ಮಣಿಪುರ ಹಿಂಸಾಚಾರ ಚರ್ಚಗಳ ರಕ್ತರಂಜಿತ ಸ್ವಾರ್ಥಕಾರಣ, ಅರ್ಥಕಾರಣ ಮತ್ತು ರಾಜಕಾರಣ

ಸದ್ಯ ಮಣಿಪುರ ರಾಜ್ಯವು ಹಿಂಸಾಚಾರದ ಜ್ವಾಲಾಗ್ನಿಯಲ್ಲಿ ಉರಿಯುತ್ತಿದೆ. ಮಣಿಪುರದ ವೈಷ್ಣವ ಹಿಂದೂಗಳಾಗಿರುವ ಮೈತಿ ಸಮುದಾಯಕ್ಕೆ (ಶೇ. ೫೩ ಜನಸಂಖ್ಯೆ) ಪರಿಶಿಷ್ಟ ಪಂಗಡ ಅಂದರೆ ‘ಟ್ರೈಬಲ್ ಸ್ಟೇಟಸ್ ಸಿಗಬೇಕು ಎಂದು ಕಳೆದ ಎಷ್ಟೋ ವರ್ಷಗಳಿಂದ ರಾಜ್ಯದಲ್ಲಿ ಪ್ರತಿಭಟನೆಗಳು ಮತ್ತು ಕಾನೂನುರೀತ್ಯಾ ಚಳುವಳಿಗಳು ನಡೆಯುತ್ತಿದೆ. ಇತರ ಎರಡು ಸಮುದಾಯಗಳಾದ ತಾಂಗಸುಲ ಮತ್ತು ಇತರ ನಾಗಾ ಉಪಜಾತಿ (ಶೇ.೨೪ ಜನಸಂಖ್ಯೆ) ಮತ್ತು ಕುಕಿ ಝೋಮಿ (ಕುಕಿ-ಚೀನ-ಮಿಝೋ ಜಾತಿಯ ಗುಂಪು ಶೇ. ೧೬ ರಷ್ಟು ಜನಸಂಖ್ಯೆ) ಈ ೨ ಕ್ರೈಸ್ತ ಬಹುಸಂಖ್ಯಾತವಿರುವ ಜಾತಿಗಳು ಈಗಾಗಲೇ ಪರಿಶಿಷ್ಟ ಪಂಗಡದ ಗುಂಪಿನಡಿ ಬರುತ್ತಾರೆ. ಇದರಿಂದ ಮೈತಿ ವೈಷ್ಣವ ಹಿಂದೂ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಚರ್ಚಗಳು ಹಾಗೂ ಎಲ್ಲ ಕ್ರೈಸ್ತ ಸಮುದಾಯದ ಜನರು ಅತ್ಯಧಿಕವಾಗಿ ವಿರೋಧಿಸುತ್ತಿದ್ದಾರೆ.

