ಒಡಿಸ್ಸಾದಲ್ಲಿ ಭೀಕರ ರೈಲು ಅಪಘಾತದಲ್ಲಿ ಮೃತರ ಸಂಖ್ಯೆ ೨೯೦ ಕ್ಕೂ ಹೆಚ್ಚು !

  • ೧ ಸಾವಿರಕ್ಕಿಂತಲೂ ಹೆಚ್ಚಿನ ಜನರಿಗೆ ಗಾಯ

  • ಮೃತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ

  • ಪ್ರಧಾನಮಂತ್ರಿ ಮೋದಿ ಇವರಿಂದ ಘಟನಾಸ್ಥಳಕ್ಕೆ ಭೇಟಿ

(ಸೌಜನ್ಯ : ದಿವ್ಯ ಮರಾಠಿ)

ಭುವನೇಶ್ವರ (ಒಡಿಸ್ಸಾ) – ಕೊಲಕಾತಾ ಇಲ್ಲಿಂದ ಚೆನ್ನೈಗೆ ಹೋಗುವ ಕೋರೊಮಂಡಲ ಎಕ್ಸ್ಪ್ರೆಸ್ ಜೂನ್ ೨ ರಂದು ಸಂಜೆ ೭ ಗಂಟೆಯ ಸುಮಾರಿಗೆ ಒರಿಸ್ಸಾದಲ್ಲಿ ಭೀಕರ ಅಪಘಾತವಾಗಿದೆ. ಒರಿಸ್ಸಾದ ಬಾಲಾಸೋರನಿಂದ ೪೦ ಕಿಲೋಮೀಟರ್ ದೂರದಲ್ಲಿರುವ ಬಹಾನಗಾ ರೈಲು ನಿಲ್ದಾಣದ ಬಳಿ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಇಲ್ಲಿಯವರೆಗೆ ೨೯೦ ಕ್ಕಿಂತಲೂ ಹೆಚ್ಚು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಹಾಗೂ ೯೦೦ ಕ್ಕಿಂತಲೂ ಹೆಚ್ಚಿನ ಜನರು ಗಾಯಗೊಂಡಿದ್ದಾರೆ. ಜಾರಿರುವ ಭೋಗಿಗಳಲ್ಲಿ ಸಿಕ್ಕಿರುವ ಪ್ರಯಾಣಿಕರನ್ನು ಹೊರತೆಗೆಯುವ ಕಾರ್ಯ ಜೂನ್ ೩ ರ ಮಧ್ಯಾಹ್ನದವರೆಗೆ ಮುಂದುವರೆದಿತ್ತು ಹಾಗೂ ಈ ಬೋಗಿಗಳಲ್ಲಿ ಅನೇಕ ಮೃತ ದೇಹಗಳು ಇರುವುದು ಕೂಡ ಕಂಡು ಬಂದಿದೆ. ಅವರನ್ನು ಹೊರ ತೆಗೆಯುವ ಕೆಲಸ ಮುಂದುವರೆದಿದೆ. ಆದ್ದರಿಂದ ಮೃತರ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. ಗಾಯಾಳುಗಳಿಗೆ ಹೊರತೆಗೆಯುವುದರ ಜೊತೆಗೆ ಈಗ ಘಟನೆ ಸ್ಥಳದಲ್ಲಿ ಭೋಗಿಗಳನ್ನು ಹಳ್ಳಿಯಿಂದ ಪಕ್ಕಕ್ಕೆ ಸರಿಸುವ ಕಾರ್ಯವೂ ಸಮರೋಪಾದಿಯಲ್ಲಿ ನಡೆಯುತ್ತಿದೆ. ಆದ್ದರಿಂದ ಈ ಮಾರ್ಗದ ರೈಲು ಪ್ರಯಾಣ ಮೊದಲಿನಂತೆ ಸಾಧ್ಯವಾಗುತ್ತದೆ. ಇಲ್ಲಿಯ ರಕ್ಷಣಾಕಾರ್ಯಕ್ಕಾಗಿ ಜೂನ್ ೨ ರ ರಾತ್ರಿಯಿಂದ ಸ್ಥಳೀಯ ಆಪತ್ಕಾಲಿನ ವ್ಯವಸ್ಥೆ, ಹಾಗೂ ರಾಷ್ಟ್ರೀಯ ಆಪತ್ಕಾಲಿನ ವ್ಯವಸ್ಥೆ ಕಾರ್ಯ ನಡೆಸುತ್ತಿದೆ. ಹಾಗೂ ಅಲ್ಲಿ ೬೦ ಕ್ಕೂ ಹೆಚ್ಚು ಆಂಬುಲೆನ್ಸ್ ಗಳು ರಾತ್ರಿಯಿಂದಲೇ ಕಾರ್ಯನಿರತವಾಗಿದೆ. ಆಸ್ಪತ್ರೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಗಾಯಗೊಂಡವರಿಗೆ ಅವಶ್ಯಕತೆ ಇರುವ ರಕ್ತ ದೊರೆಯುವುದಕ್ಕಾಗಿ ರಕ್ತದಾನ ಮಾಡಲು ಕರೆ ನೀಡಲಾಗಿದೆ.

