`ಇಲೆಕ್ಟ್ರಾನಿಕ ಇಂಟರಲಾಕಿಂಗ್’ ನಲ್ಲಿ ಬದಲಾವಣೆಯೇ ಓಡಿಸ್ಸಾದಲ್ಲಿ ರೇಲ್ವೆ ಅಪಘಾತಕ್ಕೆ ಕಾರಣ !

ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಇವರಿಂದ ಮಾಹಿತಿ

(`ಇಲೆಕ್ಟ್ರಾನಿಕ್ ಇಂಟರಲಾಕಿಂಗ್’ ಎಂದರೆ ರೈಲುಗಾಡಿ ಒಂದು ಹಳಿಯಿಂದ ಇನ್ನೊಂದು ಹಳಿಗೆ ಹೋಗಲು ಹಳಿಗಳಲ್ಲಿ `ಇಲೆಕ್ಟ್ರಾನಿಕ್’ ಪದ್ಧತಿಯಿಂದ ಮಾಡಲಾಗುವ ಬದಲಾವಣೆ)

ಭುವನೇಶ್ವರ (ಓಡಿಸ್ಸಾ) – ಓಡಿಸ್ಸಾದ ಬಾಲಾಸೋರನಲ್ಲಿ ಜೂನ 2 ರಂದು ನಡೆದ ರೈಲು ಅವಘಡ ಕಾರಣ ಬಹಿರಂಗವಾಗಿದೆ. ರೇಲ್ವೆ ಸಚಿವರಾದ ಅಶ್ವಿನಿ ವೈಷ್ಣವ ಇವರು `ಎ.ಎನ್.ಐ.’ ಈ ವಾರ್ತಾವಾಹಿನಿಗೆ ಮಾಹಿತಿ ನೀಡುವಾಗ, ಈ ಅಪಘಾತದ ವಿಚಾರಣೆ ಪೂರ್ಣಗೊಂಡಿದ್ದು, ಅಪಘಾತದ ಕಾರಣ ಸ್ಪಷ್ಟವಾಗಿದೆ. ಈ ಅಪಘಾತಕ್ಕೆ ಯಾರು ಜವಾಬ್ದಾರರು? ಎನ್ನುವುದು ಕೂಡ ಸ್ಪಷ್ಟವಾಗಿದ್ದು, `ಇಲೆಕ್ಟ್ರಾನಿಕ ಇಂಟರಲಾಕಿಂಗ್’ ನಲ್ಲಿ ಆದ ಬದಲಾವಣೆಯಿಂದ ಈ ಅಪಘಾತ ನಡೆದಿದೆ ಎಂದು ಹೇಳಿದರು.

1. ರೇಲ್ವೆ ಸಚಿವ ಅಶ್ವಿನಿ ವೈಷ್ಣವ ಇವರು ಮಾತನ್ನು ಮುಂದುವರಿಸುತ್ತಾ, ಜೂನ 4 ರಂದು ಸಾಯಂಕಾಲದ ವರೆಗೆ ರೇಲ್ವೆ ಹಳಿಗಳು ಮೊದಲಿನಂತೆ ಆಗಲಿದೆ. ಎಲ್ಲ ಅಪಘಾತಕ್ಕೆ ಒಳಗಾಗಿರುವ ರೇಲ್ವೆ ಬೋಗಿಗಳಿಂದ ಮೃತದೇಹಗಳನ್ನು ಹೊರಗೆ ತೆಗೆಯಲಾಗಿದೆ. ಈ ಮಾರ್ಗದಲ್ಲಿ ರೇಲ್ವೆ ಗಾಡಿಗಳ ಪರಸ್ಪರ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಕವಚ ವ್ಯವಸ್ಥೆ ಅಸ್ತಿತ್ವದಲ್ಲಿ ಇಲ್ಲ; ಆದರೆ ಈ ಅಪಘಾತಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದೂ ಹೇಳಿದರು.

2. `ಇಲೆಕ್ಟ್ರಾನಿಕ್ ಇಂಟರಲಾಕಿಂಗ’ ನಲ್ಲಿ ಆದ ಬದಲಾವಣೆಯಿಂದ ಕೊರಮಂಡಲ ಎಕ್ಸಪ್ರೆಸ್ ಸರಕು ಸಾಗಾಣಿಕೆ ರೈಲು ನಿಂತಿದ್ದ ಹಳಿಯತ್ತ ತಿರುಗಿಸಲಾಗಿತ್ತು. ಇದಕ್ಕಾಗಿ ಹಸಿರು ಸಿಗ್ನಲ್ ಸಿಕ್ಕಿತ್ತು. ಇದರಿಂದಲೇ ಈ ರೈಲು ಸರಕು ಸಾಗಾಣಿಕೆಯ ರೈಲಿಗೆ ಡಿಕ್ಕಿ ಹೊಡೆಯಿತು ಮತ್ತು ಅಪಘಾತವಾಯಿತು. ರೇಲ್ವೆಗಾಡಿಯ ಚಾಲಕನು ಸಂಪೂರ್ಣವಾಗಿ ಈ `ಇಲೆಕ್ಟ್ರಾನಿಕ್ ಇಂಟರಲಾಕಿಂಗ್’ ಮೂಲಕ ಗಾಡಿಯನ್ನು ಹಳಿಯಲ್ಲಿ ಒಯ್ಯುತ್ತಿರುತ್ತಾನೆ. ಯಾವ ರೀತಿ ಹಳಿ ತನ್ನಿಂತಾನೆ ಬದಲಾಗುತ್ತದೆಯೋ, ಹಾಗೆಯೇ ಗಾಡಿಯು ಆ ಹಳಿಯ ಮೇಲಿನಿಂದ ಮತ್ತೊಂದು ಹಳಿಗೆ ಹೋಗುತ್ತಿರುತ್ತದೆ. ಈ `ಇಂಟರಲಾಕಿಂಗ್’ ನಲ್ಲಿ ಬದಲಾವಣೆಯಾಗಿದ್ದರಿಂದ ಒಂದೇ ಹಳಿಯ ಮೇಲೆ ಎರಡು ಗಾಡಿಗಳು ಬಂದವು ಮತ್ತು ಅಪಘಾತ ನಡೆಯಿತು ಎಂದು ಹೇಳಿದ್ದಾರೆ.