೧. ವೈಷ್ಣವ ಮೈತಿ ಹಿಂದೂಗಳ ಬಗ್ಗೆ…

ಮಣಿಪುರದ ವೈಷ್ಣವ ಹಿಂದೂಗಳ ಸಂಸ್ಕೃತಿಯು ಇತರ ಹಿಂದೂ ಸಂಸ್ಕೃತಿಯಂತೆಯೇ ಸಾವಿರಾರು ವರ್ಷಗಳ ಉನ್ನತ ಸಂಸ್ಕೃತಿಯನ್ನು ಹೊಂದಿದೆ. ಕೃಷ್ಣಭಕ್ತಿಯೊಂದಿಗೆ ಜೀವಿಸುವ ಇವರು ಅತ್ಯಂತ ಪ್ರಬುದ್ಧ, ಉನ್ನತಿ ಹೊಂದಿರುವ ಜಾತಿ ಯಾಗಿದ್ದು, ಬ್ರಿಟಿಷ ಸರಕಾರದ ಸಮರ್ಥನೆ ಹೊಂದಿರುವ ಚರ್ಚಗಳ ೨೦೦ ವರ್ಷಗಳ ಎಲ್ಲ ಗೂಂಡಾಗಿರಿಯನ್ನು ಮೈತಿ ಹಿಂದೂಗಳು ಇಲ್ಲಿಯ ವರೆಗೆ ಸಹಿಸಿಕೊಂಡಿದ್ದಾರೆ. ಅವರು ೨೦ ವರ್ಷಗಳ ಹಿಂದೆ ತಮ್ಮ ಸ್ವಂತ ಭಾಷೆಯ ಲಿಪಿಯನ್ನು ರಚಿಸಿ ಈಗ ಅದನ್ನು ದೈನಂದಿನ ಉಪಯೋಗಕ್ಕೆ ತಂದಿದ್ದಾರೆ. ನರನಾಡಿಗಳಲ್ಲಿ ಹರಿಯುತ್ತಿರುವ ಕೃಷ್ಣಭಕ್ತಿ, ಗ್ರಾಮಗ್ರಾಮಗಳಲ್ಲಿ ನೆಲೆಯೂರಿರುವ ಕ್ರೀಡಾ ಸಂಸ್ಕೃತಿ ಮತ್ತು ಹೋರಾಡುವ ಕ್ಷಾತ್ರವೃತ್ತಿಯ ಕಾರಣಗಳಿಂದ ಸಂಪೂರ್ಣ ಪೂರ್ವಾಂಚಲದಲ್ಲಿ ಮಣಿಪುರದ ಹಿಂದೂಗಳು ವಿಭಿನ್ನವಾಗಿ ಎದ್ದು ಕಾಣಿಸುತ್ತಾರೆ. ಭಾರತೀಯ ಕ್ರೀಡಾ ಇತಿಹಾಸದಲ್ಲಿ ಈ ಪುಟ್ಟ ರಾಜ್ಯವು ತನ್ನ ಜನ ಸಂಖ್ಯೆಯ ತುಲನೆಯಲ್ಲಿ ಸಾವಿರ ಪಟ್ಟು ಹೆಚ್ಚು ಪದಕಗಳನ್ನು ಗಳಿಸಿದೆ

೨. ಮೈತಿ ಹಿಂದೂಗಳನ್ನು ಪರಿಶಿಷ್ಟ ಪಂಗಡದ ಸ್ಥಾನಮಾನ ಪಡೆಯಲು ಅವಕಾಶ ನೀಡದಿರುವುದರ ಹಿಂದಿನ ಕಾರಣ

‘ಇಂತಹ ಮೈತಿ ಹಿಂದೂಗಳಿಗೆ ಪರಿಶಿಷ್ಟ ಪಂಗಡದ ಸ್ಥಾನಮಾನ ದೊರಕಿ ತಮ್ಮ ಮೀಸಲಾತಿಯಲ್ಲಿ ಅವರೂ ಪಾಲುದಾರರು ಆಗಬಾರದು ಮತ್ತು ಮೀಸಲಾತಿಯಿಂದ ವಂಚಿತರಾಗಿರುವ ಮೈತಿ ಹಿಂದೂಗಳು ತಮ್ಮ ಮತಾಂತರದ ಜಾಲದಲ್ಲಿ ನಿಧಾನವಾಗಿ ಸಿಲುಕಬೇಕು ಎಂದು ಚರ್ಚ ಮುಖಂಡತ್ವದ ಸಂಘಟನೆಗಳು ನಿರಂತರವಾಗಿ ಮೈತಿ ಹಿಂದೂಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬಾರದು ಎಂದು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾರೆ. ಗಮನಿಸಬೇಕಾದ ಅಂಶವೆಂದರೆ ಮಣಿಪುರ ಸಂಸ್ಥಾನ ಭಾರತದಲ್ಲಿ ವಿಲೀನಗೊಳ್ಳುವಾಗ ಮೈತಿಗಳು ಪರಿಶಿಷ್ಟ ಜಾತಿ ಪಂಗಡದ ಮೀಸಲಾತಿಯನ್ನು ಹೊಂದಿದ್ದರು. ಆದರೆ ಚರ್ಚಗಳ ಒತ್ತಡಕ್ಕೆ ಸಿಲುಕಿ ಆಗಿನ ಕೇಂದ್ರ ಸರಕಾರವು ಆ ಮೀಸಲಾತಿಯನ್ನು ಹಿಂಪಡೆದು ಕೇವಲ ಕುಕಿ-ನಾಗಾ ಇವರಿಗೆ ಮಾತ್ರ ಮೀಸಲಾತಿಯನ್ನು ಖಾಯಂಗೊಳಿಸಿತ್ತು.

