ಪೊಲೀಸ್ ತನಿಖೆಯಲ್ಲಿ ಜಹಾಲ್ ನಕ್ಸಲನಿಂದ ಮಾಹಿತಿ !
ನಾಗಪುರ – ನಕ್ಸಲರು ಪೊಲೀಸರ ವಿರುದ್ಧದಲ್ಲಿ ಪುಲ್ವಾಮಾದ ಭಯೋತ್ಪಾದನಾ ದಾಳಿಯಂತಹ ಮಾರಣಾಂತಿಕ ದಾಳಿಯನ್ನು ನಡೆಸುವ ಸಿದ್ಧತೆಯಲ್ಲಿದೆ ಎಂಬುದು ಬೆಳಕಿಗೆ ಬಂದಿದೆ. ಪೊಲೀಸರು ಮಹಾರಾಷ್ಟ್ರದ ನೆರೆಯ ರಾಜ್ಯದಲ್ಲಿ ಒಬ್ಬ ಜಹಾಲ್ ನಕ್ಸಲನನ್ನು ಬಂಧಿಸಿದ ಬಳಿಕ ಆತನ ವಿಚಾರಣೆ ನಡೆಸಿದಾಗ ಈ ಮಾಹಿತಿ ಬೆಳಕಿಗೆ ಬಂದಿದೆ.
नक्षलवादी पोलिसांविरोधात पुलवामा हल्ल्यासारखा घातक हल्ला करण्याच्या तयारीत? जहाल नक्षलवाद्याचा चौकशीत गौप्यस्फोट#Maharashtra #Naxal #Maoist #MaharashtraNews https://t.co/knheLN3uYl
— ABP माझा (@abpmajhatv) June 2, 2023
೧. ಬಂಧಿತ ನಕ್ಸಲನು, ತೆಲಂಗಾಣ ರಾಜ್ಯದಲ್ಲಿ ನಕ್ಸಲೀಯರು ವಿಶೇಷ ‘ಡಾಯರೆಕ್ಶನಲ್ ಮೈನ್ಸ’ಗಳನ್ನು ತಯಾರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಪೊಲೀಸರ ಬಳಿ ಒಪ್ಪಿಕೊಂಡಿದ್ದಾನೆ.
೨. ನಕ್ಸಲೀಯರು ಚೌಕಾಕಾರದ ಪೆಟ್ಟಿಗೆಗಳಲ್ಲಿ ಸ್ಫೋಟಕಗಳನ್ನು ತುಂಬಿ ನಿರ್ಜನ ಪ್ರದೇಶಗಳಲ್ಲಿನ ಸಶಸ್ತ್ರ ಪೊಲೀಸ್ ಚೌಕಿಗಳ ಮೇಲೆ ದಾಳಿ ಮಾಡಲು ಟ್ರ್ಯಾಕ್ಟರ್ ಅಥವಾ ಬೊಲೆರೊದಂತಹ ವಾಹನವನ್ನು ಬಳಸಲು ಯೋಜಿಸಿದ್ದಾರೆ ಎಂದು ತಿಳಿದುಬಂದಿದೆ.
೩. ಇದಲ್ಲದೆ ನಕ್ಸಲರು ‘ಲೋಡೆಡ್ ಡ್ರೋನ್’ ದಾಳಿಯ ಸಿದ್ಧತೆಯಲ್ಲಿ ಇದ್ದಾರೆ ಎಂದು ಬಂಧಿತ ಜಹಾಲ್ ನಕ್ಸಲನು ಪೊಲೀಸರಿಗೆ ಹೇಳಿದ್ದಾನೆ.
೪. ಗಡಚಿರೋಲಿ ಸೇರಿದಂತೆ ಛತ್ತೀಸ್‌ಗಢದ ಹಲವು ಸ್ಥಳಗಳಲ್ಲಿ ಪೊಲೀಸರ ಮೇಲೆ ಕಣ್ಣಿಡಲು ನಕ್ಸಲೀಯರು ಡ್ರೋನ್‌ಗಳನ್ನು ಬಳಸಿದ್ದಾರೆ; ಆದರೆ ಇದೀಗ ಪ್ರಥಮ ಬಾರಿಗೆ ನಕ್ಸಲೀಯರು ಪೊಲೀಸರ ಮೇಲೆ ಸ್ಫೋಟಕಗಳ ಮೂಲಕ ದಾಳಿ ನಡೆಸುವ ಯೋಜನೆ ರೂಪಿಸಿದ್ದಾರೆ.
೫. ಕುತೂಹಲಕಾರಿ ಅಂದರೆ ಈ ಹಿಂದೆ ಕಾಶ್ಮೀರದ ಶ್ರೀನಗರದಲ್ಲಿನ ವಾಯುನೆಲೆಯ ಮೇಲೆ ಇದೇ ರೀತಿಯಲ್ಲಿ ಡ್ರೋನ್ ದಾಳಿ ನಡೆಸಲಾಗಿತ್ತು. ಇದರಿಂದಾಗಿ ಮಹಾರಾಷ್ಟ್ರದ ಜೊತೆಗೆ ಛತ್ತೀಸ್‌ಗಢ, ಮಧ್ಯಪ್ರದೇಶ, ತೆಲಂಗಾಣ ರಾಜ್ಯಗಳ ಪೊಲೀಸರು ಎಚ್ಚರಿಕೆವಹಿಸಿದ್ದಾರೆ
೬. ನೋಟು ನಿಷೇಧದ ನಿರ್ಧಾರದ ನಂತರ ಮಾವೋವಾದಿಗಳು ೨ ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಲು ಹರಸಾಹಸ ಪಡುತ್ತಿರುವುದು ಕಂಡು ಬರುತ್ತಿದೆ. ರಾಂಜನ್‌ಗಾಂವ್‌ನಲ್ಲಿ ೨ ನಕ್ಸಲ್ ಬೆಂಬಲಿಗರು ೬ ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನು ಬದಲಾಯಿಸುತ್ತಿದ್ದಾಗ ಬಂಧಿಸಲಾಗಿದೆ. ಆ ತನಿಖೆಯಲ್ಲಿ ಮಾವೋವಾದಿಗಳು ೨೦೦೦ ರೂಪಾಯಿ ನೋಟುಗಳನ್ನು ಬದಲಾಯಿಸುವಂತೆ ಗುತ್ತಿಗೆದಾರರು ಮತ್ತು ವ್ಯಾಪಾರಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ.
೭. ಗಡಚಿರೋಲಿ ಜಿಲ್ಲೆಯ ಎಟಾಪಲ್ಲಿ ತಾಲೂಕಿನ ತೊಡಗಟ್ಟಾದಿಂದ ಛತ್ತೀಸ್‌ಗಢ ರಾಜ್ಯದ ಶಿಲ್‌ಗರದಲ್ಲಿನ ನಕ್ಸಲ ಬೆಂಬಲಿಗರು ಆಂದೋಲನಕ್ಕಾಗಿ ಹಣ ಕಳುಹಿಸುತ್ತಿರುವುದು ಬಹಿರಂಗವಾಗಿದೆ. ಹೀಗಾಗಿ ಗಡಚಿರೋಲಿ ಜಿಲ್ಲೆಯ ಪ್ರತಿಯೊಂದು ಪೊಲೀಸ್ ಠಾಣೆಗೆ ಎಚ್ಚರಿಕೆ ನೀಡಲಾಗಿದೆ.
ಸಂಪಾದಕರ ನಿಲುವುನಕ್ಸಲ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸರಕಾರ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಬೇಕು ! |