ರಾಜ್ಯದಲ್ಲಿ ಬೃಹತ್ಪ್ರಮಾಣದಲ್ಲಿ ಸ್ಫೋಟಕಗಳು ಪತ್ತೆ !

ಮಹಮ್ಮದ್ ಮುಸ್ತಫಾ

ಬೆಂಗಳೂರು – ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸ್ಪೋಟಕ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ೬ ಸಾವಿರ ಡಿಟ್ಟೋನೇಟರ್ ಮತ್ತು ೨ ಸಾವಿರ ೮೦೦ ಜಿಲೇಟಿನ್ ನ ಕೊಳವೆಗಳು ಸೇರಿವೆ. ವಾಹನ ಪರಿಶೀಲನೆ ನಡೆಸುವಾಗ ಪೊಲೀಸರಿಗೆ ಮಹಮ್ಮದ್ ಮುಸ್ತಫಾ ಇವನ ವಾಹನದಲ್ಲಿ ಈ ಸ್ಪೋಟಕಗಳು ದೊರೆತಿವೆ. ಅವನನ್ನು ವಶಕ್ಕೆ ಪಡೆದು ಮನೆಯ ಮೇಲೆ ದಾಳಿ ನಡೆಸಿದಾಗ ಅಲ್ಲಿ ಇನ್ನಷ್ಟು ಸ್ಪೋಟಕಗಳು ದೊರೆತಿವೆ.

ವಿಶೇಷವೆಂದರೆ ಪೊಲೀಸರು ಮುಸ್ತಫಾನನ್ನು ಅವನ ಮನೆಗೆ ಕರೆದುಕೊಂಡು ಹೋದ ನಂತರ ಅವನು ಬಚ್ಚಲುಮನೆಗೆ ಹೋದನು ಮತ್ತು ಅಲ್ಲಿಂದ ಹೊರಬರಲಿಲ್ಲ. ಪೊಲೀಸರು ಬಾಗಿಲ ಮುರಿದ ನಂತರ ಅವನು ತನ್ನ ಕೈ ಕತ್ತರಿಸಲು ಪ್ರಯತ್ನ ಮಾಡಿರುವುದು ಗಮನಕ್ಕೆ ಬಂದಿತು. ಪೊಲೀಸರು ತಕ್ಷಣ ಅವನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಿದರು. ಮುಸ್ತಫಾನ ವಿಚಾರಣೆಯಲ್ಲಿ ಆತ ರಾಜ್ಯದಲ್ಲಿನ ಗಣಿ ಮಾಲೀಕರಿಗೆ ಪೂರೈಸುವುದಕ್ಕಾಗಿ ಈ ಸ್ಫೋಟಕಗಳನ್ನು ಸಂಗ್ರಹಿಸುತ್ತಿದ್ದನು ಎಂದು ಅವನು ಹೇಳಿದನು.