೩. ಇಂಫಾಲ ಉಚ್ಚ ನ್ಯಾಯಾಲಯವು ನೀಡಿದ ಆದೇಶ ಮೈತಿ ಹಿಂದೂಗಳಿಗೆ ಪರಿಶಿಷ್ಟ ಪಂಗಡ (ಶೆಡ್ಯೂಲ್ಡ ಟ್ರೈಬ್ಸ್)

ಗುಂಪಿನಲ್ಲಿ ಸೇರಿಸುವ ಸಂದರ್ಭದಲ್ಲಿ ೨೦೧೨ ರಲ್ಲಿ ದಾಖಲಿಸಲಾಗಿದ್ದ ಮನವಿಯ ಮೇಲೆ ಇತ್ತೀಚೆಗಷ್ಟೇ ನಡೆದ ಆಲಿಕೆಯ ಸಂದರ್ಭದಲ್ಲಿ ಇಂಫಾಲ ಉಚ್ಚ ನ್ಯಾಯಾಲಯವು ಮಣಿಪುರರಾಜ್ಯ ಸರಕಾರಕ್ಕೆ ಆದೇಶವನ್ನು ನೀಡಿದ್ದು, ಆ ಆದೇಶದಲ್ಲಿ ‘ರಾಜ್ಯ ಸರಕಾರವು ಮೇ ೨೯ ರ ವರೆಗೆ ಕೇಂದ್ರೀಯ ಜಾತಿಗಣತಿ ಸಚಿವಾಲಯಕ್ಕೆ ಮೈತಿ ಸಮುದಾಯದವನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲು ಶಿಫಾರಸ್ಸು ಸಲ್ಲಿಸಬೇಕು ಎಂದು ಹೇಳಿದೆ. ಈ ಆದೇಶದಿಂದ ಚರ್ಚಗಳು ವಿಚಲಿತಗೊಂಡವು. ಈ ಆದೇಶದ ವಿರುದ್ಧ ೩ ಮೇ ೨೦೨೩ ರಂದು ಮಣಿಪುರದ ಎಲ್ಲ ೧೦ ಪರಿಶಿಷ್ಟ ಜಾತಿಬಹುಸಂಖ್ಯಾತವಿರುವ ಜಿಲ್ಲೆಗಳಲ್ಲಿ ‘ಟ್ರೈಬಲ ಸಾಲಿ ಡ್ಯಾರಿಟಿ ಮಾರ್ಚ (ಆದಿವಾಸಿ ಏಕತಾ ಮೋರ್ಚಾ) ಆಯೋಜಿಸಲಾಗಿತ್ತು.

