ಓ ಟಿ ಟಿ ವೇದಿಕೆಯಲ್ಲಿ ಚಲನಚಿತ್ರ, ವೆಬ್ ಸರಣಿ ಮುಂತಾದರ ಪ್ರದರ್ಶನದ ಸಮಯದಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ನೀಡುವುದು ಕಡ್ಡಾಯ ! – ಕೇಂದ್ರ ಸರಕಾರದ ಆದೇಶ

ನವ ದೆಹಲಿ – ಓ ಟಿ ಟಿ (ಓವರ್ ದಿ ಟಾಪ್) ವೇದಿಕೆಯಲ್ಲಿ ಪ್ರಸಾರವಾಗುವ ಚಲನಚಿತ್ರ, ವೆಬ್ ಸರಣಿ ಹಾಗೂ ಇತರ ಚಿತ್ರಣಗಳಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ನೀಡುವಂತೆ ಕೇಂದ್ರ ಸರಕಾರ ಆದೇಶ ನೀಡಿದೆ. ಇಂತಹ ಎಚ್ಚರಿಕೆ ನೀಡದೆ ಇದ್ದರೆ ಸಂಬಂಧಿತ ನಿರ್ಮಾಪಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಕೂಡ ಕೇಂದ್ರ ಸರಕಾರ ಹೇಳಿದೆ. ಇಂತಹ ಕಾನೂನು ರೂಪಿಸುವ ಭಾರತ ಜಗತ್ತಿನಲ್ಲಿ ಮೊದಲನೆಯ ದೇಶವಾಗಿದೆ. ಓ ಟಿ ಟಿ ಯಲ್ಲಿ ಪ್ರಸಾರವಾಗುವ ಚಲನಚಿತ್ರ ಮತ್ತು ವೆಬ್ ಸರಣಿಯಿಂದ ಅನೇಕ ಬಾರಿ ಸಿಗರೇಟ್, ಮಧ್ಯಪಾನ ಮುಂತಾದ ದೃಶ್ಯಗಳು ತೋರಿಸಲಾಗುತ್ತದೆ. ಇದರಿಂದ ಸಿಗರೇಟ್ ಮತ್ತು ಮದ್ಯಪಾನ ಸೇವಿಸುವ ಪ್ರಸಾರವಾಗಬಹುದು. ಅದನ್ನು ತಡೆಯುವದಕ್ಕಾಗಿ ಕೇಂದ್ರ ಸರಕಾರ ಈ ನಿರ್ಣಯ ತೆಗೆದುಕೊಂಡುದೆ. ಮೇ ೩೧ ರಂದು ಅಂತರಾಷ್ಟ್ರೀಯ ತಂಬಾಕು ವಿರೋಧಿ ದಿನದ ಪ್ರಯುಕ್ತ ಕೇಂದ್ರ ಸರಕಾರದಿಂದ ಇದರ ಹಿನ್ನೆಲೆಯಲ್ಲಿ ಅಧಿಸೂಚನೆ ಜಾರಿಗೊಳಿಸಿದೆ. ಮಾಹಿತಿ ಮತ್ತು ಪ್ರಸಾರಣ ಸಚಿವಾಲಯ ಹಾಗೂ ಇತರ ಪಾಲುದಾರರ ಜೊತೆಗೆ ಚರ್ಚೆ ನಡೆಸಿದ ನಂತರ ಕೇಂದ್ರ ಆರೋಗ್ಯ ಸಚಿವಾಲಯದಿಂದ ಓ ಟಿ ಟಿ ವೇದಿಕೆಯಲ್ಲಿ ತಂಬಾಕು ವಿರೋಧಿ ಎಚ್ಚರಿಕೆಗಾಗಿ ಹೊಸ ಕಾನೂನು ರೂಪಿಸಿದೆ.

ನಿಯಮಗಳೇನು ?

ಚಲನಚಿತ್ರ, ವೆಬ್ ಸರಣಿ ಮುಂತಾದವುಗಳ ಆರಂಭದಲ್ಲಿ ಮತ್ತು ಮಧ್ಯ ಭಾಗದಲ್ಲಿ ಕನಿಷ್ಠ ೩೦ ಸೆಕೆಂಡ್ ತಂಬಾಕು ವಿರೋಧಿ ಆರೋಗ್ಯ ಎಚ್ಚರಿಕೆ ತೋರಿಸುವುದು ಕಡ್ಡಾಯವಾಗಿದೆ. ಕಾರ್ಯಕ್ರಮದ ಸಮಯದಲ್ಲಿ ತಂಬಾಕು ಉತ್ಪಾದನೆ ಅಥವಾ ಆ ರೀತಿಯ ವಸ್ತುಗಳ ಉಪಯೋಗ ಪ್ರಸಾರಗೊಳಿಸಿದ ನಂತರ ಸ್ಕ್ರೀನ್ ಮೇಲೆ ಒಂದು ಮುಖ್ಯ ಸ್ಥಿರ ಸಂದೇಶವೆಂದು ತಂಬಾಕು ವಿರೋಧಿ ಎಚ್ಚರಿಕೆ ಪ್ರಸಾರಗೊಳಿಸುವುದು ಅನಿವಾರ್ಯಗೊಳಿಸಲಾಗಿದೆ. ಇದರ ಜೊತೆಗೆ ಕನಿಷ್ಠ ೨೦ ಸೆಕೆಂಡ್ ವಿಡಿಯೋ ಕೂಡ ಪ್ರಸಾರ ಮಾಡುವುದು ಅವಶ್ಯಕವಾಗಿದೆ.

ಸಂಪಾದಕರ ನಿಲುವು

ಇಂತಹ ಎಚ್ಚರಿಕೆ ನೀಡಿದ ನಂತರ ತಂಬಾಕು ಸೇವನೆ ನಿಲ್ಲುವುದಿಲ್ಲ ಅಥವಾ ಬಂದ್ ಆಗುವುದಿಲ್ಲ, ಅದಕ್ಕಾಗಿ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ !