ಪ್ರಧಾನಮಂತ್ರಿ ಮೋದಿಯವರಿಗೆ ಭೇಟಿ !
ನವದೆಹಲಿ – ನೇಪಾಳದ ಪ್ರಧಾನಮಂತ್ರಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಅವರು ಭಾರತದ ಪ್ರವಾಸದಲ್ಲಿದ್ದು, ಅವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಹೈದರಾಬಾದ್ ಹೌಸ್ ನಲ್ಲಿ ಉಭಯ ನಾಯಕರ ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದೆ. ಇದರಲ್ಲಿ ಎರಡೂ ದೇಶಗಳಲ್ಲಿನ ಗಡಿ ವಿವಾದ ಬಗ್ಗೆಯು ಚರ್ಚೆಯಾಗಬಹುದು. ಪ್ರಧಾನ ಮಂತ್ರಿ ಪ್ರಚಂಡ ಅವರ ಗೌರವಾರ್ಥ ಹೈದರಾಬಾದ್ ಹೌಸ್‌ನಲ್ಲಿ ವಿಶೇಷ ಸ್ನೇಹಭೋಜನವನ್ನು ಆಯೋಜಿಸಲಾಗಿದೆ. ಪ್ರಧಾನ ಮಂತ್ರಿ ಪ್ರಚಂಡ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮೂ ಮತ್ತು ಉಪಾಧ್ಯಕ್ಷ ಜಗದೀಪ ಧನಖಡವರನ್ನು ಪ್ರಧಾನಿ ಭೇಟಿಯಾಗಲಿದ್ದಾರೆ. ಪ್ರಧಾನಿ ಪ್ರಚಂಡ ಅವರು ನವದೆಹಲಿಯಲ್ಲಿ ‘ನೇಪಾಳ-ಭಾರತ ವ್ಯಾಪಾರ ಶೃಂಗಸಭೆ’ಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಭಾರತದಲ್ಲಿರುವ ನೇಪಾಳಿ ಸಮುದಾಯದ ಜನರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ಪ್ರಚಂಡ ಅವರು ಚೀನಾಕ್ಕೆ ಹತ್ತಿರದವರು ಎಂದು ಹೇಳಲಾಗುತ್ತದೆ. ಅವರು ಅನೇಕ ಬಾರಿ ಭಾರತದ ವಿರೋಧದಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ.
#VantageOnFirstpost: #Nepal‘s PM Prachanda has arrived in India for a 4-day visit. The trip comes after a period of strained relations between Nepal & India. Will Kathmandu pick India over China in the race to dominate #SouthAsia? What in New Delhi hoping to gain from this visit? pic.twitter.com/yeQ4NEJewV
— Firstpost (@firstpost) May 31, 2023