೪. ರಾಜ್ಯಸರಕಾರದ ಅತಿಕ್ರಮಣದ ವಿರುದ್ಧ ಚರ್ಚಗಳ ಕ್ರಮ

ಹಿಂದಿನ ವಾರ ಮಣಿಪುರದ ಮುಖ್ಯಮಂತ್ರಿ ಬೀರೇನ ಸಿಂಗ ಇವರ ಚುರಾಚಾಂದಪುರ ಜಿಲ್ಲೆಯ ಪ್ರವಾಸ ಕಾರ್ಯಕ್ರಮದ ಮೊದಲು ‘ಟ್ರೈಬಲ ಫೋರಂನವರು (ಆದಿವಾಸಿ ವೇದಿಕೆ) ಮುಖ್ಯಮಂತ್ರಿಗಳ ಕಾರ್ಯಕ್ರಮದ ನಿಮಿತ್ತ ನಿರ್ಮಿಸಲಾಗಿದ್ದ ವ್ಯಾಸಪೀಠ ಮತ್ತು ಇತರ ಕಟ್ಟಡಗಳನ್ನು ಸುಟ್ಟು ಬೂದಿ ಮಾಡಿದರು. ಹಾಗೆಯೇ ಜಿಲ್ಲೆಯಲ್ಲಿ ಸಂಪೂರ್ಣ ನಿಷೇಧ (ಟೋಟಲ ಶಟ್‌ಡೌನ) ಘೋಷಿಸಿದರು. ಕಳೆದ ಕೆಲವು ತಿಂಗಳುಗಳಿಂದ ರಾಜ್ಯ ಸರಕಾರ ಮೀಸಲು ಅರಣ್ಯಪ್ರದೇಶದಲ್ಲಿ ಆಗಿರುವ ಅತಿಕ್ರಮಣವನ್ನು ಬಲಪ್ರಯೋಗವನ್ನು ಉಪಯೋಗಿಸಿ ತೆರವುಗೊಳಿಸುತ್ತಿದೆ; ಏಕೆಂದರೆ ಇಲ್ಲಿ ಮ್ಯಾನ್ಮಾರನ ಚೀನಾ ಸಮುದಾಯದ ಭಯೋತ್ಪಾದಕರ ಗುಂಪು ಮಣಿಪುರ ಕುಕಿಗಳ ಹೆಸರಿನಲ್ಲಿ ತಮ್ಮ ಸ್ವಂತ ನೆಲೆಯನ್ನು ಸ್ಥಾಪಿಸುತ್ತಿದ್ದಾರೆ. ಇವರ ಮಾಧ್ಯಮದಿಂದ ಚೀನಾ ಮತ್ತು ಕುಕಿ ಭಯೋತ್ಪಾದಕರು ಈ ಅರಣ್ಯ ಪ್ರದೇಶದಲ್ಲಿ ಗಾಂಜಾ, ಅಫೀಮು ಮುಂತಾದ ಅಮಲು ಪದಾರ್ಥಗಳ ವ್ಯಾಪಾರ ಮಾಡುವುದರ ಜೊತೆಗೆ ಸಂಪೂರ್ಣ ಭಾರತದಲ್ಲಿ ಕಳ್ಳಸಾಗಾಣಿಕೆ ಮಾಡುತ್ತಾರೆ. ಈ ಕಾರಣದಿಂದ ಸದ್ಯ ಮಣಿಪುರ ಮತ್ತು ಮಿಝೋರಾಮ್ ರಾಜ್ಯಗಳು ಭಾರತದ ಅಮಲು ಪದಾರ್ಥಗಳ ವ್ಯಾಪಾರದ ಪ್ರಮುಖ ಉಗಮಸ್ಥಾನವೆಂದು ಹೆಸರು ಪಡೆಯುವಲ್ಲಿ ಪ್ರಮುಖ ಕಾರಣವಾಗಿದೆ. ಮ್ಯಾನ್ಮಾರ ಸರಕಾರದ ವಿರುದ್ಧ ಸಶಸ್ತ್ರ ಹೋರಾಟ ನಡೆಸುವ ಕ್ರೈಸ್ತ ಭಯೋತ್ಪಾದಕ ಗುಂಪು ಮ್ಯಾನ್ಮಾರ ಸೈನ್ಯದ ಒತ್ತಡದಿಂದ ತಪ್ಪಿಸಿಕೊಂಡು ಮಣಿಪುರದ ಕುಕಿ ಪ್ರದೇಶದಲ್ಲಿ ನುಸುಳಿ ಬರಲು ಅವಕಾಶ ಕೊಡಬಾರದೆಂದು ರಾಜ್ಯ ಸರಕಾರವು ಚಳುವಳಿ ನಡೆಸುತ್ತಿದೆ. ಅದರ ವಿರುದ್ಧ ಚರ್ಚ ಕೂಡ ತನ್ನ ಎಂದಿನ ತಂತ್ರವನ್ನು ಉಪಯೋಗಿಸಿ ಬೆಂಕಿಗೆ ತುಪ್ಪ ಸುರಿಯುತ್ತಿದೆ.

