ಉದಯಪುರ (ರಾಜಸ್ಥಾನ) – ಇಲ್ಲಿಯ ಪೆಸಿಫಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ನೀಡಿದ ದೂರಿನನ್ವಯ ಪೊಲೀಸರು ಆಸಿಫನನ್ನು ಬಂಧಿಸಿದ್ದಾರೆ. ಅವನು ಈ ವಿದ್ಯಾರ್ಥಿನಿಯನ್ನು ಮತಾಂತರಗೊಳಿಸಿ ತನ್ನೊಂದಿಗೆ ವಿವಾಹವಾಗುವಂತೆ ಬೆದರಿಕೆ ಹಾಕಿದ್ದನು ಮತ್ತು ವಿವಾಹವಾಗದಿದ್ದರೆ ಕೊಲ್ಲುವುದಾಗಿ ಆಸಿಫ್ ಬೆದರಿಕೆ ಹಾಕಿದ್ದನು. ಮೇ 31 ವರೆಗೆ ನಿರ್ಣಯ ತೆಗೆದುಕೊಳ್ಳುವಂತೆ ಅವನು ಈ ವಿದ್ಯಾರ್ಥಿನಿಗೆ ಹೇಳಿದ್ದನು. ಈ ಹಿಂದೆಯೂ ಅವನ ವಿರುದ್ಧ ದೂರನ್ನು ದಾಖಲಿಸಿದಾಗ ಆಸಿಫನನ್ನು ಬಂಧಿಸಲಾಗಿತ್ತು. ಆದರೆ ಜಾಮೀನಿನ ಮೇಲೆ ಬಿಡುಗಡೆಗೊಂಡು ಹೊರಗೆ ಬಂದ ಬಳಿಕ ಅವನು ಪುನಃ ಈ ವಿದ್ಯಾರ್ಥಿನಿಗೆ ತೊಂದರೆ ಕೊಡಲು ಪ್ರಾರಂಭಿಸಿದ್ದನು. (ಪೊಲೀಸರು ಬಂಧಿಸಿದ ಮಾತ್ರಕ್ಕೆ ವ್ಯಕ್ತಿಯಲ್ಲಿರುವ ಅಪರಾಧ ವೃತ್ತಿ ನಷ್ಟಗೊಳ್ಳುವುದಿಲ್ಲ ಅವನು ಮತ್ತೆ ಅಂತಹ ಅಪರಾಧವನ್ನು ಮಾಡುತ್ತಾನೆ. ಇದು ಅನೇಕಬಾರಿ ಬಹಿರಂಗವಾಗಿದೆ. ಇದರಿಂದ ಅಪಧಿರಾಧ ವೃತ್ತಿ ನಷ್ಟಗೊಳ್ಳುವ ಶಿಕ್ಷೆಯನ್ನು ವಿಧಿಸುವುದು ಆವಶ್ಯಕವಾಗಿದೆ ! – ಸಂಪಾದಕರು)
Udaipur, Rajasthan | On the basis of a complaint from a 22-year-old woman, an FIR was registered in PS Ambamata under sections 330, 354D, 387 and 506 IPC against one Mohammad Asif Bhutto for allegedly threatening to kill the woman if she doesn’t change her religion and marry him.…
— ANI MP/CG/Rajasthan (@ANI_MP_CG_RJ) June 1, 2023
ಸಂಪಾದಕರ ನಿಲುವುಇಂತಹ ಬೆದರಿಕೆಯ ನಂತರ ಪ್ರತ್ಯಕ್ಷದಲ್ಲಿ ಯುವತಿಯ ಹತ್ಯೆಯ ಘಟನೆ ನಡೆದಿರುವುದರಿಂದ ಇಂತಹ ಆರೋಪಿಯು ಪ್ರತ್ಯಕ್ಷ ಕೃತಿಯನ್ನು ಮಾಡದಿದ್ದರೂ, ಅವನಿಗೆ ಜೀವಾವಧಿಯಂತಹ ಕಠಿಣ ಶಿಕ್ಷೆಯನ್ನು ವಿಧಿಸುವ ಕಾನೂನು ಮಾಡುವುದು ಆವಶ್ಯಕವಿದೆ ! |