‘ಆಡಳಿತಾರೂಢ ಪಕ್ಷವು ಸಮಾಜದಲ್ಲಿನ ಮುಸಲ್ಮಾನ ದ್ವೇಷವನ್ನು ಬಹಳ ಜಾಣತನದಿಂದ ಬಳಸುತ್ತಿದೆಯಂತೆ !’ – ನಟ ನಾಸಿರುದ್ದೀನ್ ಶಾ

ನಟ ನಾಸಿರುದ್ದೀನ್ ಶಾ

ಮುಂಬಯಿ – ಪ್ರಸ್ತುತ ಸಮಯ ನಿಜವಾಗಿಯೂ ಕಳವಳಕಾರಿಯಾಗಿದೆ. ಪ್ರಸ್ತುತ, ‘ಮುಸಲ್ಮಾನರ ದ್ವೇಷ’ ವಿದ್ಯಾವಂತರಲ್ಲೂ ‘ಫ್ಯಾಶನ್’ ಆಗಿ ಮಾರ್ಪಟ್ಟಿದೆ. (ನಂಬುವಂತೆ ಸುಳ್ಳು ಹೇಳಿ ಎಂಬ ವೃತ್ತಿಯ ಶಾ ! ಈ ದೇಶದಲ್ಲಿ ಹಿಂದೂದ್ವಷವೇ ನಿಜವಾದ ಅರ್ಥದಲ್ಲಿ ‘ಫ್ಯಾಶನ್’ ಆಗಿದೆ, ಇದು ಯಾರ ಬೇಕಾದರೂ ಹೇಳುವರು ! – ಸಂಪಾದಕರು) ಆಡಳಿತಾರೂಢ ಪಕ್ಷವು ಅದನ್ನು ಬಹಳ ಜಾಣತನದಿಂದ ಬಳಸುತ್ತಿದೆ. ಎಂದು ನಸಿರುದ್ದಧಿನ್ ಶಾ ಇವರು ವಿಷಕಾರಿದ್ದಾರೆ. ‘ಇಂಡಿಯನ್ ಎಕ್ಸ್ ಪ್ರೆಸ್’ನಲ್ಲಿ ಈ ಕುರಿತ ಸುದ್ದಿ ಪ್ರಕಟವಾಗಿದೆ.

ಇದರಲ್ಲಿ ನಾಸಿರುದ್ದೀನ್ ಶಾ ಅವರು, ನಾವು (ಮುಸ್ಲಿಮರು) ಜಾತ್ಯತೀತತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುತ್ತೇವೆ, ಹಾಗಾದರೆ ನೀವು ಎಲ್ಲದರಲ್ಲೂ ಧರ್ಮವನ್ನು ಏಕೆ ತರುತ್ತೀರಿ ? ಚುನಾವಣೆಯಲ್ಲಿ ಮತ ಗಳಿಸಲು ಮಾತ್ರ ‘ಇಸ್ಲಾಂದ್ವೇಷದ’ ಬಳಕೆಯಾಗುತ್ತಿದೆ. ಸಮಾಜದಲ್ಲಿ ತಪ್ಪು ಮಾಹಿತಿ ಹರಡಲು ಕೆಲವು ಚಲನಚಿತ್ರಗಳು ಮತ್ತು ಕಾರ್ಯಕ್ರಮಗಳನ್ನು ಸಾಧನವಾಗಿ ಬಳಸಲಾಗುತ್ತಿದೆ. ಮತ ಸೆಳೆಯಲು ಧರ್ಮವನ್ನು ಬಳಸಿಕೊಳ್ಳುವ ರಾಜಕಾರಣಿಗಳಿಗೆ ಚುನಾವಣಾ ಆಯೋಗ ಮೂಕ ಪ್ರೇಕ್ಷಕರಾಗಿ ಪರಿಣಮಿಸಿದೆ. (ಚುನಾವಣಾ ಆಯೋಗವನ್ನು ಈ ರೀತಿ ಟೀಕಿಸುವುದು ಕಾನೂನುಬದ್ಧವೇ? ಚುನಾವಣಾ ಆಯೋಗ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆಯೇ? – ಸಂಪಾದಕರು) ಮುಸ್ಲಿಂ ಮುಖಂಡರೊಬ್ಬರು ‘ಅಲ್ಲಾ ಹು ಅಕ್ಬರ್’ ಎಂದು ಮತ ಕೇಳಿದರೆ, ಎಷ್ಟು ದೊಡ್ಡ ಗಲಾಟೆ ಆಗುತ್ತಿತ್ತು ? ಒಂದಲ್ಲ ಒಂದು ದಿನ ಜನರನ್ನು ವಿಭಜಿಸುವ ಈ ಧರ್ಮದ ಎಳೆ ದೂರವಾಗಲಿ ಎಂದು ಅನಿಸುತ್ತದೆ. ಪ್ರಧಾನಿಗಳು ಜನರ ಮುಂದೆ ಹೋಗಿ ಇಂತಹ ಮಾತುಗಳನ್ನು ಹೇಳಿ ಸೋತಿದ್ದಾರೆ. ಹಾಗಾಗಿ ರಾಜಕೀಯದಲ್ಲಿ ಧರ್ಮದ ಪ್ರಭಾವ ನಿಲ್ಲಲಿ ಎಂದು ಆಶಿಸುತ್ತೇನೆ; ಆದರೆ ಈಗಲೂ ಮುಸ್ಲಿಂ ದ್ವೇಷ ನಡೆಯುತ್ತಿದೆ. ಈ ಸರಕಾರ ಬುದ್ಧಿವಂತಿಕೆಯಿಂದ ಈ ಆಟವನ್ನು ಆಡಿದೆ. (ಇಷ್ಟು ವರ್ಷಗಳ ಕಾಲ ಕಾಂಗ್ರೆಸ್ ಮುಸ್ಲಿಮರ ಒಲೈಕೆ ಮಾಡಿ ಮತಗಳನ್ನು ಪಡೆದಿತ್ತು. ಧರ್ಮದ ಆಧಾರದ ಮೇಲೆ ಲಾಭಗಳು ಸಿಗುತ್ತಿರುವಾಗ ನಾಸಿರುದ್ದೀನ್ ಶಾ ಧರ್ಮವನ್ನು ಏಕೆ ನೆನಪಿಸಿಕೊಳ್ಳಲಿಲ್ಲ ? – ಸಂಪಾದಕರು)

ಸಂಪಾದಕೀಯ ನಿಲುವು

  • ಜಗತ್ತಿನ ಯಾವ ಮುಸ್ಲಿಂ ರಾಷ್ಟ್ರದಲ್ಲೂ ಭಾರತದಲ್ಲಿ ‘ಅಲ್ಪಸಂಖ್ಯಾತ’ರಿಗೆ ಸಿಗುವ ಇಂತಹ ಸೌಲಭ್ಯಗಳನ್ನು ಅನುಭವಿಸುತ್ತಿದ್ದರೂ ಹಿಂದೂಗಳನ್ನು ದ್ವೇಷಿಸುವ ಮುಸ್ಲಿಮರು ಕಾಣಸಿಗುವುದಿಲ್ಲ !
  • ಎಷ್ಟು ಹಿಂದು ಕಲಾವಿಧರು ಹಿಂದೂಗಳ ಮೇಲಿನ ಲವ್ ಜಿಹಾದ್, ಹಿಂದೂತ್ವನಿಷ್ಟರ ಹತ್ಯೆ, ಧಾರ್ಮಿಕ ಮೆರವಣಿಗೆಗಳ ಮೇಲಿನ ದಾಳಿ ಇತ್ಯಾದಿಗಳ ವಿರುದ್ಧ ಧ್ವನಿ ಎತ್ತುತ್ತಾರೆ ?