೫. ತ್ರಿಪಕ್ಷೀಯ ಕದನವಿರಾಮದಿಂದ ಹಿಂದೆ ಸರಿದ ರಾಜ್ಯ ಸರಕಾರ

ಮಣಿಪುರ ವಿಧಾನಸಭೆಯಲ್ಲಿ ಕುಕಿ ಝೋಮಿ ಗುಂಪಿನಿಂದ ಆಯ್ಕೆಯಾಗಿರುವ ೧೦ ಶಾಸಕರಿದ್ದಾರೆ. ಇವರಲ್ಲಿ ಕೆಲವು ಆಡಳಿತಾರೂಢ ಭಾಜಪ ಶಾಸಕರೂ ಇದ್ದಾರೆ. ಆದಾಗ್ಯೂ ಕುಕಿ ಜನರ ‘ಕುಕಿ ನ್ಯಾಷನಲ್ ಆರ್ಮಿ ಮತ್ತು ಜೋಮಿ ಜನರ ‘ಝೋಮಿ ಲಿಬರೇಶನ ಆರ್ಮಿ ರಾಜ್ಯ ಮತ್ತು ಕೇಂದ್ರ ಸರಕಾರದ ನಡುವೆ ಒಂದು ದಶಕದ ಹಿಂದೆ ತ್ರಿಪಕ್ಷೀಯ ಕದನವಿರಾಮದ ಒಪ್ಪಂದವಾಗಿತ್ತು. ಈ ಹಳೆಯ ತ್ರಿಪಕ್ಷೀಯ ಕದನ ವಿರಾಮ ಒಪ್ಪಂದದಿಂದ ರಾಜ್ಯ ಸರಕಾರವು ಮಾರ್ಚ ೨೦೨೩ ರಲ್ಲಿ ಹಿಂದೆ ಸರಿದ ಕಾರಣ ಒತ್ತಡ ಹೆಚ್ಚಾಗುತ್ತಿತ್ತು. ಇಂಫಾಲ ಉಚ್ಚ ನ್ಯಾಯಾಲಯದ ಆದೇಶವು ಇದಕ್ಕೆ ಮತ್ತೊಂದು ಕಾರಣವಾಯಿತು ಮತ್ತು ಹಿಂಸಾಚಾರ ಭುಗಿಲೆದ್ದಿತು.

