೨ ಸಾವಿರ ರೂಪಾಯಿ ನೋಟು ಬದಲಾಯಿಸುವುದಕ್ಕಾಗಿ ನಕ್ಸಲರ ಪರದಾಟ !

ರಾಯಪುರ – ರಿಸರ್ವ್ ಬ್ಯಾಂಕ್ ೨ ಸಾವಿರ ರೂಪಾಯಿಯ ನೋಟು ಚಲಾವಣೆಯಿಂದ ಹಿಂಪಡೆದ ನಂತರ ಛತ್ತೀಸ್ಗಡ ರಾಜ್ಯದ ಬಸ್ತರದಲ್ಲಿ ನಕ್ಸಲವಾದಿ ಸಂಘಟನೆಗೆ ದೊಡ್ಡ ಆಘಾತವಾಗಿದೆ. ತಮ್ಮ ಬಳಿ ಇರುವ ೨ ಸಾವಿರ ರೂಪಾಯಿ ನೋಟುಗಳನ್ನು ಬದಲಾಯಿಸುವುದಕ್ಕಾಗಿ ನಕ್ಸಲವಾದಿಗಳು ಪರದಾಡುತ್ತಿದ್ದಾರೆ. ಬಸ್ತರ ಪ್ರದೇಶದಲ್ಲಿನ ವಿಜಾಪುರ, ಸುಕಮ, ದಂತೆವಾಡ, ನಾರಾಯಣಪುರ ಸಹಿತ ಇತರ ನಕ್ಸಲ್ ಪೀಡಿತ ಪ್ರದೇಶದಲ್ಲಿ ನಕ್ಸಲರ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ೨ ಸಾವಿರ ರೂಪಾಯಿ ನೋಟುಗಳಿರುವ ಮಾಹಿತಿ ಪೊಲೀಸರಿಗೆ ದೊರೆತಿದೆ. ನಕ್ಸಲರು ಸೆಪ್ಟೆಂಬರ್ ತಿಂಗಳ ಹೊತ್ತಿಗೆ ಗ್ರಾಮೀಣ ಮತ್ತು ನಗರ ಭಾಗದಲ್ಲಿ ಈ ನೋಟುಗಳನ್ನು ಚಲಾವಣೆ ಮಾಡಲು ಪ್ರಯತ್ನಿಸಬಹುದು ಅಥವಾ ಅವುಗಳನ್ನು ಅವರ ಸಹಚರರ ಮೂಲಕ ಬ್ಯಾಂಕ್ ಖಾತೆಗೆ ಜಮಾ ಮಾಡಬಹುದು. ಇದನ್ನು ಅರಿತು ಬಸ್ತರ ಪೊಲೀಸರ ಜೊತೆ ಎಲ್ಲಾ ಸುರಕ್ಷಾ ವ್ಯವಸ್ಥೆಗಳು ಸಂಪೂರ್ಣವಾಗಿ ಜಾಗರೂಕವಾಗಿವೆ. ಕೆಲವು ದಿನಗಳ ಹಿಂದೆ ಬಿಜಾಪುರ ಪ್ರದೇಶದಲ್ಲಿ ಪೊಲೀಸರು ನಕ್ಸಲ ಕಮಾಂಡರ್ ಮಲ್ಲೇಶ್ ನಿಂದ ೬ ಲಕ್ಷ ರೂಪಾಯ ನಗದು ವಶಪಡಿಸಿಕೊಂಡಿದ್ದರು. ಇದು ಸಂಪೂರ್ಣ ನಗದು ೨ ಸಾವಿರ ರೂಪಾಯಿಯ ನೋಟಿನಲ್ಲಿ ಇತ್ತು.

ಬಸ್ತರದ ಪೊಲೀಸ ಅಧಿಕಾರಿ ಸುಂದರರಾಜ ಪಿ. ಇವರು, ಬಸ್ತರದಲ್ಲಿ ನಕ್ಸಲವಾದಿ ಸಂಘಟನೆ ಪ್ರತಿ ವರ್ಷ ವ್ಯಾಪಾರಿಗಳು, ಗುತ್ತಿಗೆದಾರರು ಮತ್ತು ಇತರರಿಂದ ಹೆಚ್ಚಿನ ಪ್ರಮಾಣದಲ್ಲಿ ಶುಲ್ಕ ವಸೂಲಿ ಮಾಡುತ್ತಾರೆ. ಇದನ್ನು ನಗದು ರುಪದಲ್ಲಿ ಪಡೆಯುತ್ತಾರೆ. ಈ ಹಣದ ಬಲದಲ್ಲಿ ನಕ್ಸಲವಾದಿಗಳ ಸಂಘಟನೆಗಳು ಪ್ರಬಲವಾಗಿದ್ದಾವೆ. ಕಳೆದ ೪೦ ವರ್ಷಗಳಿಂದ ಬಸ್ತರದಲ್ಲಿ ಸಮಾಂತರ ಸರಕಾರ ನಡೆಸುವ ಪ್ರಯತ್ನದಲ್ಲಿ ಕೂಡ ನಕ್ಸಲರು ಯಶಸ್ವಿಯಾಗಿದ್ದಾರೆ.