ಹಿಂದೂಗಳ ದೇವಾಲಯಗಳಲ್ಲಿ ಸ್ವಚ್ಛತೆ ಇರುವುದಿಲ್ಲ ! – ಕೇಂದ್ರ ಸಚಿವ ನಿತಿನ್ ಗಡಕರಿ

ನವ ದೆಹಲಿ – ದೇಶದಲ್ಲಿನ ಹಿಂದೂಗಳ ದೇವಾಲಯಗಳಲ್ಲಿ ಸ್ವಚ್ಛತೆ ಇಲ್ಲ. ನಮ್ಮಲ್ಲಿ ಧರ್ಮಶಾಲೆಗಳೂ ಚೆನ್ನಾಗಿಲ್ಲ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡಕರಿಯವರು ಒಂದು ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದಾರೆ.

(ಸೌಜನ್ಯ : The Lallantop)

ಗಡಕರಿಯವರು ತಮ್ಮ ಮಾತನ್ನು ಮುಂದುವರೆಸುತ್ತಾ, ವಿದೇಶಕ್ಕೆ ಹೋದ ನಂತರ ಅಲ್ಲಿನ ಗುರುದ್ವಾರ, ಮಸೀದಿ, ಚರ್ಚ್‌ಗಳ ವಾತಾವರಣ ನೋಡಿ ನಮ್ಮ ಪ್ರಾರ್ಥನೆಯ ಸ್ಥಳಗಳು ಚೆನ್ನಾಗಿರಬೇಕು ಎಂದು ಅನಿಸಿತು. ನನಗೆ ಈ ಬಗ್ಗೆ ಏನಾದರೂ ಮಾಡಲು ಅವಕಾಶ ಸಿಕ್ಕಿದಾಗ ನಾನು ಮಹಾರಾಷ್ಟ್ರದಲ್ಲಿ ೧೨ ಸಾವಿರ ಕೋಟಿ ರೂಪಾಯಿಗಳ ಪಲ್ಲಕ್ಕಿ ಮಾರ್ಗವನ್ನು ನಿರ್ಮಿಸಿದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಶುಚಿತ್ವ ಇಲ್ಲದ ಸ್ಥಳದಲ್ಲಿ ಮನುಷ್ಯನಿಗೆ ಒಳ್ಳೆಯದೆನಿಸುವುದಿಲ್ಲ, ಅಲ್ಲಿ ದೇವರಿಗೆ ಒಳ್ಳೆಯದೆನಿಸುತ್ತದೆಯೇ ? ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವರು ನೆಲೆಸಿರುತ್ತಾನೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಿಂದೂಗಳು ದೇವಸ್ಥಾನಗಳಲ್ಲಿ ಸ್ವಚ್ಛತೆ ಕಾಪಾಡಬೇಕು ! ಇದಕ್ಕಾಗಿ ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ಅಗತ್ಯ !