೬. ಚರ್ಚನ ಪಿತೂರಿ ಮತ್ತು ಜನಸಾಮಾನ್ಯರಿಗೆ ತಟ್ಟಿದ ಬಿಸಿ

ಚರ್ಚಗಳು ಮ್ಯಾನ್ಮಾರ-ಚೀನಾ ವಂಶದ ಭಯೋತ್ಪಾದಕ ಸಂಘಟನೆಗಳ ಅಮಲು ಪದಾರ್ಥ ಮತ್ತು ಶಸ್ತ್ರಾಸ್ತ್ರ ವ್ಯಾಪಾರದ ಹಿತಕ್ಕಾಗಿ ಮತ್ತು ಮಣಿಪುರದ ಮೈತಿಗಳಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ಸಿಗಬಾರದು ಎಂದು ಈ ಹಿಂಸಾಚಾರ ಭುಗಿಲೇಳುವಂತೆ ಮಾಡಿದರು. ಪ್ರಾರಂಭದಲ್ಲಿ ಪರಿಶಿಷ್ಟ ಪಂಗಡದ ಬಹುಸಂಖ್ಯಾತ ಪರ್ವತಗಳ ಜಿಲ್ಲೆಯಿಂದ ಮೈತಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಕಾರಣ ಮೈತಿ ಹಿಂದೂಗಳು ತೀವ್ರ ಮನುಷ್ಯಹಾನಿ ಮತ್ತು ಕಟ್ಟಡ  ಆಸ್ತಿ-ಸಂಪತ್ತುಗಳ ಹಾನಿಯನ್ನು ಸಹಿಸಬೇಕಾಯಿತು. ಅದರ ಬೆಂಕಿ ಕೂಡಲೇ ಮೈತಿ ಹಿಂದೂಬಹುಸಂಖ್ಯಾತ ಇಂಫಾಲ ಕಣಿವೆಗೆ ತಲುಪಿತು ಮತ್ತು ಅಲ್ಲಿಂದ ಕುಕಿ ವಸತಿಗಳು ನೋಡು ನೋಡುತ್ತಲೇ ನಾಶವಾದವು. ಇಲ್ಲಿಯವರೆಗೆ ೪೦ ಸಾವಿರಕ್ಕಿಂತ ಅಧಿಕ ನಾಗರಿಕರು ನಿರಾಶ್ರಿತರಾಗಿದ್ದಾರೆ ಮತ್ತು ಜಮ್ಮೂ-ಕಾಶ್ಮೀರದ ಬಳಿಕ ಹೊರಗಡೆ ನಡೆದಿರುವ ಅತ್ಯಧಿಕ ಸೇನೆಯ ನಿಯೋಜನೆ ಕಳೆದ ೮ ದಿನಗಳಲ್ಲಿ ಮಣಿಪುರದಲ್ಲಿ ಆಗಿದೆ. ಮುಂಬಯಿ, ಝಾರಖಂಡ, ಪಂಜಾಬ, ದೆಹಲಿ, ಆಸ್ಸಾಂ ಮುಂತಾದ ಸ್ಥಳಗಳಿಂದ ವಾಯುಸೇನೆಯ ವಿಮಾನಗಳು ಸಮರೋಪಾದಿಯಲ್ಲಿ ಸೇನೆ ಮತ್ತು ಅರೆಸೇನಾಪಡೆಗಳ ೧೨೦ ಕ್ಕಿಂತ ಅಧಿಕ ಬೆಟಾಲಿಯನ್ಸಗಳನ್ನು ಮಣಿಪುರಕ್ಕೆ ಕರೆತಂದಿವೆ ಮತ್ತು ಇಂದಿಗೂ ಹೊಸ ಬೆಟಾಲಿಯನ್‌ಗಳನ್ನು ಅಲ್ಲಿ ಪ್ರತಿದಿನ ನಿಯೋಜಿಸಲಾಗುತ್ತಿದೆ.