ಅಪಘಾತ ಹೇಗೆ ನಡೆದಿದೆ ?

ಬಹಾನಗಾ ರೈಲು ನಿಲ್ದಾಣದ ಬಳಿ ಒಂದು ಹಳಿಯ ಮೇಲೆ ಗೂಡ್ಸ್ ನಿಂತಿತ್ತು. ಆ ಸಮಯದಲ್ಲಿ ಇನ್ನೊಂದು ಹಳಿಯಿಂದ ಕೊರಮಂಡಲ ಎಕ್ಸ್ ಪ್ರೆಸ್ ಕೊಲಕಾತಾಗೆ ಹೋಗುತ್ತಿತ್ತು. ಅದೇ ಸಮಯಕ್ಕೆ 3ನೇ ಹಳಿಯಲ್ಲಿ ಯಶವಂತಪುರ ಹಾವಡ ಎಕ್ಸ್ ಪ್ರೆಸ್ ವಿರುದ್ಧ ದಿಕ್ಕಿಗೆ ಹೋಗುತ್ತಿತ್ತು. ಈ ಸಮಯದಲ್ಲಿ ಕೋರಮಂಡಲ ಎಕ್ಸ್ ಪ್ರೆಸ್ ಅನಿರೀಕ್ಷಿತವಾಗಿ ಹಳಿಯಿಂದ ಜಾರಿತು. ಅದರ 15 ಭೋಗಿಗಳು ಗೂಡ್ಸ್ ರೈಲಿನ ದಿಕ್ಕಿನತ್ತ ಜಾರಿದರೇ ಕೆಲವು ಗೂಡ್ಸ್ ರೈಲಿನ ಮೇಲೆ ಏರಿತು. 4 ಭೋಗಿಗಳು ಎರಡನೆಯ ರೈಲು ಹಳಿಯ ಮೇಲೆ ಹೋಗುತ್ತಿದ್ದ ಯಶವಂತಪುರ ಹಾವಡ ಎಕ್ಸ್ ಪ್ರೆಸ್ ಗೆ ಗುದ್ದಿದವು. ಆದ್ದರಿಂದ ಆ ಎಕ್ಸ್ ಪ್ರೆಸ್ ನ ಮೂರು ಭೋಗಿಗಳೂ ಹಳಿಯಿಂದ ಜಾರಿದವು. ಇಂತಹ ವಿಚಿತ್ರ ಅಪಘಾತ ನಡೆಯಿತು. ಕೋರಮಂಡಲ ಎಕ್ಸ್ ಪ್ರೆಸ್ ಪ್ರತಿ ಗಂಟೆಗೆ ೧೨೫ ಕಿಲೋಮೀಟರ್ ವೇಗದಲ್ಲಿನ ಹೋಗುವಾಗ ಅಪಘಾತ ನಡೆದಿದೆ.

ಕಾರಣ ಇನ್ನು ಸ್ಪಷ್ಟವಾಗಿಲ್ಲ

‘ಅಪಘಾತದ ಕಾರಣ ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ. ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗುವುದೆಂದು, ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಇವರು ಹೇಳಿದರು. ಗಾಯಗೊಂಡವರ ಕಾಳಜಿ ವಹಿಸುವುದು ಮೊದಲನೇ ಆದ್ಯತೆ ಇದೆ, ಎಂದೂ ಸಹ ಅವರು ಹೇಳಿದರು. ಜೂನ್ ೨ ಕ್ಕೆ ಅಪಘಾತವಾದ ನಂತರ ಮುಂಬಯಿಯಿಂದ ಮಡಗಾವ ನಡುವೆ ಚಲಿಸುವ ‘ವಂದೇ ಭಾರತ’ ರೈಲಿನ ಲೋಕಾರ್ಪಣೆಯ ಸಮಾರಂಭ ರದ್ದು ಪಡಿಸಲಾಯಿತು.

