|
ಅಯೋಧ್ಯ (ಉತ್ತರಪ್ರದೇಶ) :ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ಶ್ರೀರಾಮ ಮಂದಿರದಲ್ಲಿ ಡಿಸೆಂಬರ್ ೧೫, ೨೦೨೩ ರಿಂದ ಜನವರಿ ೨೬, ೨೦೨೪ ರ ಕಾಲಾವಧಿಯಲ್ಲಿ ರಾಮಲಲ್ಲಾನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುವುದು. ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸ’ ಪ್ರಾಣ ಪ್ರತಿಷ್ಠಾಪನೆಯ ಸಮಾರಂಭ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಸ್ತದಿಂದ ಮಾಡಿಸುವರು. ಈ ಸಮಾರಂಭದ ದಿನಾಂಕ ಇನ್ನು ನಿಗದಿಯಾಗಿಲ್ಲ. ದೇಶಾದ್ಯಂತ ೭ ದಿನಗಳವರೆಗೆ ರಾಮಲಲ್ಲನ ಪ್ರಾಣಪ್ರತಿಷ್ಠಾಪನೆಯ ಸಮಾರಂಭವನ್ನು ಆಚರಿಸಲಾಗುವುದು, ಎಂದು ನ್ಯಾಸದ ಕಾರ್ಯದರ್ಶಿ ಚಂಪತರಾಯ ಇವರು ಮಾಹಿತಿ ನೀಡಿದರು.
गर्भगृह में रामलला की प्रतिमा की प्राण प्रतिष्ठा के लिए पीएम नरेंद्र मोदी को आमंत्रित किया जाएगा.#Uttarpradesh #RamMandir @senshilpi https://t.co/7zTtajCPsc
— AajTak (@aajtak) June 1, 2023
ಚಂಪತ ರಾಯ ಇವರು ಮಾತು ಮುಂದುವರಿಸಿ,
೧. ಶ್ರೀರಾಮ ಮಂದಿರದ ನೆಲಮಾಳಿಗೆ ಮತ್ತು ಗರ್ಭಗುಡಿಯದ ಕೆಲಸ ಡಿಸೆಂಬರ್ ೧೫ ರ ವರೆಗೆ ಪೂರ್ಣಗೊಳ್ಳುವುದು. ನೆಲಮಾಳಿಗೆಯ ಕಟ್ಟಡ ಕಾಮಗಾರಿ ಶೇಖಡಾ ೮೫ ರಷ್ಟು ಪೂರ್ಣಗೊಂಡಿದೆ.
೨. ನ್ಯಾಸದ ಕೋಷಾಧ್ಯಕ್ಷರಾದ ಪ .ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜ ಇವರು ಈ ಸಮಾರಂಭದ ಆಮಂತ್ರಣ ಪತ್ರಿಕೆ ಸಿದ್ದಗೊಳಿಸುವರು, ಅದರ ಮೇಲೆ ಮಹಾಂತ ನೃತ್ಯ ಗೋಪಾಲದಾಸರು ಸಹಿ ಮಾಡುವವರಿದ್ದಾರೆ .
೩. ದೇಶಾದ್ಯಂತ ೭ ದಿನಗಳ ನಡೆಯುವ ಈ ಮಹೋತ್ಸವಕ್ಕೆ ಸಂತರಿಗೆ ಧರ್ಮಚಾರ್ಯರಿಗೆ ಆಮಂತ್ರಣ ನೀಡಲಾಗುವುದು.
ರಾಮಲಲ್ಲನ ಮೂರ್ತಿಯ ಎತ್ತರ ೮ ಅಡಿ ಇರಲಿದೆ !
ರಾಮಲಲ್ಲನ ಮೂರು ಮೂರ್ತಿಗಳು ಸಿದ್ಧಗೊಳಿಸಲಾಗುತ್ತಿದೆ. ಅದಕ್ಕಾಗಿ ಕರ್ನಾಟಕದಿಂದ 2 ಕರಿ ಕಲ್ಲು ಮತ್ತು ರಾಜಸ್ಥಾನದಿಂದ ಅಮೃತಶಿಲೆಯ ಬಿಳಿ ಕಲ್ಲು ಉಪಯೋಗಿಸಲಾಗುತ್ತಿದೆ. ಇದರಲ್ಲಿ ಗರ್ಭಗುಡಿಯಲ್ಲಿ ಇಡಲು ಯಾವ ಮೂರ್ತಿಯ ಆಯ್ಕೆ ಆಗುವುದು ? ಅದು ಇನ್ನೂ ಖಚಿತಗೊಂಡಿಲ್ಲ. ಈ ಮೂರ್ತಿಗಳು ಸಿದ್ದಗೊಳ್ಳಲು ಸರಾಸರಿ ೪ ತಿಂಗಳ ಕಾಲಾವಧಿ ಬೇಕಾಗುವುದು. ಕರ್ನಾಟಕದ ಶಿಲ್ಪಿ ಗಣೇಶ್ ಎಲ್ ಭಟ ಮತ್ತು ರಾಜಸ್ಥಾನದ ಶಿಲ್ಪಿ ಸತ್ಯನಾರಾಯಣ ಪಾಂಡೆ ಇವರ ನೇತೃತ್ವದಲ್ಲಿ ಈ ಕೆಲಸ ನಡೆಯುತ್ತಿದೆ. ಶಿಲ್ಪಿ ಗಣೇಶ ಭಟ ಇವರು, ಈ ಮೂರ್ತಿ ೫೧ ಇಂಚು ಎತ್ತರ ತಯಾರಿಸುವುದಿದೆ. ಮೂರ್ತಿ ಸ್ಥಾಪನೆಯಾದ ನಂತರ ಅದರ ಎತ್ತರ ೮ ಅಡಿ ಇರಬಹುದು ಎಂದು ಹೇಳಿದ್ದಾರೆ.