೭. ಚರ್ಚಗಳ ಬಾಯಿ ಬಡಿದುಕೊಳ್ಳುವಿಕೆ

ಮೊದಲು ಬೆಂಕಿ ಹಚ್ಚುವುದು ಮತ್ತು ಬಳಿಕ ನಾವು ಸಂತ್ರಸ್ತರು ಎಂದು ಕೂಗಾಡುವುದು ಚರ್ಚಗಳ ಮತ್ತು ಗೂಂಡಾ ಪ್ರವೃತ್ತಿಯ ಕ್ರೈಸ್ತ ಮುಖಂಡರ ಹಳೆಯ ರೂಢಿಯಾಗಿದೆ. ಯಾವಾಗ ಗುಡ್ಡಗಾಡು ಜಿಲ್ಲೆಗಳಲ್ಲಿರುವ ಮೈತಿ ಹಿಂದೂಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು, ನಿರಾಶ್ರಿತರಾಗುತ್ತಿದ್ದರೋ, ಆಗ ಚರ್ಚ ಇದಕ್ಕೆ ‘ಎಥ್ನಿಕ್ ಕಾನ್ಫ್ಲಿಕ್ಟ ಎಂದರೆ ‘ಸಾಂಪ್ರದಾಯಿಕ ಸಂಘರ್ಷ ಎಂದು ಹೇಳುತ್ತಿದ್ದರು. ಈಗ ಯಾವಾಗ ಮೈತಿ ಹಿಂದೂಗಳು ಇಂಫಾಲ ಕಣಿವೆಯಲ್ಲಿ ಚರ್ಚ ಮತ್ತು ಕ್ರೈಸ್ತ ಸಮುದಾಯದವರಿಗೆ ಪ್ರತ್ಯುತ್ತರ ನೀಡಿದರೋ, ಆಗ ‘ಟ್ರೈಬಲ ಚರ್ಚ ಫೋರಮ್ ಮಣಿಪುರ, ‘ಕೆಥೊಲಿಕ ಬಿಶಪ್ಸ ಕಾನ್ಫರನ್ಸ ಆಫ್ ಇಂಡಿಯಾ ಮತ್ತು ‘ಕೌನ್ಸಿಲ್ ಆಫ್ ಬ್ಯಾಪ್ಟಿಸ್ಟ ಚರ್ಚ ಇನ್ ನಾರ್ಥ ಈಸ್ಟ ಇಂಡಿಯಾ ಇವೆಲ್ಲವೂ ಇತ್ತೀಚೆಗೆ ತಮ್ಮ ತಮ್ಮಲ್ಲಿಯೇ ಹೊಡೆದಾಡುವ ಕ್ರೈಸ್ತ ಸಂಘಟನೆ ಗಳು ‘ಕ್ರಿಶ್ಚಿಯನ್ ಪರ್ಸಿಕ್ಯುಶನ್ ಅಂದರೆ ‘ಕ್ರೈಸ್ತ ಸಮುದಾಯ ದವರ ಮೇಲೆ ಮಣಿಪುರದಲ್ಲಿ ಸಾಮೂಹಿಕ ಅತ್ಯಾಚಾರ ಆಗುತ್ತಿದೆಯೆಂದು ಕೂಗಾಡುತ್ತಿದ್ದಾರೆ. ಆದಷ್ಟು ಬೇಗನೇ ಜಾಗತಿಕ ಕ್ರೈಸ್ತ ಸಮುದಾಯದವರು ಇದರಲ್ಲಿ ಧುಮುಕಿ ಅಭಿಯಾನವನ್ನು ಪ್ರಾರಂಭಿಸಬಹುದು.