ರಕ್ಷಣಾ ಕಾರ್ಯದಲ್ಲಿ ಸೈನ್ಯದ ಸಹಕಾರ

ಅಪಘಾತದ ಸ್ಥಳದಲ್ಲಿ ಭಾರತೀಯ ಸೈನ್ಯದ ವೈದ್ಯಕೀಯ ಮತ್ತು ಇಂಜಿನಿಯರಿಂಗ್ ತಂಡ ನೇಮಿಸಲಾಗಿದೆ. ಈಸ್ಟರ್ನ್ ಆರ್ಮಿ ಕಮಾಂಡ್ ದಲ್ಲಿನ ವಿವಿಧ ಸ್ಥಳದಲ್ಲಿ ತಂಡಗಳನ್ನು ಘಟನಾ ಸ್ಥಳಕ್ಕೆ ರವಾನಿಸಲಾಗಿದೆ. ವಾಯುದಳದ ೨ ‘ಎಂ ಐ. ೧೭’ ಹೆಲಿಕಾಪ್ಟರ್ ರಕ್ಷಣಾಕಾರ್ಯಕ್ಕಾಗಿ ನೇಮಕ ಮಾಡಲಾಗಿದೆ, ಎಂದು ಸಂರಕ್ಷಣಾ ದಳದ ಜನ ಸಂಪರ್ಕ ಅಧಿಕಾರಿಗಳು ಮಾಹಿತಿ ನೀಡಿದರು.

ಪ್ರಧಾನ ಮಂತ್ರಿ ಮೋದಿ ಇವರ ಸಮೀಕ್ಷೆ !

ಈ ಅಪಘಾತದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜೂನ್ ಮೂರರಂದು ಬೆಳಿಗ್ಗೆ ತುರ್ತು ಸಭೆ ನಡೆಸಿದರು. ಅದರ ನಂತರ ಪ್ರಧಾನಮಂತ್ರಿ ಮೋದಿ ಅವರು ಬಾಲಸೋರಿಗೆ ಹೋಗುವುದಾಗಿ ಹೇಳಿದರು. ಮಧ್ಯಾಹ್ನದ ಮೂರರ ಹೊತ್ತಿಗೆ ಅವರು ಬಾಲಸೊರದ ಘಟನಾ ಸ್ಥಳಕ್ಕೆ ಬಂದು ಸಮೀಕ್ಷೆ ನಡೆಸಿದರು. ಅದರ ನಂತರ ಅವರು ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಹೋಗಿ ಭೇಟಿ ಮಾಡಿದರು ಮತ್ತು ಅವರ ಯೋಗಕ್ಷೇಮ ವಿಚಾರಿಸಿದರು.

ಇದು ರಾಜಕೀಯ ಮಾಡುವ ಸಮಯವಲ್ಲ ! – ಮಮತಾ ಬ್ಯಾನರ್ಜಿ, ಮುಖ್ಯಮಂತ್ರಿ, ಬಂಗಾಳ

ಓರಿಸ್ಸಾದ ಅಪಘಾತ ಬಹಳ ದುಃಖಕರವಾಗಿದೆ. ಯಾವುದೇ ರೀತಿಯ ರಾಜಕೀಯ ಮಾಡುವ ಸಮಯವಲ್ಲ, ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇವರು ಹೇಳಿದರು. ಮಮತಾ ಬ್ಯಾನರ್ಜಿ ಇವರು ಓರಿಸಾಗೆ ಬಂದಿದ್ದಾರೆ. ಅವರು ಘಟನೆ ಸ್ಥಳಕ್ಕೆ ಹೋಗಿ ಪರಿಸ್ಥಿತಿಯ ವರದಿ ಪಡೆದರು ಹಾಗೂ ಅವರು ಗಾಯಾಳುಗಳ ಯೋಗ ಕ್ಷೇಮ ಕೂಡ ವಿಚಾರಿಸಿದರು. ‘ನಮ್ಮ ರಾಜ್ಯದಿಂದ ನಾವು ಮೃತರಿಗೆ ೫ ಲಕ್ಷ ರೂಪಾಯ ಪರಿಹಾರ ಘೋಷಿಸಿದ್ದೇವೆ ಹಾಗೂ ಬಂಗಾಳದಿಂದ ನಾವು ನಮ್ಮ ಡಾಕ್ಟರ್ ರ ತಂಡ ಕೂಡ ಕಳುಹಿಸಿದ್ದೇವೆ, ಹೀಗೆ ಕೂಡ ಮಮತಾ ಬ್ಯಾನರ್ಜಿಯವರು ಹೇಳಿದರು.

ಒಡಿಸ್ಸಾದ ಮುಖ್ಯಮಂತ್ರಿ ನವೀನ್ ಪಟನಾಯಕ ಇವರು ಆಸ್ಪತ್ರೆಗೆ ಹೋಗಿ ಗಾಯಗೊಂಡವರ ವಿಚಾರಣೆ ನಡೆಸಿದರು.

ಹೆಲ್ಪ್ ಲೈನ್ ಸಂಖ್ಯೆ : ಆಪತ್ಕಾಲಿನ ನಿಯಂತ್ರಣ ಕಕ್ಷ : ೬೭೮೨೨೬೨೨೮೬