ತಾನು ಹಿಂದೂ ಎಂದು ಹೇಳಿ ‘ಮಾಡೆಲಿಂಗ್’ ಪ್ರಶಿಕ್ಷಕ ತನ್ವೀರ್ ಅಖ್ತರ್ ಅತ್ಯಾಚಾರವೆಸಗಿದ ಎಂದು ಹಿಂದೂ ಮಹಿಳಾ ಮಾಡೆಲ್‌ನ ಆರೋಪ !

ಜಾರ್ಖಂಡ್‌ ನ ಘಟನೆ

(‘ಮಾಡಲ್’ ಎಂದರೆ ನಿರ್ದಿಷ್ಟ ಸಂಸ್ಥೆಯಿಂದ ತಯಾರಿಸಿದ ಬಟ್ಟೆಗಳು ಅಥವಾ ಇತರ ಸರಕುಗಳನ್ನು ಪ್ರಚಾರ ಮಾಡಲು ನೇಮಕಗೊಂಡ ವ್ಯಕ್ತಿ)

ರಾಂಚಿ (ಜಾರ್ಖಂಡ್) – ಇಲ್ಲಿನ ಮಾಡೆಲಿಂಗ್ ತರಬೇತಿ ಕೇಂದ್ರದ ನಿರ್ದೇಶಕ ತನ್ವೀರ್ ಅಖ್ತರ್ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಹಿಂದೂ ಮಹಿಳಾ ಮಾಡೆಲ್ ಆರೋಪಿಸಿದ್ದಾರೆ. ಸಂತ್ರಸ್ತೆ ಮಹಿಳೆ ಬಿಹಾರದ ಭಾಗಲಪುರದ ನಿವಾಸಿಯಾಗಿದ್ದಾಳೆ. ಆತ ೨೦೨೦ ರಲ್ಲಿ ರಾಂಚಿಯ ‘ಯಶ್ ಮಾಡೆಲಿಂಗ್ ಸ್ಕೂಲ್’ ನಲ್ಲಿ ಪ್ರವೇಶ ಪಡೆದ. ಆಕೆಯೂ ಅಲ್ಲೇ ಕೆಲಸ ಮಾಡುತ್ತಿದ್ದಳು. ನಂತರ ಅವಳು ಕೆಲಸದ ನಿಮಿತ್ತ ಮುಂಬಯಿಗೆ ಬಂದಿದ್ದಳು. ಅಲ್ಲಿಯೂ ತನ್ವೀರ್ ಕಿರುಕುಳ ನೀಡುತ್ತಿದ್ದ. ತೊಂದರೆಯಿಂದ ಬೇಸತ್ತ ಸಂತ್ರಸ್ತೆ ಮೇ ೩೦ ರಂದು ತನ್ವೀರ್ ವಿರುದ್ಧ ಮುಂಬಯಿನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪೊಲೀಸರು ತನ್ವೀರ್ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದು, ಜಾರ್ಖಂಡ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಸಂತ್ರಸ್ತೆ ಪ್ರಸಾರ ಮಾಡಿದ ವೀಡಿಯೊದಲ್ಲಿ,

೧. ತನ್ವೀರ್ ನನ್ನ ಹೆಸರು ಯಶ್ ಎಂದು ಹೇಳಿ ಮೋಸ ಮಾಡಿದ್ದಾನೆ. ಅವನು ನನ್ನನ್ನು ಮತಾಂತರಗೊಳಿಸಿ ಮದುವೆಯಾಗಲು ಬಯಸುತ್ತಾನೆ. ತನ್ವೀರ್‌ನು ಮುಂಬಯಿಗೆ ಬಂದು ನನ್ನನ್ನು ಕೊಲ್ಲಲು ಯತ್ನಿಸಿದ್ದನು.

೨. ತನ್ವೀರ್ ನನ್ನ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾನೆ. ಅವನ ವಿರುದ್ಧ ಮೊದಲೇ ದೂರು ನೀಡಿದ್ದೆ; ನಂತರ ಅವರು ನ್ಯಾಯಾಲಯದಲ್ಲಿ ಅಫಿಡವಿಟ್ ನಲ್ಲಿ ‘ನಾನು ಇನ್ನುಮುಂದೆ ಹೀಗೆ ಮಾಡುವುದಿಲ್ಲ’ ಎಂದು ಹೇಳಿದ್ದನು; ಆದರೆ ಈಗಲೂ ತೊಂದರೆ ಕೊಡುತ್ತಿದ್ದಾನೆ. ಅವನು ನನಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸುತ್ತಲೇ ಇರುತ್ತಾನೆ.

ಮತ್ತೊಂದೆಡೆ ತನ್ವೀರ್, ‘ಸಂತ್ರಸ್ತ ಮಹಿಳೆಯಿಂದಾಗಿ ನನಗೆ ವ್ಯಾಪಾರದಲ್ಲಿ ನಷ್ಟವಾಗಿದೆ. ನಾನು ಆಕೆಯ ಬಳಿ ಹಣ ಕೇಳಿದಾಗ ಲವ್ ಜಿಹಾದ್ ಮಾಡುತ್ತಿದ್ದಾನೆ’ ಎಂದು ಆರೋಪಿಸುತ್ತಿದ್ದಾಳೆ’ ಎಂದು ಆರೋಪಿಸುತ್ತಿದ್ದಾನೆ.

ನಾನು ಸಾಯುತ್ತೇನೆ, ಆದರೆ ನನ್ನ ಧರ್ಮ ಬದಲಾಯಿಸುವುದಿಲ್ಲ ! – ಸಂತ್ರಸ್ತ ಮಹಿಳೆ

ಮಾನ್ವಿಯು ತನ್ನ ವಿಡಿಯೋದಲ್ಲಿ, ‘ನಾನು ಸಾಯುತ್ತೇನೆ, ಆದರೆ ನನ್ನ ಧರ್ಮ ಬದಲಾಯಿಸುವುದಿಲ್ಲ ಎಂದು ಹೇಳಿದ್ದಾರೆ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ನನ್ನನ್ನು ಈ ರಾಕ್ಷಸನಿಂದ ರಕ್ಷಿಸಬೇಕು. ನಾಳೆ ಏನು ಮಾಡುತ್ತಾನೋ ನನಗೆ ಗೊತ್ತಿಲ್ಲ. ನಾನು ಹಿಂದೂವಾಗಿದ್ದೆನೆ, ನಾನು ಧರ್ಮ ಬದಲಾಯಿಸುವುದಿಲ್ಲ. ಯಾವತ್ತೂ ಮುಸಲ್ಮಾನರನ್ನು ಮದುವೆಯಾಗಬೇಡಿ.’ ಎಂದು ಹೇಳಿದ್ದಾಳೆ.

ಸಂಪಾದಕೀಯ ನಿಲುವು

ಲವ್ ಜಿಹಾದ್ ತಡೆಯಲು ಸರಕಾರ ಗಲ್ಲು ಶಿಕ್ಷೆ ವಿಧಿಸುವ ಕಾನೂನನ್ನು ಮಾಡಬೇಕು !