ್ಗಾದ ಸೇವಕರ ಸಮಾವೇಶವಿತ್ತು. ಇದರಲ್ಲಿ ಅನೇಕರಿಗೆ ಇಲ್ಲಿಯವರೆಗೆ ಶಿಕ್ಷೆ ಕೂಡ ಆಗಿಲ್ಲ. ಹೀಗಿರುವಾಗ ಈಗ ‘ಜಮಿಯತ್ ಉಲೇಮಾ-ಎ-ಹಿಂದ’ ಈ ಚಲನಚಿತ್ರವನ್ನು ನಿಷೇಧಿಸಲು ಒತ್ತಾಯಿಸುತ್ತಿದೆ.
फिल्म अजमेर 92 को बैन करने की मांग. महमूद मदनी ने सरकार से की मांग.#Ajmer92 @_poojaLive pic.twitter.com/zwpPDhYdzO
— News18 India (@News18India) June 5, 2023
ಜಮೀಯತ್ ನ ಅಧ್ಯಕ್ಷ ಮೌಲಾನ (ಮುಸಲ್ಮಾನ ಅಧ್ಯಯನಕಾರರು) ಮಹಮ್ಮದ್ ಮದನಿ ಇವರು, ಅಜ್ಮೀರ್ ಷರೀಫ್ ದರ್ಗಾ ಕಳಂಕಿತಗೊಳಿಸುವುದಕ್ಕಾಗಿ ನಿರ್ಮಿಸಲಾಗಿರುವ ಈ ಚಲನಚಿತ್ರವನ್ನು ತಕ್ಷಣವೇ ನಿಷೇಧಿಸಬೇಕು. ಅಪರಾಧಿ ಘಟನೆಗಳನ್ನು ಧರ್ಮಕ್ಕೆ ಜೋಡಿಸುವ ಬದಲು ಅಪರಾಧದ ವಿರುದ್ಧ ಸಂಘಟಿತವಾಗಿ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ. ಇಂತಹ ಚಲನಚಿತ್ರಗಳು ಸಮಾಜದಲ್ಲಿ ಬಿರುಕು ಮೂಡಿಸಬಹುದು. ಅಭಿವ್ಯಕ್ತಿ ಸ್ವಾತಂತ್ರ್ಯ ಒಂದು ವರದಾನವಾಗಿದ್ದು ಅದು ಯಾವುದೇ ಪ್ರಜಾಪ್ರಭುತ್ವದ ಶಕ್ತಿ ಆಗಿದೆ; ಆದರೆ ಅದರ ಹಿಂದೆ ಇರುವ ದೇಶ ವಿಭಜಿಸುವ ವಿಚಾರಗಳಿಗೆ ಪ್ರೋತ್ಸಾಹ ನೀಡಲಾಗುವುದಿಲ್ಲ. ಅಜಮೇರ ದರ್ಗಾ ಹಿಂದೂ ಮತ್ತು ಮುಸಲ್ಮಾನ್ ಇವರ ಐಕ್ಯತೆಯ ಸಜೀವ ಉದಾಹರಣೆಯಾಗಿದೆ. ಯಾರು ಈ ದರ್ಗಾ ಅವಮಾನಿಸಲು ಪ್ರಯತ್ನ ಮಾಡುತ್ತಿದ್ದಾರೆ, ಅವರು ಸ್ವತಃ ಅವಮಾನಕ್ಕೊಳಗಾಗಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಹಿಂದೆ ಹಿಂದೂ-ಮುಸಲ್ಮಾನ್ ಸಹೋದರರು ಎಂಬ ಸುಳ್ಳು ಕಥೆಗಳ ಹೇಳುವ ಚಲನಚಿತ್ರ ಪ್ರಸಾರಗೊಳಿಸಿ ಹಿಂದೂಗಳನ್ನು ಭ್ರಮೆಯಲ್ಲಿ ಇಟ್ಟು ಅವರಿಗೆ ಮೋಸ ಮಾಡಲಾಗುತ್ತಿತ್ತು. ಈಗ ಹಿಂದೂಗಳು ಸತ್ಯ ಇತಿಹಾಸ ಹೇಳಿ ವಸ್ತು ಸ್ಥಿತಿಯನ್ನು ಮಂಡಿಸುವ ಚಲನಚಿತ್ರ ಪ್ರದರ್ಶನಗೊಳ್ಳಲು ಆರಂಭವಾದಾಗ ಮುಸಲ್ಮಾನ ಸಂಘಟನೆಗಳು ಮತ್ತು ಅದರ ನಾಯಕರಿಗೆ ಹೊಟ್ಟೆಯುರಿ ಬಂದೇ ಬರುತ್ತದೆ ! ಅದರಿಂದಲೇ ಈಗ ‘ದ ಕಾಶ್ಮೀರ್ ಫೈಲ್ಸ್’, ‘ದ ಕೇರಳ ಸ್ಟೋರಿ’ ಈಗ ‘ಅಜಮೇರ ೯೨’ ಈ ಚಲನಚಿತ್ರಗಳ ಮೇಲೆ ನಿಷೇಧ ಹೇರಲು ಒತ್ತಾಯಿಸಲಾಗುತ್ತಿದೆ, ಇದನ್ನು ತಿಳಿದುಕೊಳ್ಳಿ ! |