೮. ಚರ್ಚಗಳ  ಷಡ್ಯಂತ್ರ ಬಯಲು ಮಾಡುವ ಅವಶ್ಯಕತೆ

ಬುದ್ಧಿಸ್ಟ ಆಡಳಿತದ ವಿರುದ್ಧ ಹೋರಾಡುವ ‘ಮ್ಯಾನ್ಮಾರ-ಚೀನಾ ವಂಶದ ಕ್ರೈಸ್ತ ಭಯೋತ್ಪಾದಕ ಸಂಘಟನೆ ತನ್ನ ಮಣಿಪುರದ ಅನಧಿಕೃತ ಅಮಲು ಪದಾರ್ಥಗಳ ವ್ಯಾಪಾರ ಮತ್ತು ‘ಮಿಝೊ-ಮಣಿಪುರಿ- ಮ್ಯಾನ್ಮಾರ ಕ್ರಿಶ್ಚಿಯನ್ ಭಯೋತ್ಪಾದಕ ಸಂಘಟನೆಯು ಸಂಪೂರ್ಣ ಭಾರತದಲ್ಲಿ ಹೆಣೆದಿರುವ ಅಮಲು ಪದಾರ್ಥಗಳ ವ್ಯಾಪಾರದ ಸುಭದ್ರ ಜಾಲವನ್ನು ರಕ್ಷಿಸುವುದು ಮತ್ತು ಮೈತಿ ವೈಷ್ಣವ ಹಿಂದೂಗಳಿಗೆ ಪರಿಶಿಷ್ಟ ಜಾತಿಪಂಗಡದ ಮೀಸಲಾತಿಯನ್ನು ನಿರಾಕರಿಸಿ ಅವರನ್ನು ಮತಾಂತರಿಸಲು ಅನುಕೂಲವಾಗಿರುವ ವಾತಾವರಣವನ್ನು ಸಿದ್ಧಗೊಳಿಸಲು ಚರ್ಚ ಈ ಭೀಕರ ರಕ್ತರಂಜಿತ ಆಟವಾಡುತ್ತಿದೆ. ಭಾರತದ  ಇನ್ನುಳಿದ ಪ್ರದೇಶಗಳಲ್ಲಿ ಶಿಕ್ಷಣ, ಆರೋಗ್ಯ, ಮಾನವತೆಯ ಶ್ವೇತವರ್ಣದ ಬುರ್ಖಾದಲ್ಲಿ ಅಲೆದಾಡುವ ಪಾದ್ರಿ, ಸಿಸ್ಟರ್ಸಗಳು ಅತ್ಯಂತ ಕೀಳು ಮಟ್ಟದ ಕಪ್ಪು, ಕಠೋರ ಹೃದಯದ ಮತ್ತು ಸಮಾಜದ್ರೋಹಿ ಅಪರಾಧಿಗಳಾಗಿದ್ದಾರೆ. ಶಸ್ತ್ರಾಸ್ತ್ರ, ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ ಮತ್ತು ಪ್ರತ್ಯೇಕತಾವಾದಿ ಭಯೋತ್ಪಾದಕ ಗುಂಪುಗಳನ್ನು ಭಾರತೀಯ ಸೈನ್ಯದಿಂದ ರಕ್ಷಿಸಲು ಮಾನವಾಧಿಕಾರ ಉಲ್ಲಂಘನೆಯ ಹೆಸರಿನ ಗುರಾಣಿಯನ್ನು ಪೂರೈಸುವುದು ಮತ್ತು ಬಡ ಹಿಂದೂಗಳನ್ನು ಮತಾಂತರಿಸುವುದು ಇದು ಅವರ ನೈಜ ಉದ್ಯೋಗವಾಗಿದೆ. ಭಾರತೀಯರು ಈ ವಿಷಯದಲ್ಲಿ ಜಾಗರೂಕರಾಗಿದ್ದು ಅವರ ಈ ಷಡ್ಯಂತ್ರ (ಅಜೆಂಡಾ) ವನ್ನು ಸಾಧ್ಯವಿರುವ ಎಲ್ಲ ಮಾಧ್ಯಮಗಳ ಮೂಲಕ ಜಗತ್ತಿನ ಎದುರಿಗೆ ಬಹಿರಂಗಪಡಿಸಬೇಕಾಗಿದೆ.

– ಶ್ರೀ. ವಿನಯ ಜೋಶಿ (ಆಧಾರ: ಇನ್ಸಟಿಟ್ಯೂಟ್ ಫಾರ್ ಕಾನ್ಫಫ್ಲಿಕ್ಟ ರಿಸರ್ಚ ಅಂಡ್ ರಿಸೊಲ್ಯೂಶನ್ ಈ ಜಾಲತಾಣ ೭.೫.೨೦೨೩)