ಎಮ್ಮೆ, ಕೋಣ ಕಡಿದು ಹಾಕುವುದಾದ್ರೆ ಹಸು ಏಕೆ ಕಡಿಯಬಾರದು ? – ಪಶುಸಂಗೋಪನಾ ಖಾತೆ ಸಚಿವ ಕೆ. ವೆಂಕಟೇಶ !

ಪಶುಸಂಗೋಪನಾ ಖಾತೆ ಸಚಿವ ಕೆ. ವೆಂಕಟೇಶ ಇವರ ಖೇದಕರ ಪ್ರಶ್ನೆ !

ಬೆಂಗಳೂರು – ಎಮ್ಮೆ, ಕೋಣ ಕಡಿದು ಹಾಕುವುದಾದ್ರೆ ಹಸು ಏಕೆ ಕಡಿಯಬಾರದು?; ಎಂದು ಕರ್ನಾಟಕದಲ್ಲಿ ಹೊಸದಾಗಿ ಆಯ್ಕೆಯಾದ ಕಾಂಗ್ರೆಸ್ ಸರಕಾರದಲ್ಲಿ ಪಶುಸಂಗೋಪನಾ ಖಾತೆ ಸಚಿವ ಕೆ. ವೆಂಕಟೇಶ ಇವರು ಖೇದಕರ ಪ್ರಶ್ನೆ ಕೇಳಿದ್ದಾರೆ. ರಾಜ್ಯದಲ್ಲಿ ಗೋಹತ್ಯೆ ನಿಷೇಧಿಸಲಾಗಿದೆ. ಈ ಕಾನೂನನ್ನು ಕಾಂಗ್ರೆಸ್ ಬದಲಾಯಿಸುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಕೆ. ವೆಂಕಟೇಶ್ ಹೇಳಿಕೆ ಹಿಂದೂಗಳನ್ನು ಕೆರಳಿಸಿದೆ.

(ಸೌಜನ್ಯ : Dighvijay 24X7 News)

ಕೆ. ವೆಂಕಟೇಶ್ ಮಾತನ್ನು ಮುಂದುವರೆಸುತ್ತಾ, ವಯಸ್ಸಾದ ಜಾನುವಾರುಗಳನ್ನು ಸಾಕುವುದು ಮತ್ತು ಸತ್ತ ಪ್ರಾಣಿಗಳನ್ನು ಸಾಗಿಸುವುದು ರೈತರಿಗೆ ದೊಡ್ಡ ಸಮಸ್ಯೆಯಾಗಿದೆ. ನನ್ನ ಮನೆಯಲ್ಲೂ ಮೂರ್ನಾಲ್ಕು ಹಸುಗಳಿವೆ, ಈ ಪೈಕಿ ಒಂದು ಹಸು ಸತ್ತಾಗ ಗುಂಡಿ ತೋಡಿ ಹೂಳಲು ತುಂಬಾ ಕಷ್ಟ ಪಡಬೇಕಾಯಿತು. ಎಂದು ಹೇಳಿದರು.

ಗೋಹತ್ಯೆ ಕಾನೂನನ್ನು ರದ್ದು ಪಡಿಸುವ ಬಗ್ಗೆ ಚರ್ಚೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು

ಕೆ. ವೆಂಕಟೇಶ್ ಮಾತನಾಡಿ, ಗೋಹತ್ಯೆ ಕಾನೂನನ್ನು ರದ್ದು ಪಡಿಸುವ ಬಗ್ಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಹಸು ದತ್ತು ಯೋಜನೆ ಏನಾಯಿತು ?, ತನಿಖೆ ನಡೆಸಲಾಗುವುದು. ಗೋಶಾಲೆ ನಡೆಸಲು ಹಣದ ಕೊರತೆ ಇಲ್ಲ; ಆದರೆ ಅವು ಸರಿಯಾಗಿ ನಡೆಯಲಿಲ್ಲ ಎಂದು ಹೇಳಿದರು.

ಸಂಪಾದಕೀಯ ನಿಲುವು

ಭಾರತದ ಪ್ರತಿಯೊಬ್ಬ ಹಿಂದೂಗೂ ಗೋವಿನ ಮಹತ್ವ ತಿಳಿದಿದೆ ಮತ್ತು ಗೋವಿನ ಬಗೆಗಿನ ಭಾವನೆಯೂ ತಿಳಿದಿದೆ; ಆದರೆ ವೆಂಕಟೇಶ್ ಅವರು ಉದ್ದೇಶಪೂರ್ವಕವಾಗಿ ಮುಸ್ಲಿಮರ ಓಲೈಕೆಗಾಗಿ ಇಂತಹ ಹೇಳಿಕೆ ನೀಡುತ್ತಿರುವುದನ್ನು ಕಾಣಬಹುದು !