|
ನವ ದೆಹಲಿ – ಜೂನ್ ೩ ರಂದು ಅಂದರೆ ಶನಿವಾರ, ಅಲಹಾಬಾದ್ ಉಚ್ಚ ನ್ಯಾಯಾಲಯದ ಒಂದು ಆದೇಶದ ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ಖಂಡಪೀಠವು ತಡೆ ನೀಡಿದೆ. ಅತ್ಯಾಚಾರದ ಒಂದು ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಸಂತ್ರಸ್ತೆಗೆ ಮಂಗಳದೋಷವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಆದೇಶಿಸಿತ್ತು. ಇದರಲ್ಲಿ ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಮಾಡಿ ಈ ನಿರ್ಧಾರಕ್ಕೆ ತಡೆ ನೀಡಿದೆ. ‘ಅತ್ಯಾಚಾರ ಪ್ರಕರಣಕ್ಕೂ ಜ್ಯೋತಿಷ್ಯಕ್ಕೂ ಸಂಬಂಧ ಹೇಗೆ ?’ ಎಂಬ ಪ್ರಶ್ನೆಯನ್ನು ಸುಪ್ರೀಂ ಕೋರ್ಟ್ ಕೇಳಿದೆ
ಮೇ ೨೩ ರಂದು, ಉಚ್ಚ ನ್ಯಾಯಾಲಯವು ಲಖನೌ ವಿದ್ಯಾ ಪೀಠದ ಜ್ಯೊತಿಷ ವಿಭಾಗದ ಮುಖಂಡರಿಗೆ, ಸಂಬಂಧಿತ ಪ್ರಕರಣದಲ್ಲಿ ಸಂತ್ರಸ್ತೆಗೆ ಮಂಗಳದೋಷವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸುವಂತೆ ಆದೇಶಿಸಿತ್ತು. ಇದಕ್ಕಾಗಿ ನ್ಯಾಯಾಲಯವು ೩ ವಾರಗಳ ಕಾಲಾವಕಾಶ ನೀಡಿತ್ತು. ಆರೋಪಿ ಅಲಹಾಬಾದ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕವಾಗಿದ್ದಾನೆ.
Woman filed Rape on the Pretext of Marriage.
Man filed for Bail in Lucknow Bench of #AllahabadHighCourt and claimed that the Marriage not happened because the girl is Manglik.
Lawyer of the Girl claimed that the Girl is not Manglik.
High Court asked the Astrology Department of… pic.twitter.com/TPlfNjFDYo— NCMIndia Council For Men Affairs (@NCMIndiaa) June 3, 2023
ಏನಿದು ಪ್ರಕರಣ ?
‘ಆರೋಪಿಯು ನನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿ ಅತ್ಯಾಚಾರ ಎಸಗಿದ್ದಾನೆ’, ಎಂದು ಸಂತ್ರಸ್ತೆ ಆರೋಪಿಸಿದ್ದಳು. ಮತ್ತೊಂದೆಡೆ ಯುವತಿಗೆ ಮಂಗಳದೋಷ ಬಂದಿರುವುದರಿಂದ ನಾನು ಆಕೆಯನ್ನು ಮದುವೆಯಾಗಲಾರೆ ಎಂದು ಆರೋಪಿ ಹೇಳಿದ್ದಾನೆ. ಈ ಕುರಿತು ಸಂತ್ರಸ್ತೆ, ಆತನಿಗೆ ನನ್ನನ್ನು ಮದುವೆಯಾಗಲು ಇಷ್ಟವಿಲ್ಲ, ಹಾಗಾಗಿ ಸುಳ್ಳು ಹೇಳುತ್ತಿದ್ದಾನೆ. ನನಗೆ ಮಂಗಳದೋಷ ಇಲ್ಲ ಎಂದು ಹೇಳಿದ್ದಾಳೆ. ಈ ಕುರಿತು ಹೈಕೋರ್ಟ್ ಮೇಲಿನಂತೆ ಆದೇಶ ನೀಡಿದೆ.