ಹೊಸ ಸಂಸತಭವನದಲ್ಲಿನ `ಅಖಂಡ ಭಾರತ’ದ ಚಿತ್ರಕ್ಕೆ ಭಾರತೀಯರಿಂದ ಸ್ವಾಗತ !

ನವದೆಹಲಿ – ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇತ್ತೀಚೆಗೆ ಹೊಸ ಸಂಸತಭವನದ ಉದ್ಘಾಟನೆ ಮಾಡಿದರು. ಇಲ್ಲಿನ ಗೋಡೆಗಳ ಮೇಲೆ ಬಿಡಿಸಲಾದ ಒಂದು ಚಿತ್ರದಲ್ಲಿ `ಅಖಂಡ ಭಾರತ’ದ ಸಂಕಲ್ಪನೆಯನ್ನು ದರ್ಶಿಸಲಾಗಿದ್ದು ಈ ಚಿತ್ರವು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರಿತವಾಗುತ್ತಿದೆ. ಇದನ್ನು ಅನೇಕರು ಸ್ವಾಗತಿಸಿದ್ದಾರೆ.

1. ಅಖಂಡ ಭಾರತದ ಚಿತ್ರದಲ್ಲಿ ಪ್ರಾಚೀನ ಭಾರತದಲ್ಲಿನ ಮಹತ್ವದ ರಾಜ್ಯಗಳು ಹಾಗೂ ನಗರಗಳನ್ನು ತೋರಿಸಲಾಗಿದೆ. ಇದರೊಂದಿಗೆ ಸದ್ಯದ ಪಾಕಿಸ್ತಾನದಲ್ಲಿನ ಆಗಿನ ತಕ್ಷಶಿಲೆಯಲ್ಲಿ ಪ್ರಾಚೀನ ಭಾರತದ ಪ್ರಭಾವವನ್ನು ದರ್ಶಿಸಲಾಗಿದೆ.

2. `ನ್ಯಾಶನಲ್ ಗೆಲರಿ ಆಫ್ ಮಾಡ್ರನ್ ಆರ್ಟ್’ನ ಮಹಾಸಂಚಾಲಕರಾದ ಅದ್ವೈತ ಗಡನಾಯಕರವರು ಮಾತನಾಡುತ್ತ `ನಮ್ಮ ಕಲ್ಪನೆಯು ಪ್ರಾಚೀನ ಕಾಲದಲ್ಲಿನ ಭಾರತೀಯ ವಿಚಾರಗಳ ಪ್ರಭಾವವನ್ನು ಚಿತ್ರಿಸುವುದಾಗಿತ್ತು. ಇದು ಉತ್ತರ-ಪಶ್ಚಿಮ ಪ್ರದೇಶದಲ್ಲಿ ಸದ್ಯದ ಅಫಘಾನಿಸ್ತಾನದಿಂದ ದಕ್ಷಿಣ-ಪೂರ್ವ ಏಷ್ಯಾದ ವರೆಗೆ ಹರಡಿದೆ, ಎಂದು ಹೇಳಿದರು. `ಸಂಸತಭವನದಲ್ಲಿ ಪ್ರದರ್ಶಿತವಾಗಲಿದ್ದ ಕಲಾಕೃತಿಗಳ ಆಯ್ಕೆಯಲ್ಲಿ ಗಡನಾಯಕರವರ ಸಹಭಾಗವಿತ್ತು.

ಪಾಕಿಸ್ತಾನದ ಕೋಪ

ಭಾರತದ ಹೊಸ ಸಂಸತಭವನದಲ್ಲಿ ಅಖಂಡ ಭಾರತದ ಚಿತ್ರವನ್ನು ಹಚ್ಚಿದ ನಂತರ ಪಾಕಿಸ್ತಾನಕ್ಕೆ ಕೋಪ ಬಂದಿದೆ. ಭಾರತವು ಪಾಕಿಸ್ತಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಭಯ ನಿರ್ಮಾಣವಾಗುತ್ತಿರುವುದಾಗಿ ಅಲ್ಲಿನ ಜನತೆಯು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ. ಅನೇಕ ಪತ್ರಕರ್ತರೂ ಈ ಬಗ್ಗೆ ಲೇಖನಗಳನ್ನು ಬರೆದಿದ್ದಾರೆ. ಪಾಕಿಸ್ತಾನವನ್ನು ಭಾರತಕ್ಕೆ ಎಂದಿಗೂ ನೀಡುವುದಿಲ್ಲ, ಬದಲಾಗಿ `ಗಝವಾ-ಎ-ಹಿಂದ್’ (ಭಾರತದ ಇಸ್ಲಾಮಿಕರಣ) ಮಾಡುವುದಾಗಿ ಹೇಳುತ್ತಿರುವುದು ವಾರ್ತಾವಾಹಿನಿಗಳಲ್ಲಿ ಕಂಡುಬಂದಿದೆ.

ಸಂಪಾದಕರ ನಿಲುವು

ಈಗ ಸರಕಾರವು ಅಖಂಡ ಭಾರತದ ಉದ್ದೇಶವನ್ನು ಆದಷ್ಟು ಬೇಗ ಸಾಕಾರಗೊಳಿಸಬೇಕು, ಎಂಬುದು ಭಾರತೀಯರ ಅಪೇಕ್ಷೆಯಾಗಿದೆ !